ಉತ್ತಮ ಸಮಾಜಕ್ಕಾಗಿ

20 ದ್ವಿಚಕ್ರ ವಾಹನಗಳು ಹಾಗೂ 40ಜನ ಸಿಬ್ಬಂದಿಯನ್ನು ಶಕ್ತಿ ಗಸ್ತುಪಡೆಗೆ ನಿಯೋಜಿಸಲಾಗಿದೆ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ

20 bicycles and 40 staff were deployed to power patrols Police Commissioner Dr D.C. Rajappa

0

ಬೆಳಗಾವಿ: (tarunkranti) ನಗರದಲ್ಲಿ ವ್ಯಾಪಕವಾಗಿ ಕಾನೂನು ಸುವ್ಯವಸ್ಥೆ ‌ಕಾಪಾಡಲು ಹೆಚ್ಚಿನ ಹೊಸ ಗಸ್ತು ವಾಹನಗಳನ್ನು ನಿಯೋಜಿಸಲಾಗುವುದು ಎಂದು 20 ದ್ವಿಚಕ್ರ ವಾಹನಗಳು ಹಾಗೂ 40ಜನ ಸಿಬ್ಬಂದಿಯನ್ನು ಶಕ್ತಿ ಗಸ್ತುಪಡೆಗೆ ನಿಯೋಜಿಸಲಾಗಿದೆ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ- Tarun kranti 3ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 20 ದ್ವಿಚಕ್ರ ವಾಹನಗಳು ಹಾಗೂ 40ಜನ ಸಿಬ್ಬಂದಿಯನ್ನು ಶಕ್ತಿ ಗಸ್ತುಪಡೆಗೆ ನಿಯೋಜಿಸಲಾಗಿದೆ ಎಂದರು. ಚನ್ನಮ್ಮ ಪಡೆಯ ಸಂಚಾರಿ ಜಾಗೃತಿ ದಳಕ್ಕೆ ಹೆಚ್ಚುವರಿ ಎರಡು ವಾಹನ ಹಾಗೂ ಸಿಬ್ಬಂದಿ ‌ನಿಯೋಜಿಸಲಾಗಿದೆ‌‌ ಎಂದರು.
20 ದ್ವಿಚಕ್ರ ವಾಹನಗಳು ಹಾಗೂ 40ಜನ ಸಿಬ್ಬಂದಿಯನ್ನು ಶಕ್ತಿ ಗಸ್ತುಪಡೆಗೆ ನಿಯೋಜಿಸಲಾಗಿದೆ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ- Tarun kranti 2ಶಕ್ತಿ ಗಸ್ತು ಪಡೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಬೆಳಿಗ್ಗೆ 9ರಿಂದ ಸಂಜೆ 6ಕ್ಕೆ ಹಾಗೂ ಸಂಜೆ 6 ರಿಂದದ ರಾತ್ರಿ 2 ರವರೆಗೆ ಗಸ್ತು ತಿರುಗಲಿವೆ. ಈ ವೇಳೆ ನಡೆಯುವ ಘಟನೆಗಳ ಬಗ್ಗೆ ನೇರವಾಗಿ ಪೊಲಿಸ್ ಕಂಟ್ರೋಲ್‌ ರೂಮಗೆ ಮಾಹಿತಿ ನೀಡಲಿದ್ದಾರೆ ಮತ್ತು ಆರೋಪಿಗಳನ್ನು ರಕ್ಷಕ ವಾಹನದ ಮೂಲಕ ಆಯಾ ಠಾಣೆಗೆ ಕರೆದೊಯ್ಯಲಾಗುವುದು ಎಂದರು.
ಈ ಗಸ್ತು ವ್ಯವಸ್ಥೆಯ ಮೇಲುಸ್ತುವಾರಿಯನ್ನು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ನೋಡಿಕೊಳ್ಳಲಿದ್ದಾರೆ. ನಗರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಿಂದ ಪೊಲಿಸ್ ಸಿಬ್ಬಂದಿಗೆ 1200 ಹೆಲ್ಮೆಟ್ ಖರೀದಿಸಲಾಗಿದೆ. ರಾತ್ರಿ ವೇಳೆ ಕಾರ್ಯನಿರ್ವಹಿಸುವ ಸಿಬ್ಬಂದಿಗಾಗಿ ಬ್ಯಾಟರಿ ಖರೀದಿಸಲಾಗಿದೆ ಎಂದು ತಿಳಿಸಿದರು. ನಗರದಲ್ಲೂ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಗಸ್ತು ಪಡೆ ವಾಹನಗಳಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ.ಎಸ್ ಹಾಗೂ ಪೊಲಿಸ್ ಆಯುಕ್ತ ಡಾ.‌ಡಿ.ಸಿ.ರಾಜಪ್ಪ ಹಸಿರು‌ ನಿಶಾನೆ ತೊರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಸೀಮಾ ಲಾಟಕರ, ಮಹಾನಿಂಗ ನಂದಗಾಂವಿ, ಎಸಿಪಿಗಳಾದ ಮಹಾಂತಯ್ಯ ಮುಪ್ಪಿನಮಠ, ಶಂಕರ ಮಾರಿಹಾಳ, ಗಣಪತಿ ಗುಡಾಜಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.(belgaum)

20 bicycles and 40 staff were deployed to power patrols Police Commissioner Dr D.C. Rajappa

Leave A Reply

 Click this button or press Ctrl+G to toggle between Kannada and English

Your email address will not be published.