ಉತ್ತಮ ಸಮಾಜಕ್ಕಾಗಿ

ಹೊಸ ಆಸ್ಪತ್ರೆ ಆರಂಭಿಸದಿದ್ದರೆ ಧರಣಿ – ಕರ್ನಾಟಕ ವಿಕಾಸ ವೇದಿಕೆ

0

ಹೊಸ ಆಸ್ಪತ್ರೆ ಆರಂಭಿಸದಿದ್ದರೆ ಧರಣಿ – ಕರ್ನಾಟಕ ವಿಕಾಸ ವೇದಿಕೆ

ಬೆಳಗಾವಿ: ಗೋಕಾಕನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ೧೦೦ ಹಾಸಿಗೆಯ ಆಸ್ಪತ್ರೆಗೆ ಹಳೆ ಕಟ್ಟಡದಲ್ಲಿರುವ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕು. ಒಂದು ವಾರದಲ್ಲಿ ಹೊಸ ಆಸ್ಪತ್ರೆ ಆರಂಭಿಸದಿದ್ದರೆ ಅಕ್ಟೊಬರ್ ೧ ರಿಂದ ಆಸ್ಪತ್ರೆಯ ಎದುರಿಗೆ ಆಹೋರಾತ್ರಿ ಧರಣಿ ಆರಂಭಿಸುವದಾಗಿ ಉತ್ತರ ಕನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಅವರು, ಆರೋಗ್ಯ ಇಲಾಖೆಯ ಅಧಿಕಾರಿ ಐ.ಪಿ.ಗಡಾದ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದರು. ಅಲ್ಲದೆ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಪ್ಪಸಾಹೇಬ ನರಟ್ಟಿ ಅವರ ಗಮನಕ್ಕೆ ತಂದರು.

ಸುಮಾರು ೨೦ ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಿಸಲಾಗಿದೆ. ೮ ತಿಂಗಳ ಹಿಂದೆಯೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಮುಖ್ಯಮಂತ್ರಿಗಳು ಕಟ್ಟಡವನ್ನು ಉದ್ಘಾಟಿಸಿದ ನಂತರ ಆ ನೂತನ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಿಸುವ ಬದಲು ಕಟ್ಟಡಕ್ಕೆ ಬೀಗ ಹಾಕಿರುವದು ಅಚ್ಚರಿ ಮೂಡಿಸಿದೆ ಎಂದು ವಿವರಿಸಿದರು.

ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಸ್ಥಳದ ಅಭಾವದಿಂದ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಗೆ ಬರುವ ಸುತ್ತಲಿನ ಗ್ರಾಮೀಣ ಪ್ರದೇಶಗಳ ಬಡ ರೋಗಿಗಳೊಂದಿಗೆ ಅಲ್ಲಿನ ವೈದ್ಯರ ವರ್ತನೆಯೂ ಸರಿಯಾಗಿಲ್ಲ. ಹಣ ನೀಡದೇ ಯಾವ ಸೇವೆಯೂ ದೊರೆಯದಂತಹ ಸ್ಥಿತಿ ಅಲ್ಲಿಯ ಸಿಬ್ಬಂದಿಗಳು ನಿರ್ಮಾಣ ಮಾಡಿದ್ದಾರೆ. ಇಲ್ಲದೊಂದು ನೆಪ ಹೇಳಿ ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಗೆ ಕಡಿವಾಣ ಹಾಕಬೇಕು. ಒಂದು ವಾರದಲ್ಲಿ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವದಲ್ಲದೆ ಸೂಕ್ತ ಸಿಬ್ಬಂದಿಗಳು ಮತ್ತು ತಜ್ಞ ವೈದ್ಯರು ಹಾಗೂ ಆಧುನಿಕ ಉಪಕರಣಗಳನ್ನು ಒದಗಿಸುವ ಮೂಲಕ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಈ ಬೇಡಿಕೆಗಳಿಗೆ ಸ್ಪಂಧಿಸಿದ ಗಡಾದ ಅವರು, ಒಂದೆರಡು ದಿನಗಳಲ್ಲಿ ಅಧಿಕಾರಿಗಳೊಂದಿಗೆ ಆಸ್ಪತ್ರೆಯ ಕಟ್ಟಡಕ್ಕೆ ಭೇಟಿ ನೀಡಿ, ಸ್ಥಳಾಂತರದ ಬಗ್ಗೆ ತರ್ತು ಕ್ರಮ ಜರುಗಿಸುವ ಭರವಸೆ ನೀಡಿದರು.
ರಾಜುಗೌಡ ನಿರ್ವಾಣಿ, ಆರ್.ಎಸ್.ದರ್ಗೆ, ಸಚ್ಚಿದಾನಂದ ನಿರ್ವಾಣಿ, ದೀಪಕ ರಾಯಣ್ಣವರ, ಶಹಾಬ್ಬಾಸಖಾನ ಮುಂತಾದವರು ಉಪಸ್ಥಿತರಿದ್ದರು.////

The post ಹೊಸ ಆಸ್ಪತ್ರೆ ಆರಂಭಿಸದಿದ್ದರೆ ಧರಣಿ – ಕರ್ನಾಟಕ ವಿಕಾಸ ವೇದಿಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.