ಉತ್ತಮ ಸಮಾಜಕ್ಕಾಗಿ

25 ನೇ ರಜತ ಪಟ್ಟಾಧಿಕಾರ ಮಹೋತ್ಸವ ನಾಳೆಯಿಂದ ಮುಕ್ತಿಮಠದ ಜಾತ್ರಾ ಮಹೋತ್ಸವ

0

ಬೆಳಗಾವಿ:Belgaum News  ಪ್ರತಿ ವರ್ಷದಂತೆ ಈ ವರ್ಷವು ಶ್ರೀಕ್ಷೇತ್ರ ಮುಕ್ತಿಮಠದ ಜಾತ್ರಾ ಮಹೋತ್ಸವನ್ನು ಇದೇ ತಿಂಗಳ 14 ರಿಂದ 18 ವರೆಗೆ 5 ದಿನಗಳ ಜಾತ್ರೆ ಅತೀ ವಿಜೃಂಭಣೆಯಿಂದ ಜರಗುವದು. ರೈತ ಬಾಂಧವರಿಗೆ ಹಾಗೂ ಎಲ್ಲ ಸರ್ವ,ಧÀರ್ಮ ಭಕ್ತಾಧಿಗಳು ಪಾಲ್ಗೋಳಬೇಕೆಂದು ಶ್ರೀ ತಪೋರತ್ನ ಧರ್ಮಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ಧರ್ಮಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾವಿಗಳಿಗೆ 25 ನೇ ರಜತ ಪಟ್ಟಾಧಿಕಾರ ಮಹೋತ್ಸವ- Tarun krantiನಗರದ ಹೊರವಲಯದಲ್ಲಿರುವ ಭೂತರಾಮನಹಟ್ಟಿಯ ಶ್ರೀ ಮುಕ್ತಿಮಠ ಸಭಾಭವನದಲ್ಲಿ ಶುಕ್ರವಾರ 12 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.
ಶ್ರೀ ಕ್ಷೇತ್ರ ಮುಕ್ತಿಮಠ 25 ವರ್ಷ ಸಂವತ್ಸರಗಳು ಪೂರೈಸಿಕೊಂಡು ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡು ಬಂದಿದೆ. ಶ್ರೀ ತಪೋರತ್ನ ಧರ್ಮಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾವಿಗಳಿಗೆ 25 ನೇ ರಜತ ಪಟ್ಟಾಧಿಕಾರ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ಶಾಲೆ.ಕಟ್ಟಡಗಳು,ಬಡಮಕ್ಕಳಿಗೆ ಉಚಿತ ವಸತಿ ಮತ್ತು ಪ್ರಸಾದ ನಿಲಯ ಮಂಗಲ ಕಾರ್ಯಲಯ,ಕೈಲಾಸ ಪರ್ವತ ನಿರ್ಮಾಣ,ಮಹಾದ್ವಾರ,ಭಕ್ತರ ವಸತಿ ಗೃಹ, ಹಲವಾರು ಧರ್ಮಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಾವು ಪೂಜಿಸುವ ಗೋ-ಸಂವರಕ್ಷಣೆ ಕಳೆದ 20 ವರ್ಷಗಳಿಂದ ಅದರ ಪಾಲನೆ ಪೊಷನೆಯನ್ನು ಧರ್ಮದ ತವರಾಗಿರುವ ಮುಕ್ತಿಮಠದಲ್ಲಿ ನಡೆಯುತ್ತಿದೆ.ರೈತರು ದೇಶದ ಆಸ್ತಿ ಹೇಳಿದ ಲಾಲ್ ಬಹದ್ಧೂರ ಶಾಸ್ತ್ರೀ ಸಾರಿದಂತಹ `ಜೈ ಜವಾನ್ ಜೈ ಕಿಸಾನ್ ‘ ಅದೇ ರೀತಿ ಶ್ರೀಮಠದ ಸಂದೇಶ ಮಾನವ ಧರ್ಮಕ್ಕೆ ಜಯವಾಗಲಿ. ಎಲ್ಲ ಜಾತಿ ಧರ್ಮಗಳು ಒಂದೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಯ್ಯ ಸ್ವಾಮಿಗಳು ಹಿರೇಮಠ, ಗೊ-ಸೇವಾ ಕಾರ್ಯಕರ್ತ ಗಣೇಶ ಮುಕ್ತಿಮಠ,ಐ.ಜಿ.ಹಿರೇಮಠ,ನಿವೃತ್ತ ಎಸ್‍ಪಿ. ಹಾಲಪ್ಪನಾಯಕ,ಬಿ.ಬಿ ಪಾಟೀಲ,ಲಗಮಣ್ಣ ಚೌಗಲಾ,ಎಸ್ ಸಿ.ಎಸ್ ನೌಕರ ಸಂಘದ ಅಧ್ಯಕ್ಷ ರಾಜು ಕೊಲಕಾರ, ಹಿರಿಯ ಸಾಹಿತಿಕಾರಾದ ಬಸವರಾಜ ಸುಣಗಾರ,ನಿವೃತ್ತ ಇಂಜಿನಿಯರ್ ಎಸ್.ಬಿ.ಕಾದರೋಳ್ಳಿಮಠ ಹಾಗೂ ಉಪಸ್ಥಿತರಿದ್ದರು.

belagavisuddi   25th silver jubilee celebrations for Dharmashree Shiva Someswara Shivacharya Mahaswavi

Leave A Reply

 Click this button or press Ctrl+G to toggle between Kannada and English

Your email address will not be published.