ಉತ್ತಮ ಸಮಾಜಕ್ಕಾಗಿ

0

ಜೆ-ನರ್ಮ ಯೋಜನೆಯಡಿ ನೂತನ ಮಿಡಿ ವಾಹನ ಕಾರ್ಯಾಚರಣೆ
ಬೆಳಗಾವಿ, ಜನವರಿ 19 ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗಕ್ಕೆ ಜೆ-ನರ್ಮ ಯೋಜನೆಯಡಿಯಲ್ಲಿ ಲಭ್ಯವಾಗಿರುವ ನೂತನ ಮಾದರಿಯ ಮಿಡಿ ವಾಹನಗಳನ್ನು ಈಗಾಗಲೇ ನಗರದ ಪ್ರಮುಖ ಜನದಟ್ಟಣೆಯ ಸ್ಥಳಗಳಾದ ಸಿ.ಬಿ.ಟಿ-ಮೋದಗಾ, ಸಿಬಿಟಿ-ಅನಗೋಳ/ವಡಗಾಂವ, ಕೆಸಿಎಸ್-ಅನಗೋಳ/ವಡಗಾಂವ, ಕಾಕತಿ-ಕೆಸಿಎಸ್-ಅನಗೋಳ/ವಡಗಾಂವ, ಸಿಬಿಟಿ-ಮುಚ್ಚಂಡಿ, ಸಿಬಿಟಿ-ಚಂದಗಡ, ಬೆಳಗಾವಿ-ಖಾನಾಪೂರ, ಬೋಗಾರವೇಸ್-ಬೆಳಗುಂದಿ ಮತ್ತು ಬೋಗಾರವೇಸ್-ಉಚಗಾಂವ ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಸದರಿ ನೂತನ ವಾಹನಗಳ ಸೌಲಭ್ಯವನ್ನು ಎಪಿಎಂಸಿ ಮಾರ್ಗದ ಕಡೆಗೆ ಒದಗಿಸುವ ಹಿನ್ನೆಲೆಯಲ್ಲಿ, ಸದರಿ ಮಿಡಿ ವಾಹನಗಳ ಪೈಕಿ 4 ವಾಹನಗಳನ್ನು ಜನವರಿ 17ರಿಂದ ಸಿಬಿಟಿ-ಹಂದಿಗನೂರ ವ್ಹಾಯಾ ಎಪಿಎಂಸಿ,ಕಡೋಲಿ ಮತ್ತು ಮಣ್ಣಿಕೇರಿ ಮಾರ್ಗದಲ್ಲಿ ಕಾರ್ಯಾಚರಣೆಗೆ ನೀಡಲಾಗಿದೆ. ಸದರಿ ವಾಹನಗಳು ಪ್ರತಿ 20 ನಿಮಿಷಗಳ ಅಂತರ(ಪ್ರಿಕ್ವೇನ್ಸಿ) ಯೊಂದಿಗೆ ಪ್ರತಿದಿನ ಒಟ್ಟು 26 ಸುತ್ತುಗಳಿಂದ ಕಾರ್ಯಾಚರಣೆಗೊಳ್ಳುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.