ಉತ್ತಮ ಸಮಾಜಕ್ಕಾಗಿ

ರಾಮತೀರ್ಥ ನಗರ ಅಭಿವೃದ್ಧಿಗೆ ನಾನು ಕಟಿಬದ್ದ: ಭರವಸೆ

news

0

ಬೆಳಗಾವಿ:(news belgaum) ರಾಮತೀರ್ಥ ನಗರದ ಸಮಗ್ರ ಅಭಿವೃದ್ಧಿಗೆ ಪಣ ತೊಡುವೆ ಎಂದು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅಲ್ಲಿನ ರಹವಾಸಿಗಳಿಗೆ ಇಂದು ಅಭಯ ನೀಡಿದ್ದಾರೆ. ಭಾನುವಾರ ತಮ್ಮನ್ನು ಕಚೇರಿಯಲ್ಲಿ ಭೇಟಿ ಆದ ರಾಮತೀರ್ಥ ನಗರ ನಿವಾಸಿ ಸಂಘಟನೆಯ ಪದಾಧಿಕಾರಿಗಳು ನಾಗರಿಕರಿಗೆ ಶಾಸಕರು ಭರವಸೆ ನೀಡಿದರು.
ರಾಮತೀರ್ಥ ನಗರದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ನನಗೆ ಸ್ಪಷ್ಠ ಕಲ್ಪನೆ ಇದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವಾರು ಅಭಿವೃದ್ಧಿ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವೆ ಎಂದರು.
ರಾಮತೀರ್ಥ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಎಸ್. ಎಸ್. ಕಿವಡಸನ್ನವರ ಮಾತನಾಡಿ ರಸ್ತೆ, ಗಟಾರು, ವಿದ್ಯುದ್ದೀಪ, ಬಿಡಾಡಿ ನಾಯಿಗಳ ಕಾಟ, ಸಮರ್ಪಕವಲ್ಲದ ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿದರು.
ಸಂಘದ ಕಾರ್ಯದರ್ಶಿ ಸಿ. ಬಿ. ಚವಡಪ್ಪನವರ, ಸದಸ್ಯರಾದ ಐ. ಎಸ್. ಮದವಾಲ, ಎಸ್. ಬಿ. ಚಂಡು, ರಾಜಶೇಖರ ಕೋಶಾವರ, ಎಸ್. ಎನ್. ಪೂಜಾರಿ, ಎಸ್. ಬಿ. ಸವದತ್ತಿ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.