ಉತ್ತಮ ಸಮಾಜಕ್ಕಾಗಿ

22/12 ಖಾತೆ ಹಂಚಿಕೆ: ಕಾಂಗ್ರೆಸ್ ಜೆಡಿಎಸ್ ಜಂಟಿ ನಿರ್ಣಯ

22/12 Account Sharing: Congress JDS joint decision

0

ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದ ಜೆಡಿಎಸ್​ ಕೊನೆಗೂ ಪಡೆಯುವಲ್ಲಿ ಯಶಸ್ವಿಯಾಗಿದೆಯಾ..!

ಬೆಂಗಳೂರು:news ಖಾತೆ ಹಂಚಿಕೆ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆಸುತ್ತಿದ್ದ ಕಾಂಗ್ರೆಸ್​ ಜೆಡಿಎಸ್​ ನಾಯಕರು ಕೊನೆಗೂ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದಾರೆ. ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದ ಜೆಡಿಎಸ್​ ಕೊನೆಗೂ ಇಂಧನ, ಹಣಕಾಸು ಪಡೆಯುವಲ್ಲಿ ಯಶಸ್ವಿಯಾಗಿದೆ.
ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್, ಎಂ. ಕೃಷ್ಣಪ್ಪ, ಕೃಷ್ಣಭೈರೇಗೌಡ, ರಾಮಲಿಂಗ ರೆಡ್ಡಿ, ರೂಪ ಶಶಿಧರ್, ಶ್ಯಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್, ಡಾ. ಸುಧಾಕರ್, ಜಮೀರ್ ಅಹಮದ್, ಶಂಕರ್, ನಾಗೇಶ್, ದಿನೇಶ್ ಗುಂಡೂರಾವ್ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್ ಮೊದಲ ಪಟ್ಟಿಯಲ್ಲಿ ಹೆಚ್.ಡಿ ರೇವಣ್ಣ, ನಾಗನಗೌಡ ಕಂಟಕೂರ್, ಸಾ.ರ ಮಹೇಶ್, ಬಿ.ಎಂ ಫರೂಕ್, ಬಂಡೇಪ್ಪ ಕಾಶಂಪುರ, ಎನ್ ಮಹೇಶ್, ಪುಟ್ಟರಾಜು, ಎಚ್.ಕೆ ಕುಮಾರಸ್ವಾಮಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದ ಜೆಡಿಎಸ್​ ಶಾಸಕರು ಕೊನೆಗೂ ಪ್ರಮುಖ ಖಾತೆಗಳನ್ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಿಕೆಶಿಗೆ ಇಂಧನ ಖಾತೆ ಕೈತಪ್ಪಿದ್ದು, ಜೆಡಿಎಸ್​ ಇಂಧನ ಸೇರಿದಂತೆ ಹಣಕಾಸು, ಇಂಧನ, ಲೋಕೋಪಯೋಗಿ, ಸಹಕಾರ, ಅಬಕಾರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತೋಟಗಾರಿಕೆ, ಪೌರಾಡಳಿತ, ಸಣ್ಣ ನೀರಾವರಿ ಜೆಡಿಎಸ್​ ಪಾಲಿಗೆ ದೊರಕಿದೆ.
ಇನ್ನು ಕಾಂಗ್ರೆಸ್​ ಗೃಹ, ಕಂದಾಯ, ಪಂಚಾಯತ್​ರಾಜ್, ಆರೋಗ್ಯ, ಜಲಸಂಪನ್ಮೂಲ, ಆಹಾರ ಮತ್ತು ನಾಗರಿಕ ಪೂರೈಕೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐಟಿ ಬಿಟಿ, ವಸತಿ, ಗಣಿ, ಸಮಾಜ ಕಲ್ಯಾಣ, ಕೃಷಿ, ಬೆಂಗಳೂರು ಅಭಿವೃದ್ಧಿ, ಅಲ್ಪಸಂಖ್ಯಾತ ಮತ್ತು ವಕ್ಫ್​ ಖಾತೆ ಕಾಂಗ್ರೆಸ್​ ಪಾಲಿಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಸಂಜೆ 4,30ಗೆ ಸಚಿವ ಸಂಪುಟ ರಚನೆಯ ವಿವರ ಪ್ರಕಟಿಸುತ್ತೇವೆ: ವೇಣುಗೋಪಾಲ್

