ಉತ್ತಮ ಸಮಾಜಕ್ಕಾಗಿ

ನೀಲಿ ಬಾನಲಿ ರಾರಾಜಿಸಿದ ತಿರಂಗ ದೇಶದ ಬೃಹತ್ ತ್ರಿವರ್ಣ ಧ್ವಜಾರೋಹಣ

110 meters flagstaff; 500 kg The flag of the flag-blue trolley is the largest tricolor flag hoisting in the country

0

ಬೆಳಗಾವಿ: (newsbelgaum)ಭಾರತ ದೇಶದಲ್ಲಿಯೇ ಅತೀ ದೊಡ್ಡದು ಎನ್ನಲಾದ 500 ಕೆ.ಜಿ. ತೂಕದ ಬೃಹತ್ ತ್ರಿವರ್ಣ ಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಇಲ್ಲಿನ ಕೋಟೆಕೆರೆ ಆವರಣದಲ್ಲಿ ಸೋಮವಾರ(ಮಾ.12) ಆರೋಹಣ ಮಾಡುವ ಮೂಲಕ ದೇಶಕ್ಕೆ ಸಮರ್ಪಿಸಿದರು.
110 ಮೀಟರ್ ಎತ್ತರದ ರಾಷ್ಟ್ರ ಧ್ವಜಸ್ತಂಭದ ಮೇಲೆ ತ್ರಿವರ್ಣ ಧ್ವಜವು ಗರಿಬಿಚ್ಚಿ ಪಟಪಟನೇ ಹಾರಾಡುತ್ತಿದ್ದಂತೆ ರೋಮಾಂಚನಗೊಂಡ ಅಲ್ಲಿ ನೆರೆದಿದ್ದ ಸಾವಿರಾರು ಜನರು ‘ಬೋಲೋ ಭಾರತ ಮಾತಾ ಕೀ ಜೈ’ ಘೋಷಣೆ ಮೊಳಗಿಸುವ ಮೂಲಕ ದೇಶಪ್ರೇಮ ಮೆರೆದರು.
ಧ್ವಜಸ್ತಂಭದ ಅರ್ಧಕ್ಕೆ ಕಟ್ಟಲಾಗಿದ್ದ ಬೃಹತ್ ಧ್ವಜಾರೋಹಣಕ್ಕೆ ಸಚಿವರು ಬಟನ್ ಅದುಮಿದರು. 3.5 ಎಚ್‍ಪಿ ಸಾಮಥ್ರ್ಯದ ಮೋಟರ್ ಮೂಲಕ ನಿಧಾನವಾಗಿ ಧ್ವಜ ಮೇಲಕ್ಕೆತ್ತಿ 110 ಮೀಟರ್ ಧ್ವಜಸ್ತಂಭದ ತುತ್ತ ತುದಿಗೆ ತಲುಪಿಸಲಾಯಿತು.
ಧ್ವಜವು ಸ್ತಂಭದ ತುದಿ ತಲುಪುವ ಹತ್ತು ನಿಮಿಷಗಳ ಕಾಲ ಮರಾಠಾ ಲಘುಪದಾತಿ ದಳದ ತಂಡವು ದೇಶಭಕ್ತಿ ಗೀತೆಯ ಬ್ಯಾಂಡ್ ನುಡಿಸಿತು. ಧ್ವಜ ಗಮ್ಯ ಸ್ಥಾನ ತಲುಪಿದ ನಂತರ ರಾಷ್ಟ್ರಗೀತೆ ಪ್ರಸ್ತುತಪಡಿಸಿದರು.

