ಉತ್ತಮ ಸಮಾಜಕ್ಕಾಗಿ

‘ಕ್ವಿಟ್ ಇಂಡಿಯಾ’ಗೆ 76 ವರ್ಷ, ದೇಶಾದ್ಯಂತ ಸಂಭ್ರಮ

Quit India Movement

0

ಬೆಳಗಾವಿ:(news belgaum) 16ನೇ ಶತಮಾನದ ಪ್ರಾರಂಭದಿಂದ ಸುದೀರ್ಘ 342 ವರ್ಷಗಳ ಬ್ರಿಟಿಷ್ ದಬ್ಬಾಳಿಕೆ ಮೆಟ್ಟಿ ನಿಂತ ಆಗಸ್ಟ್ ಮಾರ್ಚಗೆ ಇಂದು 76 ವರ್ಷ…! ಭಾರತ ಬಿಟ್ಟು ತೊಲಗಿ( Quit India Movement) ಎಂಬ ಘೋಷಣೆಯನ್ನು ಅಂದಿನ ಆಗಸ್ಟ್‌ 8ರ ಬಾಂಬೆ ಕಾಂಗ್ರೆಸ್ ಸಮಾವೇಶದಲ್ಲಿ ಮೊಳಗಿಸುವ ಮೂಲಕ ಬ್ರಿಟಿಷ್ ಅಧಿಪತ್ಯ ಅಂತ್ಯಗಾಣಿಸಲು ಭಾರತೀಯರು ಸಿದ್ದರಾದರು. ಇದೇ India’s Final Push for Freedom ಎಂದೇ ಇತಿಹಾಸದಲ್ಲಿ ಬಿಂಬಿತವಾಯಿತು.
News Belgaum-‘ಕ್ವಿಟ್ ಇಂಡಿಯಾ’ಗೆ 76 ವರ್ಷ, ದೇಶಾದ್ಯಂತ ಸಂಭ್ರಮ News Belgaum-‘ಕ್ವಿಟ್ ಇಂಡಿಯಾ’ಗೆ 76 ವರ್ಷ, ದೇಶಾದ್ಯಂತ ಸಂಭ್ರಮ 1 News Belgaum-‘ಕ್ವಿಟ್ ಇಂಡಿಯಾ’ಗೆ 76 ವರ್ಷ, ದೇಶಾದ್ಯಂತ ಸಂಭ್ರಮ 2 News Belgaum-‘ಕ್ವಿಟ್ ಇಂಡಿಯಾ’ಗೆ 76 ವರ್ಷ, ದೇಶಾದ್ಯಂತ ಸಂಭ್ರಮ 3 News Belgaum-‘ಕ್ವಿಟ್ ಇಂಡಿಯಾ’ಗೆ 76 ವರ್ಷ, ದೇಶಾದ್ಯಂತ ಸಂಭ್ರಮ 4ಮಹಾತ್ಮಾ ಗಾಂಧೀಜಿ ಅಂದು ನೀಡಿದ ಈ ಕರೆ ಸ್ವಲ್ಪ ತೀವ್ರಗಾಮಿಯಾಗಿಯೇ ಬ್ರಿಟಿಷ್ ಅಧಿಪತಿ(Secretary of State)ಗೆ ಭಾಸ ಮೂಡಿಸಿತು. ಎರಡನೇ ವಿಶ್ವಯುದ್ಧದ ಲಘುಬಗೆಯಲ್ಲಿದ್ದ ಬ್ರಿಟೀಷ್ ಪಾರ್ಲಿಮೆಂಟ್ & ಭಾರತೀಯ ಅಧಿಪತಿ ಮತ್ತು ಪ್ರಾಂತಗಳ ವೈಸರಾಯಗಳು ತೀವ್ರ ಚಿಂತಿತರಾದ ಐತಿಹಾಸಿಕ ದಿನವೂ ‘ಇಂಡಿಯಾ ಆಗಸ್ಟ್’ ಎಂದೇ ಚಿರಪರಿಚಿತವಾಗಿ ದಾಖಲಾಗಿದೆ. ಬಾಂಬೆ ಗ್ವಾಲಿ ಮೈದಾನದಲ್ಲಿ ಮಹಾತ್ಮಾ ಗಾಂಧೀಜಿ ಅವರು ಅಂದು ಮಾಡು ಇಲ್ಲವೇ ಮಡಿ( Do or Die) ಎಂಬ ಕರೆ ಕೊಟ್ಟಿದ್ದು ಭಾರತೀಯರನ್ನು ಸಿಡಿದೆಬ್ಬಿಸಿತು. ಎರಡನೇ ಮಹಾಯುದ್ಧದಲ್ಲಿ ತೊಡಗಿದ್ದ ಬ್ರಿಟಿಷ್ ಅಧಿಪತ್ಯ ಮಾತ್ರ …ಯುದ್ದ ಮುಗಿದ ಮೇಲೆಯೇ ಭಾರತಕ್ಕೇ ಸ್ವಾತಂತ್ರ್ಯ… ಎಂದು ಘೋಷಿಸಿದ್ದರಿಂದಲೇ ಗಣರಾಜ್ಯ ಸ್ಥಾಪನೆ (Independent Republic India) ಸ್ಥಾಪನೆಗೆ ಮುಂದಿನ ಐದು ವರ್ಷ ಅಂದರೆ 1947ರವರೆಗೆ ಕಾಯಬೇಕಾಯಿತು.
ದೇಶದ ತುಂಬ ಸಣ್ಣಪುಟ್ಟ ಗದ್ದಲ ಗಲಾಟೆಗಳು ಆ ಸಂದರ್ಭ ಪ್ರಾರಂಭವಾದ್ದರಿಂದ ಬ್ರಿಟೀಷರು ಸಾವಿರಾರು ಭಾರತೀಯ ನಾಯಕರನ್ನು ಮುಂದಿನ ಮೂರು ವರ್ಷಗಳ (1945)ಕಾಲ ಬಂಧಿಯಾಗಿ ಇರಿಸುವ ಪ್ರಯತ್ನ ಮಾಡಿ ಕ್ವಿಟ್ ಚಳುವಳಿಯ ಬಲ ತಗ್ಗಿಸಿದರು. ಭಾರತೀಯರಿಗೆ ಸ್ವಾತಂತ್ರ್ಯ ಬಿಟ್ಟುಕೊಡುವ ನಿರ್ಧಾರಕ್ಕೆ ಆಗಲೇ ಬ್ರಿಟಿಷ್ ಸಾಮ್ರಾಜ್ಯ ಸಹ ಮಾನಸಿಕವಾಗಿ ಬಂದಿತ್ತು. ಭಾರತ ಸ್ವಾತಂತ್ರ್ಯ ಕ್ವಿಟ್ ಇಂಡಿಯಾ ಚಳುವಳಿಯಲ್ಲೇ ಸಿಕ್ಕಂತೆ ಭಾಸವಾದರೂ ಅಧಿಕೃತವಾಗಿ ಬ್ರಿಟೀಷರು ಕಾಲ್ಕಿತ್ತಿದ್ದು 1947ರ ಆಗಸ್ಟ್ 15 ಎನ್ನುವುದು ನಮಗೆ ಗಮನಾರ್ಹ.