ಬೆಂಗಳೂರು: ಸಚಿವ ಸಂಪುಟ ರಚನೆ ಸಂಬಂಧ ಕಳೆದ ನಾಲ್ಕೈದು ದಿನಗಳಿಂದ ಮಾತುಕತೆ ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಮಾತುಕತೆ ನಡೆಸಿದ್ದು, ಸೌಹಾರ್ದಯುತ ನಿರ್ಧಾರಕ್ಕೆ ಬಂದಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ.
ದೇವೇಗೌಡ ಅವರ ಬೆಂಗಳೂರಿನ ನಿವಾಸದಲ್ಲಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಸಂಜೆ 4,30ಗೆ ಜಂಟಿ ಸುದ್ಧಿಗೋಷ್ಠಿ ನಡೆಸಿ ಸಚಿವ ಸಂಪುಟ ರಚನೆಯ ವಿವರ ಪ್ರಕಟಿಸುತ್ತೇವೆ ಎಂದು ತಿಳಿಸಿದರು.

22/12 ಖಾತೆ ಹಂಚಿಕೆ: ಕಾಂಗ್ರೆಸ್ ಜೆಡಿಎಸ್ ಜಂಟಿ ನಿರ್ಣಯ

ಬೆಳಗಾವಿ: 22/12 ಆಟಕ್ಕೆ ಜೆಡಿಎಸ್- ಕಾಂಗ್ರೆಸ್ ಒಮ್ನತಜ್ಜೆ ಬಂದಿವೆ. ಗೃಹ, ಕೃಷಿ, ಆರೋಗ್ಯ, ಕಂದಾಯ, ನಗರಾಭಿವೃದ್ಧಿ, ಮಹಿಳಾ & ಮಕ್ಕಳ ಕಲ್ಯಾಣ, ಜಲಸಂಪನ್ಮೂಲ, ವೈದ್ಯಕೀಯ, ವಸತಿ, ಸಮಾಜ ಕಲ್ಯಾಣ, ಕಾರ್ಮಿಕ, ಗಣಿ & ಭೂವಿಜ್ಞಾನ, ಗ್ರಾಮೀಣಾಭಿವೃದ್ಧಿ, ಒಳನಾಡು ಜಲಸಾರಿಗೆ, ಆಹಾರ & ನಾಗರಿಕ ಸರಬರಾಜು ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೈಗಾರಿಕೆ & ಸಕ್ಕರೆ ಹಾಗೂ ಇತರ ಪ್ರಮುಖ ಇಲಾಖೆಗಳು ಕಾಂಗ್ರೆಸ್ ಪಾಲಾಗಿವೆ.
ಮುಖ್ಯಮಂತ್ರಿ ಸೇರಿ, ಪ್ರಮುಖವಾದ ಇಂಧನ ಇಲಾಖೆ ಮತ್ತು ಇತರ ಇಲಾಖೆಗಳು ಹಣಕಾಸು, ಗುಪ್ತಚರ, ಯೋಜನೆ ಮತ್ತು ಸಾಂಖ್ಯಿಕ, ಸಣ್ಣ ನೀರಾವರಿ, ಪ್ರವಾಸೋದ್ಯಮ, ಸಾರಿಗೆ, ತೋಟಗಾರಿಕೆ ಸೇರಿ ಇತರ ಇಲಾಖೆಗಳು ಜೆಡಿಎಸ್ ಪಾಲಾಗಿವೆ. ಯಾರ್ಯಾರಿಗೆ ಯಾವ್ಯಾವ ಖಾತೆ ಸಿಗಲಿದೆ ಎಂಬ ಕುತೂಹಲ ಮತ್ತೆ ಮನೆ ಮಾಡಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.