ಉತ್ತಮ ಸಮಾಜಕ್ಕಾಗಿ

ಬಸ್ಸಿಗೆ, ಎದುರಿನಿಂದ ವೇಗವಾಗಿ ಬಂದ ಕಾರು ಮುಖಾಮುಖಿ

news belagavi

0

ಬೆಳಗಾವಿ:(news belagavi) ಬೆಳಗಾವಿಯಿಂದ ಖಾನಾಪುರದತ್ತ ಹೊರಟಿದ್ದ ಸರಕಾರಿ ಬಸ್ಸಿಗೆ, ಎದುರಿನಿಂದ ವೇಗವಾಗಿ ಬಂದ ಕಾರು ಮುಖಾಮುಖಿ ಗುದ್ದಿದ್ದರಿಂದ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲಿ ಅಸುನೀಗಿದ್ದಾನೆ ಇಂದು ಮಧ್ಯಾಹ್ನ ಖಾನಾಪುರ ರಸ್ತೆಯ ಇದ್ದಿಲಹೊಂಡ ಬಳಿ ದುರ್ಘಟನೆ ನಡೆದಿದೆ. ಕಸಾಯಿ ಗಲ್ಲಿಯ ರಮೇಶ ಅಶೋಕ ತಹಶೀಲದಾರ (28) ಹಾಗೂ ಹಳೆ ಗಾಂಧಿ ನಗರದ ದಾಮೋದರ ತಿಬಿಲೆ(24) ಮೃತಪಟ್ಟವರು.
ರಮೇಶ ಸ್ಥಳದಲ್ಲೇ ಅಸುನೀಗಿದರೆ, ದಾಮೋದರ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಇನ್ನೂಳಿದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿ ಐವರು ಯುವಕರು ಗೋವೆಗೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಖಾನಾಪುರ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.