ಉತ್ತಮ ಸಮಾಜಕ್ಕಾಗಿ

ಮೋಸ/ ವಂಚನೆ

0

ಬೆಳಗಾವಿ: ಅಂದು 03/02/2017 ರಂದು 12:30 ಗಂಟೆಗೆ ಫಿರ್ಯಾದಿ ಶ್ರೀ. ಅನೀಲ ಏಕನಾಥ ಕಾಗಲ ಇವರು ಮೇಜರ್ ರಾಮಸ್ವಾಮಿ ಎವಿನ್ಯೂ ರೋಡ, ಮರಠಾ ಕಾಲನಿಯಲ್ಲಿ ಕಾಗಲ್ ಹಾಸ್ಪೀಟಲ್ ಹೆಸರಿನಲ್ಲಿ ಆಸ್ಪತ್ರೆ ನಡೆಸುತ್ತಿದ್ದು, ಸದರಿಯವರ ಆಸ್ಪತ್ರೆಯಲ್ಲಿ ಆರೋಪಿತನಾದ ಅಬೀದ ದಸ್ತಗಿರ ಬೇಪಾರಿ ಸಾ: ಅಟೋ ನಗರ, ಬೆಳಗಾವಿ ಈತನು 9 ವರ್ಷಗಳಿಂದ ಕೆಲಸ ಮಾಡಿದ್ದು, ಆರೋಪಿತನು ಫಿರ್ಯಾದಿಯು ಆಸ್ಪತ್ರೆಯಲ್ಲಿ ಇಲ್ಲದ ಸಮಯದಲ್ಲಿ ಪಂಜಾಬ ನ್ಯಾಶನಲ್ ಬ್ಯಾಂಕ್‍ನ ಬೇರೆಬೇರೆ ಖಾತೆಗಳ 7 ಚೆಕ್‍ಗಳನ್ನು ಕಳ್ಳತನ ಮಾಡಿಕೊಂಡು ಹೋಗಿ 10 ಲಕ್ಷ ರೂಪಾಯಿಯಂತೆ ಎರಡು ಚೆಕ್ಕುಗಳನ್ನು ಮತ್ತು 5 ಲಕ್ಷ ರೂಪಾಯಿಯ 2 ಚಕ್ಕಗಳನ್ನು ಹಣ ಪಡೆಯುವ ಸಲುವಾಗಿ ಸದರಿ ಚೆಕ್ಕಗಳ ಮೇಲೆ ಫಿರ್ಯಾದಿಯ ಸಹಿಯಂತೆ ನಕಲಿ ಸಹಿ ಮಾಡಿ ಬ್ಯಾಂಕಿಗೆ ಹಾಕಿ ಹಣ ತೆಗೆದುಕೊಳ್ಳಲು ಪ್ರಯತ್ನಿಸಿ ವಂಚನೆ ಮಾಡಿ ಮೋಸಗೊಳಿಸಿದ್ದಲ್ಲದೆ ಫಿರ್ಯಾದಿಗೆ ತನ್ನ ಖಾತೆಗೆ 40 ಲಕ್ಷ ರೂಪಾಯಿಗಳನ್ನು ಹಾಕಬೇಕು ಇಲ್ಲವಾದರೆ ನಿಮಗೆ ನೋಡಿಕೊಳ್ಳುತ್ತೇನೆ ಅಂತಾ ಜೀವದ ಧಮಕಿ ಹಾಕಿದ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.