ಉತ್ತಮ ಸಮಾಜಕ್ಕಾಗಿ

ಲೆಕ್ಕಕೆ ಬಾರದ :ಗ್ರಾಮಲೆಕ್ಕಾಧಿಕಾರಿ

news

0
ಬೆಳಗಾವಿ 🙁news belgaum) ಹೆಸರೇ ಸೂಚಿಸುವಂತೆ ಜಿಲ್ಲೆಗೆ ಜಿಲ್ಲಾಧಿಕಾರಿ,ತಾಲ್ಲೂಕಿಗೆ ತಾಲೂಕಾ ದಂಡಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.
ಇವೆಲ್ಲದರ ವ್ಯಾಪ್ತಿಯೊಳಗೆ ಗ್ರಾಮಲೆಕ್ಕಾಧಿಕಾರಿಯೂ ಸಹ ಒಬ್ಬರು ಆದರೆ ತದ್ವಿರುದ್ದವೆಂಬಂತೆ ಗ್ರಾಮದ ಲೆಕ್ಕಕೆ ಬಾರದ,ಗ್ರಾಮದ ಲೆಕ್ಕದ ಗೋಜಿಗೆ ಹೋಗದ ಅಧಿಕಾರಿಗಳಿರುವುದು ವಾಸ್ತವ. 
ಆ ಸಾಲಿನಲ್ಲಿ ಇಲ್ಲಿಯೂ ಇರುವುದು ಸಂಬರಗಿ ಗ್ರಾಮದ ಲೆಕ್ಕಕೆ ಬಾರದ ಅಧಿಕಾರಿ ಮಾಳಿ.  
ಇದು ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಲೆಕ್ಕಾಧಿಕಾರಿ ಗ್ರಾಮದ ಜನರ ಲೆಕ್ಕಕೆ ಇಲ್ಲದಂತಾಗಿದ್ದಾರೆ. 
ಹೌದು ಗ್ರಾಮಸ್ಥರ ಅನೇಕ ಸರ್ಕಾರಿ ಕೆಲಸಗಳನ್ನ ಹಾಗೂ ಅಗತ್ಯ ಕಾಗದ ಪತ್ರಗಳ ಪೂರೈಕೆಯ ಜವಾಬ್ದಾರಿಯನ್ನು ಸಂಬಂಧಪಟ್ಟ ಗ್ರಾಮದಲ್ಲಿದ್ದುಕೊಂಡೆ ಗ್ರಾಮದ ಲೆಕ್ಕಾಧಿಕಾರಿಯಾದವರು ಮಾಡಬೇಕಾದ ಕರ್ತವ್ಯವಾಗಿರುತ್ತದೆ. 
ಆದರೆ ಇವೆಲ್ಲದರ ಗೋಜಿಗೆಯೇ! ಹೋಗದೆ ಒಂಟೆಮೇಲೆ ಕುಳಿತುಕೊಂಡು ಎಮ್ಮೆ ಮೇಯಿಸಿದ್ದಂತೆ ದೂರದ ಅಥಣಿಯಲ್ಲಿದ್ದುಕೊಂಡು ಕಾರ್ಯಭಾರಮಾಡುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮಲೆಕ್ಕಾಧಿಕಾರಿವರ ಬಳಿ ಒಂದು ಸಣ್ಣ ಕಾಗದಪತ್ರ ಪಡೆಯಬೇಕಾದರೂ ದೂರದ ಅಥಣಿಗೆ ಹೋಗಬೆಕಾದದ್ದು ಗ್ರಾಮಸ್ಥರ ಪಾಲಿಗೆ ಅನಿವಾರ್ಯ ಕರ್ಮವಾಗಿ ಬಿಟ್ಟಿದೆ.
ಇದರಿಂದ ಬಡ,ಮಧ್ಯಮ ವರ್ಗದ ಕಾರ್ಮಿಕರಿಗೆ,ಕೂಲಿಕಾರರಿಗೆ ಬಹಳ ಸಂಕಷ್ಟ ಅನುಭವಿಸುವಂತಾಗಿದೆ.
ಅಥಣಿಗೆ ಹೋದರೆ ಸಮಯಕ್ಕೆ ಲೆಕ್ಕಾಧಿಕಾರಿ ಲೆಕಕ್ಕೆ ಸಿಗುವುದೇ ಕಷ್ಟ ಅಂತಹದ್ದರಲ್ಲಿ ಸಿಗದೇ ಹೋದರೆ ಮುಗಿಯಿತು! ಬಡ ಕಾರ್ಮಿಕರ ಒಂದು ದಿನದ ಕೂಲಿಗೆ ಕತ್ತರಿ ಬೀಳುವುದಂತು ಅಲಿಖಿತ ನಿಯಮವಾಗಿಬಿಟ್ಟಿದೆ. 
ಅಥಣಿಗೆ ಹೋಗಿಬರಬೇಕಾದರೆ ಒಂದು ದಿನ ಕಳೆದೇ ಹೋಗುತ್ತದೆ ಜೊತೆಗೆ ಸುಮಾರು 50-90ರೂಗಳು ಬೇಕಾಗುತ್ತವೆ. ಆರ್ಥಿಕ ಸ್ಥಿತಿವಂತರು ಹೇಗೋ ಸರಿದೂಗಿಸುತ್ತಾರೆ ಆದರೆ ದಿನದ ಕೂಲಿಯನ್ನೆ ನಂಬಿದ ಬಡ,ಮಧ್ಯಮ ವರ್ಗದ ಕೂಲಿಕಾರರಿಗೆ ಇದು ಅರಗಿಸಿಕೋಳ್ಳಲಾಗದ ವಿಷಯವಾಗಿದೆ.
ಗ್ರಾಮದ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾತ್ಪೋತೆ ಫೌಂಡೇಶನ್ ನ ಪ್ರತಾಪರಾವ್ ಸಾತಪೋತೆ ಅವರು ತಹಸೀಲ್ದಾರರ ಕಛೇರಿ ಅಥಣಿ ಇವರ ಕಡೆಯಿಂದ ಪಡೆದ ಮಾಹಿತಿ‌ ಹಕ್ಕು ಅಧಿನಿಯಮ 2005 ಪ್ರಕಾರ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ 1)ಗ್ರಾಮ ಲೆಕ್ಕಾಧಿಕಾರಿಯವರು ಪ್ರತ್ಯಕ್ಷವಾಗಿ ಕಾರ್ಯನಿರ್ವಹಿಸುವ ಸ್ಥಳ ಸಂಬರಗಿ. 
