ಉತ್ತಮ ಸಮಾಜಕ್ಕಾಗಿ

7ಸ್ಟಾರ್ ಕ್ರೆಸಿಲ್ ರೇಟಿಂಗ್ ಪಡೆದ ನಿತ್ಯ ಚೈತನ್ಯ ವಸತಿ ಕಾಂಪ್ಲೆಕ್ಸ್

Daily Star Crescent Rating Complex 7 Star Cresil Rating

0

ಬೆಳಗಾವಿ: ( news belgaum) ನಗರದಲ್ಲಿ ನಿರ್ಮಿತ ‘ನಿತ್ಯ ಚೈತನ್ಯ’ ವಸತಿ ಸಮುಚ್ಛಯ ತನ್ನ ಗುಣಮಟ್ಟಕ್ಕೆ ಕ್ರೆಸಿಲ್ ನಿಂದ 7 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ರೆಸಿಲ್ ಪ್ರಾದೇಶಿಕ ಮುಖ್ಯಸ್ಥ ಅಜಯ್ ಆನಂದ್ ಕರ್ನಾಟಕ ರಾಜ್ಯದಲ್ಲಿ ಕ್ರೆಸಿಲ್‌ನಿಂದ 7 ಸ್ಟಾರ್ ರೇಟಿಂಗ್ ಪಡೆದ 4 ವಸತಿ ಸಮುಚ್ಛಯಗಳು ಮಾತ್ರ ಇವೆ. ಆ ಪೈಕಿ ಬೆಳಗಾವಿಯ ಸುಭಾಷಚಂದ್ರ ನಗರದಲ್ಲಿ ಚೈತನ್ಯ ಅಸೋಸಿಯೇಟ್ಸ್‌ನವರು ನಿರ್ಮಿಸಿರುವ ‘ನಿತ್ಯ ಚೈತನ್ಯ’ ವಸತಿ ಸಮುಚ್ಛಯ ಅವುಗಳಲ್ಲಿ ಐದನೇಯದ್ದಾಗಿದೆ ಎಂದರು. 7 ಸ್ಟಾರ್ ರೇಟಿಂಗ್ ಪಡೆದ ಉತ್ತರ ಕರ್ನಾಟಕದ ಮೊದಲ ವಸತಿ ಸಮುಚ್ಛಯ ಕಟ್ಟಡ ಇದಾಗಿದೆ ಎಂದರು ಅಜಯ.

ನಿರ್ಮಾಣ ಹಂತದಲ್ಲಿಯೇ ವಿವಿಧ ಅಂಶಗಳನ್ನು ಪರಿಗಣಿಸಿ, ಈ ಕಟ್ಟಡಕ್ಕೆ ಫೈವ್ ಸ್ಟಾರ್ ರೇಟಿಂಗ್ ನೀಡಲಾಗಿತ್ತು. ಈಗ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಕಟ್ಟಡದ ಗುಣಮಟ್ಟ ಮತ್ತಿತರ ಅಂಶಗಳನ್ನು ಪರಿಗಣಿಸಿ 7 ಸ್ಟಾರ್ ರೇಟಿಂಗ್ ನೀಡಲಾಗಿದೆ ಎಂದರು. ಚೈತನ್ಯ ಅಸೊಸಿಯೇಟ್ಸ್‌ನ ಚೈತನ್ಯ ಕುಲಕರ್ಣಿ ಅವರು ಮಾತನಾಡಿ ಗ್ರಾಹಕರ ಜತೆ ಮಾಡಿಕೊಳ್ಳಲಾದ ಒಪ್ಪಂದದ ಹೊರತಾಗಿ ಇತರ 13 ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ ಎಂದರು.

ವಸತಿ ಸಮುಚ್ಛಯದಲ್ಲಿ ಡೊಮೆಸ್ಟಿಕ್ ಅನಿಲದ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ಉಳಿತಾಯಕ್ಕೆ ಮೋಶನ್ ಸೆನ್ಸರ್ ಅಳವಡಿಕೆ ಮಾಡಲಾಗಿದೆ. ವೈಫೈ ಆಧರಿಸಿ 8 ಸೆಕ್ಯೂರಿಟಿ ಕ್ಯಾಮರಾ ಅಳವಡಿಸಿದ್ದು, ಜಗತ್ತಿನ ಯಾವುದೇ ಭಾಗದಿಂದ ಮನೆಯ ಮಾಲೀಕರು ತಮ್ಮ ಮನೆಯ ಮೇಲೆ ನಿಗಾ ಇರಿಸಬಹುದು ಎಂದರು. ಮನೆಗಳ ವಾರ್ಷಿಕ ನಿರ್ವಹಣಾ ವೆಚ್ಛ ತಗ್ಗಿಸಲು ಸಹ ವಿನೂತನ ಆಯಾಮ ಅಳವಡಿಸಲಾಗಿದೆ ಎಂದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.