ಉತ್ತಮ ಸಮಾಜಕ್ಕಾಗಿ

ಜಿಲ್ಲೆಯಲ್ಲಿ ಲದ್ದಿಹುಳುವಿನ ಬಾಧೆ

news

0

ಜಿಲ್ಲೆಯಲ್ಲಿ ಲದ್ದಿಹುಳುವಿನ ಬಾಧೆ: ರೈತರು ಆತಂತಕ್ಕೊಳಗಾಗದಿರಲು ಸೂಚನೆ
ಬೆಳಗಾವಿ:(news belgaum) ಜಿಲ್ಲೆಯಲ್ಲಿ ಲದ್ದಿಹುಳುವಿನ ಕೀಟಬಾಧೆ ಕಂಡುಬಂದಿದ್ದು, ಈ ಬಗ್ಗೆ ರೈತರು ಎದೆಗುಂದದೆ ತುರ್ತಾಗಿ ಕೃಷಿ ಇಲಾಖೆಯ ಅಧಿಕಾರಿಗಳನ್ನು, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಹತೋಟಿ ಕ್ರಮಗಳಿಗೆ ಬೇಕಾಗುವ ಔಷಧಿಗಳು ಹಾಗೂ ಉಪಕರಣಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲದ್ದಿ ಹುಳು ಎಂದರೇನು?:
ವೈಜ್ಞಾನಿಕವಾಗಿ ಸ್ಪೋಡಾಪ್ಟೆರಾ ಪ್ರೂಜಿಪರ್ಡಾ(Spodoptera frujiperda)ಎಂದು ಕರೆಯುವ ಹೊಸ ಪ್ರಭೇದದ ಲದ್ದಿಹುಳುವೇ (Fall Armyworm) ಲದ್ದಿ ಹುಳು. ಈ ಕೀಡೆಯು ಗೋವಿನ ಜೋಳದಲ್ಲಿ ಕಾಣಿಸಿಕೊಂಡಿದ್ದು ಸ್ವಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಗಳಲ್ಲಿ ಹಾಕುವುದರಿಂದ ಇದನ್ನು ಲದ್ದಿಹುಳು’’ ಎಂದು ಕರೆಯಲಾಗುತ್ತದೆ.

ಕೀಡೆಯು ಹೇಗೆ ಹಾನಿಯುಂಟು ಮಾಡುತ್ತದೆ?:
ಹೆಣ್ಣು ಪತಂಗವು ಎಲೆಯ ಮೇಲೆ ಗುಂಪು ಗುಂಪಾಗಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಂದ ಹೊರಬಂದ ಮರಿಹುಳುಗಳು ಮೊದಲು ಎಲೆಗಳನ್ನು ಕೆರೆದು ತಿನ್ನುತ್ತವೆ. ನಂತರ ಪೂರ್ಣ ಎಲೆಗಳನ್ನು ತಿಂದು ನಾಶಪಡಿಸುತ್ತದೆ.
ಮೆಕ್ಕೆ ಜೋಳದಲ್ಲಿ ಲದ್ದಿ ಹುಳುವಿನ ಬಾಧೆ

ಲದ್ದಿ ಹುಳುವನ್ನು ಹತೋಟಿ ಮಾಡುವುದು ಹೇಗೆ? :
News Belgaum-ಜಿಲ್ಲೆಯಲ್ಲಿ ಲದ್ದಿಹುಳುವಿನ ಬಾಧೆ News Belgaum-ಜಿಲ್ಲೆಯಲ್ಲಿ ಲದ್ದಿಹುಳುವಿನ ಬಾಧೆ 1 News Belgaum-ಜಿಲ್ಲೆಯಲ್ಲಿ ಲದ್ದಿಹುಳುವಿನ ಬಾಧೆ 2ಬೆಳೆಯ ಎತ್ತರ ಕಡಿಮೆಯಿದ್ದಲ್ಲಿ ಸಿಂಪರಣಾ ಕ್ರಮಗಳಿಂದ ಸದರಿ ಕೀಟವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಬಹುದಾಗಿದೆ. ರಾಸಾಯನಿಕಗಳಾದ ಎಮಾಮೆಕ್ಟಿನ್ ಬೆಂಜೋಯೇಟ್(Emamectin benzoate) 0.2 ಗ್ರಾಂ. ಅಥವಾ ಸ್ಪೈನೋಸ್ಯಾಡ್ (Spinosad)0.2 ಮಿ.ಲೀ. ಅಥವಾ ಕ್ಲೋರೆಂಟ್ರಾನಿಲಿಪ್ರೋಲ್ (Chlorentranilprol) 0.2 ಮಿ.ಲೀ ಅಥವಾ ಅಥವಾ ಫ್ಲೂಬೆಂಡಿಯಾಮೈಡ್(Flubendiamide)  0.1 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿ ಹಾಗೂ ಎಲೆಗಳ ಮೇಲೆÉ ಸಿಂಪರಣೆ ಮಾಡಬೇಕು.
ಹುಳುವನ್ನು ಜೈವಿಕವಾಗಿ ಹತೋಟಿ ಮಾಡಲು 1 ಗ್ರಾಂ ನ್ಯೂಮೋರಿಯಾ ರಿಲೈ(Neumoria releyi ) ಅಥವಾ 1 ಗ್ರಾಂ ಬಿಟಿ ದಂಡಾಣು (Bacillus thuringiensis) ಅಥವಾ 2 ಗ್ರಾಂ ಮೆಟಾರೈಜಿಯಂ (Metarhizium) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು. ಸಿಂಪರಣೆಯನ್ನು ಬೆಳಗ್ಗೆ ಅಥವಾ ಸಾಯಂಕಾಲ ಮಾಡುವುದು ಸೂಕ್ತ.
ಬೆಳೆಯು ಎತ್ತರವಾಗಿದ್ದಲ್ಲಿ ವಿಷಪಾಷಾಣದಿಂದ ಕೀಟವನ್ನು ಹತೋಟಿ ಮಾಡಬಹುದಾಗಿದೆ.
ವಿಷಪಾಷಾಣ ಹೇಗೆ ತಯಾರಿಸಬೇಕು?:
ಪ್ರತಿ ಎಕರೆಗೆ 2 ಕೆ. ಜಿ ಬೆಲ್ಲವನ್ನು 5 ಲೀಟರ್ ನೀರಿನಲ್ಲಿ ಬೆರಸಿ ಅದಕ್ಕೆ 250 ಮಿ.ಲಿ ಮೊನೊಕ್ರೋಟೊಪಾಸ್ ಕೀಟನಾಶಕ ಬೆರಸಿ ಈ ದ್ರಾವಣವನ್ನು 20 ಕೆ. ಜಿ ಭತ್ತ ಅಥವಾ ಗೋಧಿ ತೌಡಿನೊಂದಿಗೆ ಮಿಶ್ರಣ ಮಾಡಿ ರಾತ್ರಿಯಿಡೀ ಮಿಶ್ರಣವನ್ನು ಕಳಿಯಲು ಬಿಟ್ಟು ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಕೀಡೆಗಳು ಈ ವಿಷ ಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.