ಉತ್ತಮ ಸಮಾಜಕ್ಕಾಗಿ

ಹುಕ್ಕೇರಿ ಹಿರೇಮಠದಲ್ಲಿ 8 ನೇ ಮಾಸಿಕ ಸುವಿಚಾರ ಚಿಂತನಾ ಕಾರ್ಯಕ್ರಮ

8th Monthly wellness thinking program at Hukkeri Hirematha

0

ಬೆಳಗಾವಿ :  (news belagavi)  ವೀರಶೈವ ಧರ್ಮದ, ಧರ್ಮ ಸಂವಿಧಾನ ವಿಶೇಷವಾಗಿದೆ. ಪ್ರತಿಯೊಬ್ಬ ವೀರಶೈವರು 856 ಧರ್ಮದ ಕೋಡಿನ ಅನುಸಾರವಾಗಿ ನಡೆಯುವುದು ಅವಶ್ಯವಾಗಿದೆ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅವರು ರವಿವಾರ ನಗರದ ಲಕ್ಷ್ಮೀ ಟೆಕಟಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ನಡೆದ 8 ನೇ ಮಾಸಿಕ ಸುವಿಚಾರ ಚಿಂತನಾ ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಜರುಗಿದ ಶಿವದಿಕ್ಷ್ಯೆ ಹಾಗೂ ಅಯ್ಯಾಚಾರ ಕಾರ್ಯಕ್ರಮದ ಧಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

8 ಎಂದರೆ ಅಷ್ಟಾವರಣ, 5 ಎಂದರೆ ಪಂಚ್ಯಾಚಾರ 6 ಎಂದರೆ ಷಟಸ್ಥಲ್ ಈ ಮೂರು ತತ್ವಗಳ ತ್ರೀಪುಟಿಯನ್ನು ಅರಿತು ಆಚರಿಸಿದ್ದೆಯಾದರೆ ಪ್ರತಿಯೊಬ್ಬ ಜೀವಾತ್ಮ ಪರಮಾತ್ಮನಾಗಲು ಸಾಧ್ಯ. ಜಗದ್ಗುರು ಪಂಚ್ಯಾಚಾರರು, ಬಸವಾದಿ ಪ್ರಮುಖರು ಈ ತತ್ವಗಳನ್ನು ಅರಿತು ಆಚರಿಸಿ ಸಮಾಜಕ್ಕೆ ಭೋದಿಸಿದ್ದಾರೆ ಎಂದರು.

ಅಖಂಡ ಕರ್ನಾಟಕಕ್ಕೆ ಅನ್ಯಾಯವಾಗದೆ ಇರುವ ರೀತಿಯಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಬೇಕು. ಕರ್ನಾಟಕದ ಎರಡನೇ ರಾಜ್ಯಧಾನಿಯಂತೆ ಇರುವ ಬೆಳಗಾವಿಯ ಸುವರ್ಣ ವಿಧಾನ ಸೌಧೆಯಲ್ಲಿ ಕೆಲವೊಂದು ಸರಕಾರಿ ಕಚೇರಿಗಳನ್ನು ಸ್ಥಂಳಾತರಿಸುವ ಮುಖಾಂತರ ಇಲ್ಲಿನ ಉತ್ತರ ಕರ್ನಾಟಕದ ಜನರಿಗೆ ನ್ಯಾಯ ಒದುಗಿಸುವ ಕೆಲಸವನ್ನು ಮಾಡಬೇಕು. ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ ಅವರು ಈ ಕಾರ್ಯವನ್ನು ಮಾಡುತ್ತಾರೆಂಬ ವಿಶ್ವಾಸ ನಮ್ಮಗಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಪಕ್ಷಾತೀತವಾಗಿ ಧ್ವನಿ ಎತ್ತುವ ಕೆಲಸವನ್ನು ಈ ಭಾಗದ ಶಾಸಕರು, ಸಚಿವರು ಮಾಡಬೇಕು ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಹುಕ್ಕೇರಿಯ ಹಿರೇಮಠ ಜ್ಯಾತ್ಯಾತೀತವಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದೆ ಎಂದರು.

ನೂತನವಾಗಿ ವಿಧಾನ ಪರಿಷತ್‍ನ ಮುಖ್ಯ ಸಚೇತಕರಾಗಿ ಆಯ್ಕೆಯಾದ ಎಂಎಲ್‍ಸಿ ಮಹಾಂತೇಶ ಕವಟಗಿಮಠ ಅವರನ್ನು ಈ ಸಂದರ್ಭದಲ್ಲಿ ಶ್ರೀಮಠದಿಂದ ರಂಭಾಪುರಿ ಜಗದ್ಗುರುಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಂತೇಶ ಕವಟಗಿಮಠ, ಪಕ್ಷಾತೀತವಾಗಿ ನಾವೇಲ್ಲರೂ ಕೂಡಿಕೊಂಡು ಈ ನಮ್ಮ ಭಾಗಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುವುದಾಗಿ ತಿಳಿಸಿದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಈ ಭಾಗದ ಎಲ್ಲ ಜನಪ್ರತಿನಿಧಿಗಳು ಕೂಡಿಕೊಂಡು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ನಮ್ಮ ಭಾಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ 20 ಜನ ಶಿವದಿಕ್ಷ್ಯೆ 30 ಜನ ಅಯ್ಯಾಚಾರ ಪಡೆದುಕೊಂಡರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.