ಉತ್ತಮ ಸಮಾಜಕ್ಕಾಗಿ

ಗಣೆಶೋತ್ಸವ: ಮನೆಮನೆ ತುಂಬಿಕೊಂಡ ವಿನಾಯಕ!

news belagavi

0

ಬೆಳಗಾವಿ:(news belgaum) ಗಡಿನಾಡು ಬೆಳಗಾವಿಯಲ್ಲಿ ಗಣೇಶ ಉತ್ಸವ ಸಂಭ್ರಮ ಪ್ರಾರಂಭವಾಗಿದ್ದು ಶ್ರೀ ಗಣೇಶನನ್ನು ಭಯಭಕ್ತಿ ಆದರದಿಂದ ಇಂದು ಮನೆಮನೆಗೆ ಆಹ್ವಾನಿಸಿಕೊಳ್ಳಲಾಯಿತು.
ಬೆಳಿಗ್ಗೆಯಿಂದಲೇ ಭಯ-ಭಕ್ತಿಯಿಂದ ಗಣೇಶ ವಿಗ್ರಹಗಳನ್ನು ತಂದು ಮನೆಯಲ್ಲಿ ಭಕ್ತಾದಿಗಳು ಪ್ರತಿಷ್ಠಾಪನೆ ಮಾಡಿದರು.
ಬೆಳಗಾವಿ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ 115ನೇ ವರ್ಷದ ಸಂಭ್ರಮ. 378 ಬೃಹತ್ ಸಾರ್ವಜನಿಕ ಗಣೇಶ ಉತ್ಸವ ಮಂಡಲಗಳಲ್ಲಿ ಬೃಹತ್ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ತಡರಾತ್ರಿವರೆಗೆ ನಡೆಯಿತು.
ಸಾಂಪ್ರದಾಯಿಕ ಪೋಷಾಕಿನಲ್ಲಿ ಜನತೆ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಗಣೇಶನನ್ನು ಮನೆದುಂಬಿಸಿಕೊಂಡರು. ಮುಖ್ಯರಸ್ತೆ ಮತ್ತು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

Leave A Reply

 Click this button or press Ctrl+G to toggle between Kannada and English

Your email address will not be published.