ಉತ್ತಮ ಸಮಾಜಕ್ಕಾಗಿ

ಯುಗಾದಿ ಕರೆಯುವ ಹಾಡಿದು

0

♥♥♥♥♥♥♥♥♥♥♥

ಯುಗ ಯುಗಗಳ ಬೆಸೆಯುವ ಯುಗಾದಿ
ಬೇವು ಬೆಲ್ಲ ಕೂಡಿ ಕುಟ್ಟಿ ಸವಿಯ ಹಾಡಿದು..

ಮನ ಮನಗಳ ಮುಳ್ಳುಬೇಲಿ ಹೊಸಕಿ
ಭಾಷೆ-ಭಾವ ದಾಟಿ ಬಾಳುವ ಹಾಡಿದು

ನಲುವಿನ ಮರದಲಿ ಹೊಸಚಿಗುರು ಚಿಗುರಿ
ಬೊಗಸೆಯಲಿ ತುಸು ಹೊಸತನ ತಂದ ಹಾಡಿದು…

ಸುಖ-ದುಃಖ ಎರಡು ಸಮವಾಗಿ ಸ್ವೀಕರಿಸಿ
ಕಾಲ ಚಕ್ರದ ಗತಿಯ ನೆನೆವ ಕ್ಷಣದ ಹಾಡಿದು

ಮನದ ಕೋಣೆಗಳ ತೋರಣಗಳಿಂದ ಸಿಂಗರಿಸಿ
ಶುಭಾಶುಭದ ಫಲ ಹೊತ್ತು ಬರುವ ಯುಗಾದಿ ಕರೆಯುವ ಹಾಡಿದು…

ಭೂಮಿ ಬಾನು , ನೀರು ಬೆಂಕಿ ಸರಿಸಿ
ಬದುಕು ತಿದ್ದಿ ಬೆಳಗು ಬರಲು ಕುಣಿವ ಹಾಡಿದು…..

ಪ್ರೇಮಾ……

Leave A Reply

 Click this button or press Ctrl+G to toggle between Kannada and English

Your email address will not be published.