ಉತ್ತಮ ಸಮಾಜಕ್ಕಾಗಿ

ಪಂಡಿತ್ ಹಯವದನಜೋಷಿ ಶ್ರಧ್ದಾಂಜಲಿ ಸ್ವರ ಶ್ರಧ್ದಾಂಜಲಿ- ಹಿಂದೊಸ್ಥಾನಿ ಗಾಯನ

0

ಬೆಳಗಾವಿ- ಕೆ ಎಲ್ ಇ ವಿಶ್ವವಿದ್ಯಾಲಯದ ಸಂಗೀತ ಶಾಲೆಯಿಂದ ದಿವಂಗತ ಪಂಡಿತ ಹಯವದನ ಜೋಷಿ ಇವರ 7 ನೇ ಸ್ವರ ಶ್ರಧ್ದಾಂಜಲಿ ಕಾರ್ಯಕ್ರಮ ಜರುಗಲಿದೆ. ಇದರ ನಿಮಿತ್ತ ಪುಣೆಯ ವಿದೊಷಿ ಅನುರಾಧಾ ಕುಬೇರ ಇವರು ಹಿಂದೊಸ್ತಾನಿ ಶಾಸ್ತ್ರೀಯ ಗಾಯನ ನಡೆಸಿಕೊಡಲಿದ್ದಾರೆ. ಅನುರಾಧ ಕುಬೇರ ಇವರು ಬೇಂಡಿಬಜಾರ ಘುರಾಣಿ ವಿಧದ ಗಾಯಕಿಯಾಗಿದ್ದು ಇವರು ಪ್ರಾರಂಭದಲ್ಲಿ ಗುರು ಪಂಡಿತ ತ್ರಯಂಬಕರವ್ ಜಾನೊರಿಕರ ಬುವಾ ಇವರ ಬಳಿ 15 ವರ್ಷಗಳ ಕಾಲ ಸಂಗೀತ ವಿದ್ಯಾಭ್ಯಾಸ ಮಾಡಿ ಆಕಾಶವಾಣಿ ಸಂಗೀತದಲ್ಲಿ “ಎ” ಶ್ರೇಣೆ ಕಲಾವಿದೆ ಮತ್ತು ಸುಗಮ ಸಂಗೀತದಲ್ಲಿ “ಎ ಟಾಪ್” ಶ್ರೇಣೆಯ ಗಾಯಕಿಯಾಗಿದ್ದು ಸಂಗೀತ ಕ್ಷೇತ್ರದ ಸಾಧನೆಗಾಗಿ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಫೆಬ್ರವರಿ 11 ರಂದು ಸಂಜೆ 4.30ಕ್ಕೆ ಕೆಎಲ್‍ಇ ಸಂಗೀತ ಶಾಲೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಹುಬ್ಬಳ್ಳಿಯ ಡಾ.ಗಂಗೊಬಾಯಿ ಹಾನಗಲ್ ಫಡೇಶನ್ ಅಧ್ಯಕ್ಷರಾದ ಮನೋಜ್ ಹಾನಗಲ್ ಆಗಮಿಸಲಿದ್ದಾರೆ, ಗೌರವ ಅಥಿತಿಗಳಾಗಿ ಕೆಎಲ್‍ಇ ವಿಶ್ವ ವಿದ್ಯಾಲಯದ ಕುಲಪತಿ ಡಾ.ಚಂದ್ರಕಾಂತ ಕೊಕಾಟೆ, ಕುಲಸಚಿವ ಡಾ.ವಿಡಿ ಪಾಟೀಲ, ಡಾ.ರಾಜೇಂದ್ರ ಭಾಂಡಾಣಕರ ಉಪಸ್ಥಿತರಿರುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ಸ್ನೇಹ ರಾಜೊರಿಕರ ವಿನಂತಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.