ಉತ್ತಮ ಸಮಾಜಕ್ಕಾಗಿ

ಸಾಧನೆಗೆ ವಯಸ್ಸು ಬೇಕಿಲ್ಲ. ಮನಸ್ಸು ಬೇಕು.ಎಸ್.ಎಚ್.ಮಿಟ್ಟಲಕೋಡ ಹೇಳಿದ್ದಾರೆ.

Achievement does not need age. The mind should be. S.H. Mittalakoda said.

0

ಬೆಳಗಾವಿ:(news belgaum) ಸಾಧನೆಗೆ ವಯಸ್ಸು ಬೇಕಿಲ್ಲ. ಮನಸ್ಸು ಬೇಕು. ಸಾಧಕರನ್ನು ಆರಂಭದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಆರಂಭದಲ್ಲಿಯೇ ಗುರುತಿಸಿ ಪೋಷಿಸಿದರೇ ಬೆಳೆಯುವ ಚಿಗುರು ಹೆಮ್ಮರವಾಗಿ ಬೆಳೆಯುತ್ತದೆ ಎಂದು ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಸೇವಾವಧಿಯಲ್ಲಿ ಕನ್ನಡದಲ್ಲಿ ಸುಮಾರು ಎರಡು ಸಾವಿರ ತೀರ್ಪುಗಳನ್ನು ಬರೆದು ಹೊಸ ದಾಖಲೆ ನಿರ್ಮಿಸಿರುವ ಎಸ್.ಎಚ್.ಮಿಟ್ಟಲಕೋಡ ಹೇಳಿದ್ದಾರೆ.
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನವು ತನ್ನ 12 ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರದಂದು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಆಯೋಜಿಸಿದ್ದ ಸಿರಿಗನ್ನಡ ಸಂಗೀತ ಸಮ್ಮೇಳನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳ ಪ್ರದಾನ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಧನೆಗೆ ವಯಸ್ಸು ಮುಖ್ಯ ಅಲ್ಲ. ತಾವು ಸಾಧಿಸಬೇಕು ಎಂದುಕೊಂಡಿರುವ ಗುರಿಯನ್ನು ಸಾಧಿಸುವ ಛಲ ಬೇಕು. ಸಾಧನೆಗೆ ಅಡ್ಡಿ ಬರುವ ಎಲ್ಲ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಗುರಿ ತಲುಪಬೇಕು. ಸಾಧನೆಯ ಗುರಿ ತಲುಪಿದಾಗ ಪ್ರಶಸ್ತಿಗಳು ಮತ್ತು ಸಮಾಜದ ಗೌರವಗಳು ತಾನಾಗಿಯೇ ಹರಿದು ಬರುತ್ತವೆ ಎಂದ ಅವರು, ಅನೇಕ ಸಾಧಕರ ಸಾಧನೆಗಳನ್ನು ಉದಾಹರಿಸಿದರು.
ಸಾಧಕನು ತಾನು ಸಾಧಿಸಬೇಕೆಂದಿರುವದನ್ನು ಪ್ರಶಸ್ತಿಗಾಗಿ ಸಾಧಿಸುವದಿಲ್ಲ. ಸಾಧನೆಯೇ ಅವನ ಗುರಿ. ಗುರಿ ತಲುಪಿದಾಗ ಗುರಿ ಸಾಧಿಸಿದ ತೃಪ್ತಿ ಲಭಿಸುತ್ತದೆ. ಇನ್ನೊಂದೆಡೆ ಸಮಾಜದ ಗೌರವ ಸಿಗುತ್ತದೆ. ಪ್ರಶಸ್ತಿಗಳು ತಾನಾಗಿಯೇ ಅರಸಿಕೊಂಡು ಬರುತ್ತವೆ. ಛಲದಿಂದ ಗುರಿ ಸಾಧಿಸಬೇಕು ಎಂದರು.
ಮಹಾನಗರ ಪೋಲಿಸ್ ಆಯುಕ್ತ ಡಿ.ಸಿ.ರಾಜಪ್ಪ ಮಾತನಾಡಿ, ವಿದ್ಯೆಯು ಯಾರೊಬ್ಬರ ಸೊತ್ತಲ್ಲ. ಅದು ಶ್ರದ್ದೆ, ಶ್ರಮ ಮತ್ತು ಸಾಧನೆಯ ಸಂಕೇತ. ಸಂಸ್ಕಾರ ಉಳ್ಳವರಿಗೆ ಪುರಸ್ಕಾರಗಳು ಹರಿದು ಬರುತ್ತವೆ. ಸಂಸ್ಕಾರ ರಹಿತರಿಗೆ ಸಮಾಜ ತಿರಸ್ಕರಿಸುತ್ತದೆ. ಮೊದಲು ನಾವು ಸಂಸ್ಕಾರವಂತರಾಗಬೇಕು ಎಂದರು.
ನಾವು ನಮ್ಮ ತಾಯಿಯನ್ನು ಪ್ರೀತಿಸುವಷ್ಟು ನಮ್ಮ ಮಾತೃ ಭಾಷೆಯನ್ನು ಪ್ರೀತಿಸಬೇಕು. ಮಾತೃ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕು ಎಂದ ಅವರು ಗಡಿ ಭಾಗದಲ್ಲಿ ಸಿರಿಗನ್ನಡ ಪ್ರತಿಷ್ಠಾನದ ಮೂಲಕ ಶಶಿಧರ ಘೀವಾರಿ ಅವರು ಮಾಡುತ್ತಿರುವ ಕನ್ನಡದ ಸೇವೆಯನ್ನು ಪ್ರಶಂಸಿಸಿದರು.
ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮತ್ತು ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಪುಟ್ಟಿ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘೀವಾರಿ ಪ್ರಾಸ್ತಾವಿಕ ಮಾತನಾಡಿದರು.
ಕಿರುತೆರೆ ನಟಿ ಪ್ರಿಯಾಂಕಾ ಇನಾಮದಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಸಾಲಟ್ಟಿ, ರುದ್ರಣ್ಣ ಚಂದರಗಿ, ಶಶಿಧರ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಪ್ರತಿಕ್ಷಾ ಹಿರೇಮಠ ಅವರು ಭರತ ನಾಟ್ಯ ಮತ್ತು ನಾದ ಸುಧಾ ಸಂಗೀತ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು.
ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ, ಡಾ.ವೀರಣ್ಣ ರಾಜೂರ, ಡಾ. ಸಂಗಮೇಶ ಸವದತ್ತಿಮಠ, ಬೆಳಗಾವಿಯ ಪತ್ರಕರ್ತರಾದ ವಿಲಾಸ ಜೋಶಿ, ಶ್ರೀಶೈಲ್ಯ ಮಠದ, ಹುಕ್ಕೇರಿಯ ಪ್ರಕಾಶ ದೇಶಪಾಂಡೆ, ಡಿವೈಎಸ್‍ಪಿ ನಾರಾಯಣ ಬರಮನಿ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರನ್ನು ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಸಲಾಯಿತು.http://newsbelgaum.in  Achievement does not need age. The mind should be. S.H. Mittalakoda said.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾo

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.