ಉತ್ತಮ ಸಮಾಜಕ್ಕಾಗಿ

ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಮ್

0

ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಮ್

ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಮ್ ಹಬ್ಬ ಆಚರಿಸಿದರು. ಗ್ರಾಮದ ಎರಡು ಕಡೆಗಳಲ್ಲಿ ಮುಸ್ಲಿಂ ದೈವದ ವತಿಯಿಂದ ಪಂಝಾಗಳನ್ನು ಪ್ರತಿಷ್ಠಾಪನೆ

ಮಾಡಲಾಗಿತ್ತು. ಭಕ್ತರು ಭಯ-ಭಕ್ತಿಯಿಂದ ಪಂಝಾಗಳಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಪಂಝಾಗಳ ಮೆರವಣಿಗೆ ವೇಳೆ, ಜಾನಪದ ಕಲಾತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು. ಭಕ್ತರು ದೇವರು ಖಾರಿಕ್, ಶೇಂಗಾ ಮತ್ತು ಉತ್ತತ್ತಿ ಹಾರಿಸಿ ತಮ್ಮ ಇಷ್ಟಾರ್ಥ ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಹುಸೇನಸಾಬ್ ಗೂಡುನವರ, ಮುಗುಟಸಾಬ್ ಗೂಡುನವರ, ಬಾಬುಸಾಬ್ ಗೂಡುನವರ, ಜಂಗ್ಲಿಸಾಬ್ ಮಾರೀಹಾಳ, ಸಲೀಮ್ ಹುಣಸೀಕಟ್ಟಿ, ಜಾಫರಸಾಬ್ ಕರ್ನೋಲ್, ರೆಹಮಾನಸಾಬ್ ಮಾರೀಹಾಳ ಮತ್ತಿತರರು ಉಪಸ್ಥಿತರಿದ್ದರು.////

The post ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಮ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.