ಉತ್ತಮ ಸಮಾಜಕ್ಕಾಗಿ

ವಿವೀದ ಇಲಾಖೆಗಳ ಪ್ರಕಟಣೆಗಳು

news

0

ಪಶುಪಾಲನೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ: (news belgaum) ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ 2018-19ನೇ ಸಾಲಿಗೆ ಅಮೃತ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ಹೈನುಗಾರಿಕೆ ಘಟಕ, ಕರು ಸಾಕಾಣಿಕೆ ಘಟಕ ಮತ್ತು ಕುರಿ ಸಾಕಾಣಿಕೆ ಘಟಕಗಳಿಗೆ ಹಾಗೂ ಪಶುಭಾಗ್ಯ ಯೋಜನೆಯಡಿ ಹೈನುಗಾರಿಕೆ ಘಟಕ, ಕುರಿ ಘಟಕ, ಹಂದಿ ಘಟಕ, ಕೋಳಿ ಘಟಕ ಮತ್ತು ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪಿಸಲು ಸಹಾಯಧನ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳಿಗಾಗಿ ಹಾಗೂ ಯೋಜನೆಯ ಹೆಚ್ಚಿನ ವಿವರಗಳನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರಿಂದ ಪಡೆದುಕೊಳ್ಳಬಹುದಾಗಿದೆ. ಅರ್ಹ ಫಲಾನುಭವಿಗಳು ಭರ್ತಿಮಾಡಿದ ಅರ್ಜಿಗಳನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರುಗಳಿಗೆ ಸಪ್ಟೆಂಬರ್ 16 ಕೊನೆಯ ದಿನವಾಗಿರುತ್ತದೆ ಎಂದು ಡಾ: ಡಿ.ಎಸ್.ಹವಾಲದಾರ, ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು: ಅಗಸ್ಟ 23, 24 ಮಿಲಿಟರಿ ಪಿಂಚಣಿ ಅದಾಲತ್
ಬೆಳಗಾವಿ: ಪ್ರಿನ್ಸಿಪಲ್ ಕಂಟ್ರೌಲರ್ ಆಫ್ ಡಿಫೇನ್ಸ್ ಅಕೌಂಟ್ (ಪೇನಶನ್) ಅಲಹಾಬಾದ್, ಇವರು ಮಿಲಿಟರಿ ಪಿಂಚಣಿ ಅದಾಲತ್‍ನ್ನು ಆಗಸ್ಟ 23 ಮತ್ತು 24 ರಂದು ಮೈಸೂರಿನಲ್ಲಿ ಆಯೋಜಿಸಿರುತ್ತಾರೆ.
ಈ ಅದಾಲತ್‍ನಲ್ಲಿ ಮಿಲಿಟರಿ ಪಿಂಚಣಿದಾರರ ಪಿಂಚಣಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ನಿವಾರಿಸಲಾಗುವುದು. ಆದುದರಿಂದ ಪಿಂಚಣಿಗೆ ಸಂಬಂಧಿಸಿದ ಕುಂದು ಕೊರತೆಗಳಿದ್ದಲ್ಲಿ ಅರ್ಜಿ ನಮೂನೆಯನ್ನು ತುಂಬಿ ಈ ಕೆಳಗಿನ ದಾಖಲಾತಿಯ ನೆರಳೆಚ್ಚು ಪ್ರತಿಗಳೊಂದಿಗೆ ನೇರವಾಗಿ ಎಸ್.ಕೆ.ಶರ್ಮಾ, ಪಿಂಚಣಿ ಅದಾಲತ್ ಅಧಿಕಾರಿಗಳು, ಸಿಡಿಎ(ಪಿಂಚಣಿ), ದ್ರುಪಾಡಿಘಾಟ್, ಅಲಹಾಬಾದ್ ಇವರಿಗೆ ಕಳುಹಿಸಿಬಹುದಾಗಿದೆ.
ದಾಖಲಾತಿಗಳ ವಿವರ: ಡಿಸರ್ಚಾಜ್ ಬುಕ್, ಪಿಂಚಣಿ ಬುಕ್, ಪಿಪಿಓ/ಸಿಓಆರ್‍ಆರ್ ಪಿಪಿಓಎಸ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಸಂಬಂಧಿಸಿದ ಎಲ್ಲ ದಾಖಲಾತಿಗಳ ಝರಾಕ್ಸ್ ಪ್ರತಿಯನ್ನು ಲಗತ್ತಿಸಿ ವೆಬ್‍ಸೈಟ್ http://pcdapension.nic.in ಇ-ಮೇಲ್ cda-albd@.nic.in ಫ್ಯಾಕ್ಸ್ ಸಂಖ್ಯೆ 0532-2421873 ನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಥಣಿ: ಸ್ಥಿರಾಸ್ತಿ ಬೆಲೆ ಕರಡು ಪ್ರತಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ
