ಉತ್ತಮ ಸಮಾಜಕ್ಕಾಗಿ

ರಾಜ್ಯ ಬಜೆಟ್ 2017

0

ಮಹಿಳಾ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಬಿ.ಎಂ.ಟಿ.ಸಿ.  ಮೊಬೈಲ್ ಅಪ್ಲಿಕೇಷನ್‌ನಲ್ಲಿ ಹೊಸದಾಗಿ ಎಸ್‌ಒಎಸ್ ಬಟನ್ ಮತ್ತು ಟ್ರಾಕಿಂಗ್ ಸೌಲಭ್ಯ ಅಳವಡಿಕೆ.


ಬೆಂಗಳೂರು: 
“ರೈತ ಸಾರಥಿ” ಯೋಜನೆಯಡಿ ರೈತರಿಗೆ ತರಬೇತಿ ಮತ್ತು ಕಲಿಕಾ ಲೈಸೆನ್ಸ್ ನೀಡುವ ಜೊತೆಗೆ ದ್ವಿಚಕ್ರ ವಾಹನ ಲೈಸೆನ್ಸ್
ನೀಡಿಕೆ ಹಾಗೂ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ತರಬೇತಿ- 2 ಕೋಟಿ ರೂ.

* ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ  ರಚನೆ- 5 ಕೋಟಿ ರೂ.

* ಬೆಂಗಳೂರಿನಲ್ಲಿ ವಾಯು ಮತ್ತು ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಲು, 01-04-2018 ರಿಂದ ಜಾರಿಗೆ ಬರುವಂತೆ ಎರಡು ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರದ್ದುಗೊಳಿಸಿ ಅದರ ಬದಲು ನಾಲ್ಕು ಸ್ಟ್ರೋಕ್ ಎಲ್‌ಪಿಜಿಯ 10,000 ಆಟೋ ರಿಕ್ಷಾಗಳಿಗೆ ಪ್ರತಿ ಆಟೋ ರಿಕ್ಷಾಗೆ 30,000 ರೂ.ಗಳ ಸಹಾಯ ಧನ- 30 ಕೋಟಿ ರೂ.

* ಚಿಂತಾಮಣಿ, ರಾಣೆಬೆನ್ನೂರು ಮತ್ತು ಬಂಟ್ವಾಳದಲ್ಲಿ ಹೊಸ RTO ಕಛೇರಿಗಳ ಪ್ರಾರಂಭ.

ರಸ್ತೆ ಸಾರಿಗೆ ನಿಗಮಗಳು
* ಬಿ.ಎಂ.ಟಿ.ಸಿ.ಯಿಂದ 3000 ಹೊಸ ಬಸ್ಸುಗಳ ಸೇರ್ಪಡೆಗೆ  ಕ್ರಮ; ಬಸ್‌ಗಳ ಖರೀದಿಗೆ ಬಿಎಂಟಿಸಿ ಪಡೆಯುವ ಸಾಲ ಮತ್ತು ಬಡ್ಡಿಯ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಬಸ್ ಖರೀದಿ ಪ್ರಕ್ರಿಯೆಗೆ ಬೆಂಬಲ.
* ಮೂರು ಸಾರಿಗೆ ನಿಗಮಗಳಿಂದ ಒಟ್ಟು 3,250 ಹೊಸ ಬಸ್‌ಗಳ ಖರೀದಿ.
* ಕೇಂದ್ರ ಅನುದಾನದೊಂದಿಗೆ ಬೆಂಗಳೂರು ನಗರದಲ್ಲಿ 150 ಮೈಸೂರು ನಗರದಲ್ಲಿ 50 ಎಲೆಕ್ಟ್ರಿಕ್ ಬಸ್‌ಗಳನ್ನು ಸಂಚಾರಕ್ಕೆ ಬಿಡಲು ಕ್ರಮ.
* ಶಿವಮೊಗ್ಗ ಹೊಸ ವಿಭಾಗದ ಆರಂಭ.
* 44 ಹೊಸ ಬಸ್ ನಿಲ್ದಾಣ, 14 ಹೊಸ ಬಸ್ ಡಿಪೋ ಮತ್ತು ತರಬೇತಿ ಕೇಂದ್ರಗಳ ಸ್ಥಾಪನೆ.
* ರಾಜ್ಯದ ಗೋವಾ ಸ್ವಾತಂತ್ರ್ಯ  ಹೋರಾಟಗಾರರಿಗೆ,  ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಿಗೆ
ಉಚಿತ ಬಸ್ ಪಾಸ್ ವಿತರಣೆ.
* ಮಹಿಳಾ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಬಿ.ಎಂ.ಟಿ.ಸಿ.  ಮೊಬೈಲ್ ಅಪ್ಲಿಕೇಷನ್‌ನಲ್ಲಿ ಹೊಸದಾಗಿ ಎಸ್‌ಒಎಸ್ ಬಟನ್ ಮತ್ತು ಟ್ರಾಕಿಂಗ್ ಸೌಲಭ್ಯ ಅಳವಡಿಕೆ.
* ಉಚಿತ ಹಾಗೂ ರಿಯಾಯಿತಿ ದರದ ಪಾಸ್‌ಗಳನ್ನು  ಹೊಂದಿರುವ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್
ವಿತರಣೆ.
* ಚಾಲಕರು ಮತ್ತು ಮೆಕ್ಯಾನಿಕ್‌ಗಳಿಗೆ ಸಾಮರ್ಥ್ಯವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ. ಪ್ರತಿವರ್ಷ 25,000  ಅಭ್ಯರ್ಥಿಗಳಿಗೆ ತರಬೇತಿ ನೀಡಲು ಈಗಿರುವ ಕೇಂದ್ರಗಳು ಮೇಲ್ದರ್ಜೆಗೆ.

Leave A Reply

 Click this button or press Ctrl+G to toggle between Kannada and English

Your email address will not be published.