ಉತ್ತಮ ಸಮಾಜಕ್ಕಾಗಿ

ಉಗಾರ ; ಏ.10 ರಂದು ವಿದ್ಯುತ್ ನಿಲುಗಡೆ: ಹಾಗು ಏ.15 ರಂದು ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆ

6th Class Entrance Examination for Housing Schools on April 15

0

ಉಗಾರ ; ಏ.10 ರಂದು ವಿದ್ಯುತ್ ನಿಲುಗಡೆ
ಬೆಳಗಾವಿ: (newsbelagavi)110/33/11 ಕೆವ್ಹಿ ಉಗಾರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ., ಅಧಿಕಾರಿಗಳು, ಯಂತ್ರೋಪಕರಣಗಳ ಮೇಲೆ ದುರಸ್ತಿ ಕಾಮಗಾರಿ ಕೈಗೊಳ್ಳುವವರಿದ್ದು, ಅದಕ್ಕೆ ಆ ದಿವಸ ಕಾಗವಾಡ, ಶೇಡಬಾಳ, ಕಲ್ಲಾಳ, ಮಂಗಸೂಳಿ, ಲೋಕುರ, ಉಗಾರ ಖುರ್ದ, ಉಗಾರ ಬಿಕೆ ಕುಸನಾಳ, ಮಳವಾಡ, ಪರಮೇಶ್ವರವಾಡಿ, ಫರೀದಖಾನವಾಡಿ, ವಿನಾಯಕವಾಡಿ ಹಾಗು ಉಗಾರ ಉಪವಿಭಾಗದ ಗ್ರಾಮಗಳಿಗೆ ಏಪ್ರಿಲ್ 10 ರಂದು ಬೆಳಿಗ್ಗೆ 08 ರಿಂದ ಸಾಯಂಕಾಲ 4 ಗಂಟೆಯವರೆಗೆ, ವಿದ್ಯುತ್ ವ್ಯತ್ಯಯವಾಗುವದಿದ್ದು, ಸಾರ್ವಜನಿಕರು ಹಾಗು ರೈತರು ಮತ್ತು ವಿದ್ಯುತ್ ಗ್ರಾಹಕರು, ಹೆಸ್ಕಾಂ ಜೊತೆಗೆ ಸಹಕರಿಸಬೇಕು ಎಂದು ಉಗಾರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ ಮುಂದೂಡಿಕೆ
ಬೆಳಗಾವಿ: ಬೆಳಗಾವಿ ನಗರದ ವಿವಿಧ ಪೋಲಿಂಗ್ ಭೂತಗಳಲ್ಲಿ ಜಿಲ್ಲಾಡಳಿತ ವತಿಯಿಂದ ಮತದಾರರ ಮಿಂಚಿನ ನೋಂದಣಿ ಅಭಿಯಾನ ಇರುವುದರಿಂದ ಏಪ್ರಿಲ್ 8 ರಂದು ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ, 33/11 ಕೆವಿ ಫೋರ್ಟ, 110 ಕೆವ್ಹಿ ಕಣಬರ್ಗಿ ಮತ್ತು 110 ಕೆವ್ಹಿ ವಡಗಾಂವಿ ಬೆಳಗಾವಿಯ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಫೀಡರ್‍ಗಳು ಎಫ-1 ಅಜಾಧನಗರ ಎಫ್-2 ಫೋರ್ಟ ರೋಡ್, ಎಫ್-8 ಯಮನಾಪೂರ ಮೇಲೆ ಬರುವ ಎಲ್ಲಾ ಪ್ರದೇಶಗಳು ಮತ್ತು 110ಕೆವ್ಹಿ ವಡಗಾಂವಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ಫೀಡರಿನ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಯುಜಿ ಕೇಬಲ್ ಕೆಲಸ ಕೈಗೊಳ್ಳವುದಕ್ಕಾಗಿ ನೀಡಲಾದ ಏಪ್ರಿಲ್ 8ರ ಪ್ರಸ್ಥಾಪಿತ ವಿದ್ಯುತ್ ನಿಲುಗಡೆಯನ್ನು“ಮುಂದೂಡಲಾಗಿದೆ” ಎಂಬ ಮಾಹಿತಿಯನ್ನು ಗ್ರಾಹಕರ ಹಿತದೃಷ್ಟಿಯಿಂದ ಬೆಳಗಾವಿ ಹೆಸ್ಕಾಂ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.15 ರಂದು ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆ
ಬೆಳಗಾವಿ: 2018-19ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ, ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ, ಸಂಗೊಳ್ಳಿ ರಾಯಣ್ಣ ವಸತಿ ಶಾಲೆಗಳಿಗೆ 6 ನೇ ತರಗತಿ ಪ್ರವೇಶಕ್ಕಾಗಿ 2018ರ ಫೆಬ್ರುವರಿ 18 ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಏಪ್ರಿಲ್ 15 ರಂದು ಭಾನುವಾರ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ನಡೆಯಲಿವೆ.
ಈಗಾಗಲೇ ವಿದ್ಯಾರ್ಥಿಗಳಿಗೆ ವಿತರಿಸಿದ ಪ್ರವೇಶ ಪತ್ರ (ಹಾಲ್ ಟಿಕೆಟ್)ದಲ್ಲಿ ಗೊತ್ತುಪಡಿಸಿರುವ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದೊಂದಿಗೆ ಹಾಜರಾಗಬೇಕೆಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.6th Class Entrance Examination for Housing Schools on April 15

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.