ಬೆಳಗಾವಿ:  ಅಥಣಿ ಹಿರಿಯ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ಸ್ಥಿರಾಸ್ತಿಗಳ ಮೌಲ್ಯಗಳನ್ನು ಸನ್ 2018-19 ನೇ ಸಾಲಿಗೆ ಜಾರಿಗೆ ಬರುವಂತೆ ಅಧ್ಯಕ್ಷರು ಕೇಂದ್ರ ಮೌಲ್ಯ ಮಾಪನ ಸಮಿತಿ ಮತ್ತು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರ ಆದೇಶದನ್ವಯ ಅಥಣಿ ತಾಲೂಕಿನ ಎಲ್ಲ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಈಗ ಚಾಲ್ತಿಯಲ್ಲಿರುವ ಬೆಲೆಗಳಿಗಿಂತ ಶೇ. 15-30 ರಷ್ಟು ಕೃಷಿ ಜಮೀನುಗಳಿಗೆ ಮತ್ತು ನಿವೇಶನಗಳಿಗೆ ಹೆಚ್ಚಿಗೆ ಮಾಡಿ ಈ ಕಚೇರಿಯ ಸೂಚನಾ ಫಲಕಕ್ಕೆ ಅಳವಡಿಸಲಾಗಿದೆ.
ಸದರಿ ಮಾರ್ಗಸೂಚಿ ಬೆಲೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 (ಹದಿನೈದು) ದಿನಗಳ ಒಳಗಾಗಿ ಉಪನೋಂದಣಿ ಅಧಿಕಾರಿಗಳಿಗೆ ಲಿಖತವಾಗಿ ಸಲ್ಲಿಸಬೇಕೆಂದು ಅಥಣಿ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
:ಮಹಿಳೆ ನಾಪತ್ತೆ
ಬೆಳಗಾವಿ:  ಇಲ್ಲಿನ ವಡಗಾವಿಯ ಆನಂದ ನಗರದ 1ನೇ ಕ್ರಾಸ್‍ನ ನಿವಾಸಿಯಾದ ಶ್ರೀಮತಿ ಗೀತಾ ವಿಠ್ಠಲ ಕರಿಗಾರ ಅವರು ಕಾಣೆಯಾಗಿದ್ದಾರೆ.
ಆಗಸ್ಟ್ 5 ರಂದು ಮನೆಯಿಂದ ಹೇಳದೇ ಕೇಳದೆ ಹೊರಗೆ ಹೋದ ಅವರು ಮರಳಿ ಬಾರದೇ ಕಾಣೆಯಾಗಿದ್ದಾರೆ ಎಂದು ಗೀತಾ ಕರಿಗಾರ ಅವರ ಪತಿ ಶಹಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಶ್ರೀಮತಿ ಗೀತಾ ಕರಿಗಾರ ಅವರು 27 ವರ್ಷದವರಾಗಿದ್ದು, 5 ಅಡಿ ಎತ್ತರವಾಗಿದ್ದಾರೆ. ಗುಂಡು ಮುಖ, ಮೈಯಿಂದ ಸದೃಢ ಹಾಗೂ ಗೋಧಿ ಮೈಬಣ್ಣ ಹೊಂದಿದ್ದಾರೆ. ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಸೀರೆ ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದರು.
ಈ ಚಹರೆಯುಳ್ಳ ಮಹಿಳೆಯ ಮಾಹಿತಿ ದೊರೆತರೆ ಬೆಳಗಾವಿ ಪೊಲೀಸ್ ಆಯುಕ್ತರು ಅಥವಾ ಶಹಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟ್‍ರ್‍ಗೆ ಅಥವಾ ದೂ: 0831-2405244, 9480804046, 9480804104 ಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.
ಆ.25 ರಂದು ಬಹಿರಂಗ ಹರಾಜು
ಬೆಳಗಾವಿ:  ಕಮಾಂಡೆಂಟ್, 2ನೇ ಪಡೆ, ಕೆಎಸ್‍ಆರ್‍ಪಿ ಮಚ್ಚೆ-ಬೆಳಗಾವಿ ಘಟಕದಲ್ಲಿರುವ ಅನುಪಯುಕ್ತ ಕಿಟ್ ಸಾಮಗ್ರಿಗಳು, ಪ್ಲಾಸ್ಟಿಕ್ ವಸ್ತುಗಳು, ಮರದ ವಸ್ತುಗಳು, ಕಬ್ಬಿಣದ ವಸ್ತುಗಳು, ಸ್ಟೀಲ್, ಕಬ್ಬಿಣ, ಇಲೆಕ್ಟ್ರಿಕಲ್, ಕಂಪ್ಯೂಟರ್ ವಸ್ತುಗಳು ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ 2ನೇ ಪಡೆ, ಕೆಎಸ್‍ಆರ್‍ಪಿ ಬೆಳಗಾವಿ ಘಟಕದ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 2ನೇ ಪಡೆ ಕಮಾಂಡೆಂಟ್ ಎನ್.ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೆಂಡರ್ ಸಲ್ಲಿಸಲು ಇಚ್ಛಿಸುವವರು ಕಮಾಂಡೆಂಟ್, 2ನೇ ಪಡೆ, ಕೆಎಸ್‍ಆರ್‍ಪಿ ಬೆಳಗಾವಿ ಅವರ ವಿಳಾಸಕ್ಕೆ ಡಿ.ಡಿ ತೆಗೆದು ಖುದ್ದಾಗಿ ಅಥವಾ ಅಂಚೆಯ ಮೂಲಕ ಆಗಸ್ಟ್ 24 ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಮೊಹರು ಮಾಡಿದ ಟೆಂಡರ್ (ಶೀಲ್ಡ್ ಕವರ್) ಲಕೋಟೆಯನ್ನು ‘ಅನುಪಯುಕ್ತ ಸಾಮಗ್ರಿಗಳ ಖರೀದಿಗಾಗಿ ಟೆಂಡರ್’ ಎಂದು ಲಕೋಟೆಯ ಮೇಲೆ ಬರೆದು ಕಳುಹಿಸಬೇಕು.
ಟೆಂಡರ್ ಫಾರ್ಮ್‍ಗಳನ್ನು ವರ್ಗಾವಣೆ ಮಾಡಲಾಗುವುದಿಲ್ಲ. ಅನುಪಯುಕ್ತ ವಸ್ತುಗಳ ಖರೀದಿಗಾಗಿ ಬಂದ ಬಿಡ್‍ದಾರರು 10 ಸಾವಿರ ರೂ.ಗಳನ್ನು ಹರಾಜು ಪ್ರಾರಂಭಿಸುವುದಕ್ಕಿಂತ ಮೊದಲು ಕಮಾಂಡೆಂಟ್, 2ನೇ ಪಡೆ, ಕೆಎಸ್‍ಆರ್‍ಪಿ ಬೆಳಗಾವಿ ಅವರ ಹೆಸರಿನಲ್ಲಿ ಠೇವಣಿಯಾಗಿ ಇಡಬೇಕು.
ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 2ನೇ ಪಡೆ ಕಮಾಂಡೆಂಟ್ ಅವರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಜಂತುಹುಳು ನಿವಾರಣಾ ಮಾತ್ರೆ: ಅ. 20 ರಂದು ನೀಡಲು ಸೂಚನೆ
ಬೆಳಗಾವಿ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1457754 ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ 1374366 ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಗಳನ್ನು ನುಂಗಿಸಲಾಗಿದೆ.
ಅನಿವಾರ್ಯ ಕಾರಣಗಳಿಂದ ಜಂತು ನಿವಾರಣಾ ಮಾತ್ರೆ ಪಡೆಯದೇ ಇರುವ 83388 ಮಕ್ಕಳಿಗೆ ಆಗಸ್ಟ 17 ರಂದು ಮಾಪ್ ಆಪ್ ದಿನದಂದು ನೀಡಲು ತಿರ್ಮಾನಿಸಲಾಗಿತ್ತು ಆದರೆ ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಅಟಲ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತು.

ಆದ್ದರಿಂದ ಉಳಿದ ಮಕ್ಕಳಿಗೆ ಸದರಿ ದಿನದಂದು ಜಂತು ನಿವಾರಣಾ ಮಾತ್ರೆಗಳನ್ನು ನೀಡಿರುವುದಿಲ್ಲ. ಸರ್ಕಾರಿ ಆದೇಶದಂತೆ ಅಗಸ್ಟ 20 ರಂದು ಉಳಿದ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಗಳನ್ನು ನೀಡಲಾಗುವುದು. ಆದ್ದರಿಂದ ಮಾತ್ರೆ ಪಡೆಯದೆ ಇರುವ ಮಕ್ಕಳಿಗೆ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾತ್ರೆಗಳನ್ನು ನೀಡಿ ಶೇಕಡಾ 100% ಜಿಲ್ಲೆಯ ಗುರಿ ಸಾಧಿಸುವಂತೆ ಶ್ರೀ ರಾಮಚಂದ್ರನ್ ಆರ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave A Reply

 Click this button or press Ctrl+G to toggle between Kannada and English

Your email address will not be published.