ಉತ್ತಮ ಸಮಾಜಕ್ಕಾಗಿ

ಜಿಲ್ಲೆಯಲ್ಲಿ 23 ಡೆಂಘೀ ಪ್ರಕರಣಗಳು ಪತ್ತೆ ಸೊಳ್ಳೆಗಳ ನಿಯಂತ್ರಣವೇ ರೋಗದ ಹತೋಟಿಗೆ ಮುಖ್ಯ ವಿಧಾನ

23 Dengue cases were detected in the district and mosquito control was the main method of control of the disease

0

ಬೆಳಗಾವಿ:  (news belagavi ಜಿಲ್ಲೆಯಲ್ಲಿ ಜನೇವರಿ 2018 ರಿಂದ ಜೂನ್ 2018 ರವರೆಗೆ ಒಟ್ಟು 23 ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಥಣಿ, ಹುಕ್ಕೇರಿ ಹಾಗೂ ಖಾನಾಪೂರ ತಾಲೂಕುಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ 6 ಪ್ರಕರಣಗಳು, ಚಿಕ್ಕೋಡಿ ಹಾಗೂ ಸವದತ್ತಿಯಲ್ಲಿ ತಲಾ 4, ಬೆಳಗಾವಿ ಗ್ರಾಮೀಣದಲ್ಲಿ 3, ಬೈಲಹೊಂಗಲ ಮತ್ತು
ರಾಮದುರ್ಗದಲ್ಲಿ ತಲಾ 2, ಗೋಕಾಕ ಮತ್ತು ರಾಯಬಾಗದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. 2017 ರಲ್ಲಿ ಜಿಲ್ಲಾದ್ಯಂತ 51 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು.

34 ಚಿಕೂನ್‍ಗುನ್ಯ ಪ್ರಕರಣ:
ಜಿಲ್ಲೆಯಲ್ಲಿ ಜನೇವರಿ 2018 ರಿಂದ ಜೂನ್ 2018 ರವರೆಗೆ ಒಟ್ಟು 34 ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪೂರ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಯಾವುದೇ
ಪ್ರಕರಣಗಳು ದಾಖಲಾಗಿರುವುದಿಲ್ಲ.

ಬೆಳಗಾವಿ ನಗರದಲ್ಲಿ 20 ಪ್ರಕರಣಗಳು, ರಾಯಬಾಗನಲ್ಲಿ 8, ಅಥಣಿಯಲ್ಲಿ 3, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಹಾಗೂ ಸವದತ್ತಿಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ. 2017 ರಲ್ಲಿ ಜಿಲ್ಲಾದ್ಯಂತ 11 ಪ್ರಕರಣಗಳು ದಾಖಲಾಗಿದ್ದವು.

ಏನಿದು ಡೆಂಘೀ ಜ್ವರ? :
ಡೆಂಘೀ ಜ್ವರ ವೈರಸ್‍ನಿಂದ ಹರಡುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ
ಮನುಷ್ಯರನ್ನು ಕಚ್ಚುತ್ತವೆ.

ಡೆಂಘೀ ರೋಗದ ಲಕ್ಷಣಗಳು:
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ
ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.

ಚಿಕೂನ್‍ಗುನ್ಯ ರೋಗದ ಲಕ್ಷಣಗಳು:
ಚಿಕೂನ್‍ಗುನ್ಯ ಮತ್ತು ಡೆಂಘೀ ರೋಗಗಳು ಸಾಧಾರಣವಾಗಿ ಒಂದೇ ತೆರನಾದ ಲಕ್ಷಣಗಳನ್ನು ಹೊಂದಿರುತ್ತವೆ. ಜ್ವರ ಬರುವುದು, ಕಣ್ಣು
ಕೆಂಪಾಗುವುದು, ಕೈ ಕಾಲಿನಲ್ಲಿ ನೋವು, ಕೀಲು ಸಂದುಗಳಲ್ಲಿ ನೋವಿನಿಂದ ಕೈ ಕಾಲುಗಳನ್ನು ಅಲುಗಾಡಿಸಲಿಕ್ಕೆ ಕಷ್ಟವಾಗುತ್ತದೆ.
ಇವೆಲ್ಲ ಲಕ್ಷಣಗಳೊಂದಿಗೆ ಸುಸ್ತು ಆಯಾಸ ಉಂಟಾಗುತ್ತದೆ.

ನಿಯಂತ್ರಣ ಹೇಗೆ:
ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಘೀ ಹಾಗೂ ಚಿಕೂನ್‍ಗುನ್ಯ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲುಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ, ಉಪಯೋಗಿಸಿದ ಒರಳುಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ, ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಎಲ್ಲ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‍ಕೂಲರ್ ಇತ್ಯಾದಿಗಳನ್ನು ತಪ್ಪದೇ ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಮನೆಯ ಸುತ್ತಮುತ್ತಲಿನ ತ್ಯಾಜ್ಯ ವಸ್ತುಗಳಲ್ಲಿ (ಟೈರ್, ತೆಂಗಿನ ಚಿಪ್ಪ, ಒಡೆದ ಬಾಟಲಿ) ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಅವುಗಳನ್ನು ವಿಲೇವಾರಿ ಮಾಡುವುದು.

ನೀರಿನ ಅಭಾವ ಇರುವ ಸಂದರ್ಭಗಳಲ್ಲಿ ಶೇಖರಿಸಲ್ಪಟ್ಟ ನೀರನ್ನು ಸರಿಯಾಗಿ ಸೋಸಿ ಮತ್ತೆ ಸ್ವಚ್ಛಗೊಳಿಸಿ ನೀರನ್ನು ಬಳಸುವುದು. ಮನೆಯ ಕಿಟಕಿ, ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳುವುದು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು
ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ
ಎಚ್ಚರ ವಹಿಸಬೇಕು.

ಜಿಲ್ಲಾಸ್ಪತ್ರೆ-ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ: ಡೆಂಘೀ ರೋಗ ಬಂದಾಗ ರಕ್ತದಲ್ಲಿರುವ ಪ್ಲೇಟ್‍ಲೆಟ್‍ಗಳ ಕೊರತೆಯಾಗುವುದೆಂಬ ವದಂತಿ ಜನಸಾಮಾನ್ಯರಲ್ಲಿ ಹರಡಿದೆ. ಆದರೆ ಪ್ಲೇಟ್‍ಲೆಟ್ ಕಡಿಮೆಯಾದ ರೋಗಿಗಳಿಗೆ ವೈದ್ಯರು ನೀಡುವ ಐ.ವಿ. ದ್ರಾವಣದಿಂದ ತಕ್ಷಣ ಪ್ಲೇಟ್‍ಲೆಟ್ ಪ್ರಮಾಣ ಹೆಚ್ಚಾಗಿ ರೋಗಿಯು ಚೇತರಿಸಿಕೊಳ್ಳುತ್ತಾನೆ.

ರೋಗ ಗಂಭೀರ ಸ್ಥಿತಿಯಲ್ಲಿರುವ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ಚಿಕಿತ್ಸೆ
ಲಭ್ಯವಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.