ಉತ್ತಮ ಸಮಾಜಕ್ಕಾಗಿ

ರಾಷ್ಟ್ರೀಯ ಮತದಾರರ ದಿನಾಚರಣೆ

0


ಬೆಳಗಾವಿ, ಜನವರಿ 23 ಜನವರಿ 25 ರಂದು “ರಾಷ್ಟ್ರೀಯ ಮತದಾರರ ದಿನಾಚರಣೆ” ಆಚರಿಸಲು ಭಾರತ ಚುನಾವಣಾ ಆಯೋಗ ನವದೆಹಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ನಿರ್ದೇಶನವನ್ನು ನೀಡಿದ್ದಾರೆ.
ಅಂದು ಮುಂಜಾನೆ 11 ಗಂಟೆಗೆ ಸರಕಾರಿ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ಮತದಾರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಹಿಂದವಾಡಿಯ ಆದರ್ಶನಗರದಲ್ಲಿರುವ ಇನ್‍ಸ್ಟಿಟಿಟ್ಯೂಟ್ ಆಫ್ ಮ್ಯಾನೇಜಮೆಂಟ ಎಜ್ಯೂಕೇಶನ್ ರಿಸರ್ಚ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ವಹಿಸುವರು. ಬೆಳಗಾವಿ ಉತ್ತರ ವಲಯ, ಆರಕ್ಷಕ ಮಹಾ ನಿರೀಕ್ಷಕರಾದ ಶ್ರೀ ಕೆ.ರಾಮಚಂದ್ರರಾವ್, ನಗರದ ಪೊಲೀಸ್ ಆಯುಕ್ತರಾದ ಶ್ರೀ ಜಿ.ಕೃಷ್ಣಭಟ್, ಹಿಂದವಾಡಿ ಐ.ಎಂ.ಇ.ಆರ್. ನಿರ್ದೇಶಕರಾದ ಡಾ. ಪುರಷೋತ್ತಮ ಬಂಗ ಅವರು ಮುಖ್ಯಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಶ್ರೀ ಡಿ.ವಾಯ್. ಕುಲಕರ್ಣಿ ಅವರು ಮುಖ್ಯ ಉಪನ್ಯಾಸ ನೀಡುವರು

Leave A Reply

 Click this button or press Ctrl+G to toggle between Kannada and English

Your email address will not be published.