ಉತ್ತಮ ಸಮಾಜಕ್ಕಾಗಿ

ಮರೆಯದ ಮಾಣಿಕ್ಯ ಅಟಲ್ ಜೀಗೆ ಬಿಜೆಪಿ ನಾಯಕರು, ಕಸಾಪ ಕಂಬನಿ

news

0

ಬೆಳಗಾವಿ:(news belgaum) ಗುರುವಾರ ಸಂಜೆ 5:05ಕ್ಕೆ ಅಸುನೀಗಿದ ದೇಶದ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕಂಬಣಿ ಮಿಡಿದಿದೆ.
News Belgaum-ಮರೆಯದ ಮಾಣಿಕ್ಯ ಅಟಲ್ ಜೀಗೆ ಬಿಜೆಪಿ ನಾಯಕರು, ಕಸಾಪ ಕಂಬನಿ News Belgaum-ಮರೆಯದ ಮಾಣಿಕ್ಯ ಅಟಲ್ ಜೀಗೆ ಬಿಜೆಪಿ ನಾಯಕರು, ಕಸಾಪ ಕಂಬನಿ 1 News Belgaum-ಮರೆಯದ ಮಾಣಿಕ್ಯ ಅಟಲ್ ಜೀಗೆ ಬಿಜೆಪಿ ನಾಯಕರು, ಕಸಾಪ ಕಂಬನಿ 2 News Belgaum-ಮರೆಯದ ಮಾಣಿಕ್ಯ ಅಟಲ್ ಜೀಗೆ ಬಿಜೆಪಿ ನಾಯಕರು, ಕಸಾಪ ಕಂಬನಿ 3ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡ್ರ ಹಾಗೂ ಪಕ್ಷದ ಪದಾಧಿಕಾರಿಗಳು ಶೃದ್ಧಾಂಜಲಿ ಸಲ್ಲಿಸಿದ್ದಾರೆ.
ಜತೆಗೆ ಜಿಲ್ಲಾ ಸಾಹಿತ್ಯ ವಲಯವು ದುಖಃ ವ್ಯಕ್ತಪಡಿಸಿದ್ದು ‘ಭಾರತ ದೇಶ ಕಂಡ ಅಜಾತಶತ್ರು, ಮರೆಯದ ಮಾಣಿಕ್ಯ, ಸೇನಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ ಧೀಮಂತ ನಾಯಕ, ಪ್ರತಿ ಹಳ್ಳಿಗೂ ಡಾಂಬರ ರಸ್ತೆ ಮಾಡಿಸಿದ ಮಹಾತ್ಮ, ದೇಶ ದಲ್ಲಿಯೇ ಸಾಕಷ್ಟು ಬದಲಾವಣೆ ರೂವಾರಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಆತ್ಮ ಕ್ಕೆ ದೇವರು ಶಾಂತಿ ನಿಡಲಿ ಎಂದು ಪ್ರಾರ್ಥಿಸೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ.
2004ರಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕ್ಷಣಬಿಂಬ:ಅಟಲ್ ಬಿಹಾರಿ ವಾಜಪೇಯಿಯವರು 1982 ರ ಡಿಸೆಂಬರ್ ನಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆ ಪ್ರಚಾರಕ್ಕಾಗಿ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದರು.ರಾಮದುರ್ಗ ವಿಧಾನಸಭೆ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀ ಮಾರುತಿ ಯಂಕಪ್ಪ ಚಂದರಗಿ ಅವರ ಪರವಾಗಿ ಪ್ರಚಾರ ಕೈಕೊಂಡ ವಾಜಪೇಯಿ ಅವರ ಹಿಂದಿ ಭಾಷಣವನ್ನು ಶ್ರೀ ಡಿ.ಎಚ್.ಶಂಕರಮೂರ್ತಿ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.