ಹಾಗೂ 2)ಗ್ರಾಮಲೆಕ್ಕಾಧಿಕಾರಿಯವರ ಅಧಿಕೃತ ಕಛೇರಿಯ ಪೂರ್ಣ ವಿಳಾಸ ಗ್ರಾಮ ಪಂಚಾಯತ್ ಕಾರ್ಯಾಲಯ ಸಂಬರಗಿಯಾಗಿರತ್ತದೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಆದರೆ ವಾಸ್ತವದಲ್ಲಿ ನಡಿಯುತ್ತಿರುವುದೇ ಬೇರೆ ದಿನಾಲೂ ಗ್ರಾಮದಲ್ಲಿರಬೇಕಾದ ಲೆಕ್ಕಾಧಿಕಾರಿ ಕಾಟಾಚಾರವೆಂಬಂತೆ ವಾರಕ್ಕೊಂದು ದಿನ ಮಾತ್ರ ಮುಖ ತೋರಿಸುತ್ತಿರುವುದಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃಧ್ಧಿ ಅಧಿಕಾರಿಗಳು ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ, ಬುಧವಾರದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಇರುತ್ತಾರೆಂದು.  
ನಮ್ಮಿಂದಲೇ ಸರ್ಕಾರದಿಂದಲೇ ಸಂಬಳ ಪಡೆದು ನಮ್ಮ ಕೆಲಸಗಳಿಗೆ ಅಡಚಣೆಯುಂಟು ಮಾಡುವುದು ಎಷ್ಟು ಸರಿ? ಎಂಬ ಆಕ್ರೋಶದ ನುಡಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇನ್ನಾದರೂ ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಸಂಬರಗಿ ಗ್ರಾಮಸ್ಥರ ಪರದಾಟಕ್ಕೆ ಇತಿಶ್ರೀ ಹಾಡಿಸಿದರೆ ಒಳಿತು ಇಲ್ಲವಾದರೆ  ಗ್ರಾಮ ಪಂಚಾಯತಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ನಾವೂ ತಹಸೀಲ್ದಾರರ ಕಛೇರಿ ಅಥಣಿ ಇವರ ಕಡೆಯಿಂದ ಪಡೆದ ಮಾಹಿತಿ ಪ್ರಕಾರ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಗ್ರಾಮಲೆಕ್ಕಾಧಿಕಾರಿಯಾದವರು ಅದೇ ಗ್ರಾಮದಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಾರೆ ಎಂದು ಆದರೆ ಇಲ್ಲಿ ಬೇರೆಯೇ ನಡೆಯುತ್ತಿದೆ ವಾರಕ್ಕೊಂದು ದಿನ ಕಾಟಾಚಾರಕ್ಕೆ ಬಂದ್ರೆ ಜನರು ಸರ್ಕಾರಿ ಕಾಗದಪತ್ರ ಪಡೆಯಬೇಕಾದರೆ ತುಂಬಾ ತೊಂದರೆಯಾಗುತ್ತಿದೆ ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಗ್ರಾಮಸ್ಥರ ನೋವಿಗೆ ಸ್ಪಂದಿಸಬೇಕಾಗಿದೆ ಎಂದು 
ಸಾತಪೋತೆ ಫೌಂಡೇಶನ್ ಅಧ್ಯಕ್ಷ ಪ್ರತಾಪರಾವ್ ಸಾತಪೋತೆ ಬೇಸರ ವ್ಯಕ್ತಪಡಿಸಿದರು
belagavi-An officer not covered the village

Leave A Reply

 Click this button or press Ctrl+G to toggle between Kannada and English

Your email address will not be published.