ಉತ್ತಮ ಸಮಾಜಕ್ಕಾಗಿ

ಧಾರ್ಮಿಕ ಹಬ್ಬಗಳ ಹಿಂದೆ ಆಯಾ ನಂಬಿಕೆಗಳು, ಶೃದ್ಧೆಭಕ್ತಿ ಇರುತ್ತವೆ. ಅವುಗಳ ಬಗ್ಗೆ ನಾನು ಮಾತನಾಡಿಲ್ಲ.:ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ

news belagavi

0

ಬೆಳಗಾವಿ:(news belgaum) ಪರಸ್ಪರ ಪ್ರೀತಿ ಸೌಹಾರ್ಧತೆಯಿಂದ ಆಯಾ ಧಾರ್ಮಿಕ ಹಬ್ಬಗಳನ್ನು ಆಚರಿಸಬೇಕು ಎಂಬುವುದು ನನ್ನ ಸಂದೇಶ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಸ್ಪಷ್ಠಪಡಿಸಿದ್ದಾರೆ. ಸೋಮವಾರ ನಡೆದ ಶಾಂತಿಪಾಲನಾ ಸಭೆಯಲ್ಲಿ ‘ಬಕ್ರೀದ್ ಹಬ್ಬದ ವೇಳೆ ಪ್ರಾಣಿ ಬಲಿ ಕೊಡಬಾರದು… ದೇವರು ಮೆಚ್ಚಲಾರ’ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿರುವುದಾಗಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನಾನು ಆ ರೀತಿ ಹೇಳಿಲ್ಲ ಎಂದು ಡಿಸಿ ಎಸ್. ಜಿಯಾವುಲ್ಲಾ ಖೇದ ವ್ಯಕ್ತಪಡಿಸಿದ್ದಾರೆ.
ಯಾವುದೇ ಧಾರ್ಮಿಕ ಹಬ್ಬಗಳ ಹಿಂದೆ ಆಯಾ ನಂಬಿಕೆಗಳು, ಶೃದ್ಧೆಭಕ್ತಿ ಇರುತ್ತವೆ. ಅವುಗಳ ಬಗ್ಗೆ ನಾನು ಮಾತನಾಡಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಶಾಂತಿ ಸೌಹಾರ್ಧತೆ ಸಮಾಜದಲ್ಲಿ ಸ್ಥಿತವಾಗಲಿ, ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಹಬ್ಬಗಳ ಆಚರಣೆ ನಡೆಯಲಿ ಎಂಬುವುದು ಮಾತ್ರ ಜಿಲ್ಲಾಡಳಿತದ ಸಂದೇಶವಾಗಿದೆ ಎಂದು ಎಸ್. ಜಿಯಾವುಲ್ಲಾ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.