ದೇಶ ಎಲ್ಲರಿಗೂ ಸೇರಿದೆ:
ಧ್ವಜಾರೋಹಣ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು, “ಭಾರತ ದೇಶವು ಇಲಿರುವ ಎಲ್ಲ ಜಾತಿ-ಧರ್ಮದವರಿಗೆ ಸೇರಿದೆ. ಎಲ್ಲರೂ ಶಾಂತಿ-ಪ್ರೀತಿಯಿಂದ ಸಹಬಾಳ್ವೆ ನಡೆಸಿದರೆ ರಾಮರಾಜ್ಯ ನಿರ್ಮಾಣವಾಗುತ್ತದೆ” ಎಂದರು.
ದೇಶದಲ್ಲಿಯೇ ಬೃಹತ್ ರಾಷ್ಟ್ರಧ್ವಜ ಸ್ತಂಭ ನಿರ್ಮಿಸುವುದು ಶಾಸಕರಾದ ಫಿರೋಜ್ ಶೇಠ ಅವರ ಕನಸು ಇಂದು ನನಸಾಗಿದೆ. ಬೃಹತ್ ಧ್ವಜಸಂಭ ಹಾಗೂ ಧ್ವಜವನ್ನು ದೇಶಕ್ಕೆ ಸಮರ್ಪಿಸಲಾಗಿದೆ. ಈ ಮೂಲಕ ನಾವೆಲ್ಲರೂ ದೇಶಭಕ್ತಿಯನ್ನು ಪ್ರದರ್ಶಿಸಿದ್ದು, ಅಂಬೇಡ್ಕರ್ ಹಾಗೂ ಬಸವಣ್ಣನವರ ಮಾರ್ಗದರ್ಶನದಂತೆ ನಡೆದು ರಾಮರಾಜ್ಯ ನಿರ್ಮಿಸಬೇಕಿದೆ ಎಂದರು.
ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಜನರ ಆಶಯಗಳನ್ನು ಈಡೇರಿಸುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿದರು.

ಒಂದೇ ದೇಶ; ಒಂದೇ ಧ್ವಜ:
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಫಿರೋಜ್ ಶೇಠ್, ಪ್ರಸ್ತುತ ದಿನಗಳಲ್ಲಿ ಧ್ವಜಗಳ ಬಣ್ಣದ ಆಧಾರದ ಮೇಲೆ ಒಡಕು ಮೂಡಿಸುವ ಕೆಲಸಗಳಾಗುತ್ತಿವೆ. ಆದರೆ ಭಾರತೀಯರಾದ ನಮಗೆ ಇರುವುದು ಒಂದೇ ದೇಶ ಒಂದೇ ತಿರಂಗ ಎಂದು ಹೇಳಿದರು.
ನಾವು ಹೊರಗಡೆ ಹೋಗುವಾಗ ಮಂದಿರ, ಮಸೀದಿ, ಚರ್ಚಗಳು ಕಂಡಾಗ ನಮಿಸುತ್ತೇವೆ. ಅದೇ ರೀತಿ ರಾಷ್ಟ್ರಧ್ವಜ ಕಂಡಾಗ ಅದಕ್ಕೆ ನಮಿಸುವ ಮೂಲಕ ದೇಶಪ್ರೇಮ ಮೆರೆಯಬೇಕು. ಕೋಟೆಕೆರೆ ಆವರಣದಲ್ಲಿ ಹಾರಾಡುವ ಈ ರ್ಧವಜವು ನಮ್ಮ ಬೆಳಗಾವಿಯ ಹೆಮ್ಮೆಯ ಸಂಕೇತ ಎಂದು ಶೇಠ್ ಹೇಳಿದರು.
ಮೇಯರ್ ಬಸವರಾಜ ಚಿಕ್ಕಲದಿನ್ನಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ದಂಡುಮಂಡಳಿ ಸಿಇಓ ದಿವ್ಯಾ, ಬೆಳಗಾವಿ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಮರಾಠಾ ಲಘು ಪದಾತಿ ದಳದ ಬ್ರಿಗೇಡಿಯರ್ ಗೋವಿಂದ ಕಾಲವಾಡ, ಡಿಸಿಪಿ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ್ ಹಾಗೂ ಎಲ್ಲ ಧರ್ಮಗುರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ದೇಶದ ಬೃಹತ್ ಧ್ವಜಾರೋಹಣ ಕಣ್ತುಂಬಿಕೊಂಡ ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ದೇಶಭಕ್ತಿ ಘೋಷಣೆ ಹಾಕುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.110 meters flagstaff; 500 kg The flag of the flag-blue trolley is the largest tricolor flag hoisting in the country

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.