ಉತ್ತಮ ಸಮಾಜಕ್ಕಾಗಿ

ಜನಪದದ ಮೂಲ ಆಶಯಕ್ಕೆ ಧಕ್ಕೆ ಭಾರದಿರಲಿ : ಡಾ|| ಸಿ. ಕೆ. ನಾವಲಗಿ

news belagavi

0

ಬೆಳಗಾವಿ:(news belgaum)ಜನ ಸಾಮಾನ್ಯರ ಬದುಕಿಗೆ ಅತೀ ಹತ್ತಿರವಾಗಿರುವ ಜನಪದದ ಮೂಲಕ ವಿಜ್ಞಾನ ಸಂವಹನ ಎಂಬ ಆಲೋಚನೆ ಉತ್ತಮವಾದುದು. ವಿಜ್ಞಾನದ ಮಹತ್ತರ ಪರಿಕಲ್ಪನೆಗಳನ್ನು ಜನರಿಗೆ ತಲುಪಿಸುವಲ್ಲಿ ಜನಪದ ಮಾಧ್ಯಮ ಪರಿಣಾಮಕಾರಿಯಾಗಬಲ್ಲದು. ಆದರೆ ಜನಪದ ಮಾಧ್ಯಮದ ಮೂಲಕ ವಿಜ್ಞಾನ ಪ್ರಸಾರ ಮತ್ತು ಪ್ರಚಾರದಿಂದಾಗಿ ಜನಪದದ ಮೂಲ ಆಶಯಕ್ಕೆ ಧಕ್ಕೆ ಭಾರದಿರಲಿ ಎಂದು ಜನಪದ ತಜ್ಞ ಹಾಗೂ ನಿವೃತ್ ಉಪನ್ಯಾಸಕ ಡಾ|| ಸಿ. ಕೆ. ನಾವಲಗಿ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಡಾ|| ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ, ಹಾಗೂ ವಿಕಾಸನ ಕೇಂದ್ರ ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ಜನಪದ ಮಾಧ್ಯಮದ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

News Belgaum-ಜನಪದದ ಮೂಲ ಆಶಯಕ್ಕೆ ಧಕ್ಕೆ ಭಾರದಿರಲಿ : ಡಾ|| ಸಿ. ಕೆ. ನಾವಲಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋಹನ ಗುಂಡ್ಲೂರ ಮಾತನಾಡಿ ಜನಪದ ಅಕ್ಷರ ಜ್ಞಾನವಿಲ್ಲದವರು, ಹಳ್ಳಿಗಾಡಿನ ಜನತೆ ರಚಿಸಿದ್ದು ಎಂಬ ಕೀಳರಿಮೆ ಬಿಟ್ಟು ಅದರಲ್ಲಿನ ವೈಜ್ಞಾನಿಕ ಅಂಶಗಳನ್ನು ಹುಡುಕಿ ತೆರೆಯುವ ಕೆಲಸ ವಿಶ್ವವಿದ್ಯಾಲಯಗಳಿಂದಾಗಬೇಕು ಎಂದರು.

ಸಮಾರಂಭದಲ್ಲಿ ಧಾರವಾಡ ಡೈಯಟ್‍ನ ನಿವೃತ್ ಉಪನ್ಯಾಸಕ ಕೆ.ಜಿ. ದೇವರಮನಿ, ಪ್ರೊ|| ಎಂ.ಆರ್. ಉಳ್ಳೆಗಡ್ಡಿ ಉಪಸ್ಥಿತರಿದ್ದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ನಿರೂಪಿಸಿ ಸ್ವಾಗತಿಸಿದರು. ವಿಕಾಸನ ಕೇಂದ್ರದ ಅಧ್ಯಕ್ಷ ಸಂಜಯ್ ಮಗದುಮ್ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.