ಉತ್ತಮ ಸಮಾಜಕ್ಕಾಗಿ

ಹೋರಾಟದ ಪದ ಅರ್ಥವೇ ದಂಧೆ : ಸಚಿವ ಎನ್. ಮಹೇಶ್

0

ಹೋರಾಟದ ಪದ ಅರ್ಥವೇ ದಂಧೆ : ಸಚಿವ ಎನ್. ಮಹೇಶ್

ಚಾಮರಾಜನಗರ : ಮುಖ್ಯಮಂತ್ರಿ ಕುಮಾರಸ್ವಾಮಿರವರು ಹಾಸನದಲ್ಲಿ ಬಿಜೆಪಿಯವರ ವರ್ತನೆಯಿಂದ ಬೇಸತ್ತಿರುವ ರಾಜ್ಯದ ಜನತೆ ದಂಗೆ ಏಳಲು ಹೇಳಬೇಕಾಗುತ್ತದೆ ಎಂದು ಹೇಳಿರುವುದು ಅದು ಹೋರಾಟದ ಸಂಕೇತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಚಾಮರಾಜನಗರದಲ್ಲಿ ಹೇಳಿಕೆ ನೀಡಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಎನ್. ಮಹೇಶ್ ಅಭಿಮಾನಿಗಳು ಆಯೋಜಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಎನ್. ಮಹೇಶ್ ಮುಖ್ಯಮಂತ್ರಿಗಳೇ ಸ್ವತಃ ದಂಗೆ ಎನ್ನುವ ಪದಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಆಡಳಿತದಲ್ಲಿ ಅಸಮಧಾನ ಮತ್ತು ಅತೃಪ್ತಿ ಹೊಂದಿದರೆ ಆರು ತಿಂಗಳ ಒಳಗೆ ಸದನದಲ್ಲಿ ಬಹುಮತ ಸಾಭಿತಿಗೆ ವಿರೋಧ ಪಕ್ಷದವರು ಪ್ರಯತ್ನಿಸಬೇಕು ಅದನ್ನುಬಿಟ್ಟು ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಲ್ಲೆ ರಾಜ್ಯದಲ್ಲಿ ಅಶಾಂತಿ ರಾಜಕಾರಣ ಸೃಷ್ಟಿ ಮಾಡಿ ಅಭಿವೃದ್ದಿ ಕೆಲಸ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಲಾಯನಗೊಳ್ಳುವ ಮಾತೇ ಇಲ್ಲಾ, ನಾಳೆ ಹಾಸನದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಚಾಲನೆ ನೀಡುವ ಸಲುವಾಗಿ ಇಂದು ಸಂಜೆಯ ಜೆ.ಡಿ.ಎಸ್ ಶಾಸಕರು ಮತ್ತು ಸಚಿವರಿಗೆ ಹಾಸನಕ್ಕೆ ಬರಲು ಸೂಚನೆ ನೀಡಿದ್ದು, ತಮಗೂ ಆಹ್ವಾನಿಸಲಾಗಿದೆ ಆದ್ದರಿಂದ ಸಂಜೆ ತಾವು ಕೂಡ ಹಾಸನಕ್ಕೆ ತೆರಳುವುದಾಗಿ ಸಚಿವ ಎನ್.ಮಹೇಶ್ ಹೇಳಿದರು.//// ವರದಿ : ರವಿ ಭಗೀರಥ್ , ಚಾಮರಾಜನಗರ

WebTitle : ಹೋರಾಟದ ಪದ ಅರ್ಥವೇ ದಂಧೆ : ಸಚಿವ ಎನ್. ಮಹೇಶ್ – The meaning of the fighting word is downtime

>>> ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ : Chamarajanagar News Kannada | Chamarajanagar News Online

Kannada Politics News

The post ಹೋರಾಟದ ಪದ ಅರ್ಥವೇ ದಂಧೆ : ಸಚಿವ ಎನ್. ಮಹೇಶ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.