ಭಾರತೀಯರಿಗೆ ಐತಿಹಾಸಿಕ ದಿನವಾದ ಕ್ವಿಟ್ ಇಂಡಿಯಾ ಚಳುವಳಿಗೆ ಈಗ 76 ವರ್ಷ ಸಂದಿದೆ. ದೇಶವಾಸಿಗಳು ಈಗ ಪಕ್ಷ- ಪಂಗಡದ, ಜಾತಿ ಬೇಧದ ಆಚೆಗೆ ಚಳುವಳಿಯ ಮೆಲುಕು ಹಾಕಿ ಇಂದು ಸಂಭ್ರಮ ಪಡುತ್ತಿದ್ದಾರೆ. ಸ್ವತಂತ್ರ ಪಡೆದ ಭಾರತ ಮಾತ್ರ ಎಷ್ಟು ಸುಧಾರಿಸಿದೇ ಎಂದು ಮೆಲಕು ಹಾಕಿದರೆ ಅಷ್ಟೇನಿಲ್ಲ ಎನ್ನಬಹುದಷ್ಟೇ. ಇಂದು ಹಲವು ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರ, ದುರಾಡಳಿತ, ಸ್ವಜನಪಕ್ಷಪಾತ, ತೋಳ್ಬಲ, ಜಾತಿ- ಧರ್ಮ- ಭಾಷೆಗಳ ಬೇದ, ಬಡತನ, ಅನಕ್ಷರತೆ ಮತ್ತು ಅಸಹಿಷ್ಣುತೆಯನ್ನು ಎದುರಿಸುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ದಿನನಿತ್ಯ ಕಾಣುತ್ತಿದ್ದು ಇವುಗಳನ್ನು ಕ್ವಿಟ್ ಮಾಡುವ ಕಾಲ ಜನಾದೇಶದ ಮುಂದೆ ಪ್ರಸ್ತುತವಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಸಂಭ್ರಮ ನಡಿಗೆ: ಭಾರತ ಬಿಟ್ಟು ತೊಲಗಿ( Quit India Movement) ಚಳವಳಿಗೆ ಸಂದ 76 ವರ್ಷಗಳ ಸಂಭ್ರಮಾಚರಣೆ ನಿಮಿತ್ತ ಇಂದು ಮಾರ್ಚ ನಡಿಗೆ ನಗರದಲ್ಲಿ ನಡೆಯಿತು.
ನಗರದ ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಿಂದ, ಹಿಂಡಲಗಾ ಗಣಪತಿ ದೇವಸ್ಥಾನ ರಸ್ತೆಯ ಮಹಾತ್ಮಾ ಗಾಂಧೀಜಿ ಪುತ್ಥಳಿ ವೃತ್ತದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಶುಭ್ರ ವಸ್ತ್ರಧಾರಿಗಳಾಗಿ, ತಲೆಗೆ ಟೋಪಿ ಹೊತ್ತು ಶಾಂತಿಯ ಮಾರ್ಚ್ ನಡೆಸಿ ಸಂಭ್ರಮಾಚರಣೆ ನಡೆಸಿದರು. ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.