ಉತ್ತಮ ಸಮಾಜಕ್ಕಾಗಿ

ಜಲಾಮೃತ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ

Adequate implementation of aquatic plan

0

ಜಲಾಮೃತ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ
ಜಲಾಮೃತ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ- Tarun krantiಬೆಳಗಾವಿ:(news belgaum) ಜಿಲ್ಲೆಯಲ್ಲಿ ಎಲ್ಲೆಲ್ಲಿ ಜಮೀನುಗಳು ಖಾಲಿ ಇವೆ ಎಂಬುದನ್ನು ಗುರುತಿಸಿ, ಅಂತಹ ಕಡೆ ತಕ್ಷಣ ಕಾಮಗಾರಿಗಳನ್ನು ಪ್ರಾರಂಭಿಸಿ ಜಲಾಮೃತ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೆಕೆಂದು ಉಪ ಕೃಷಿ ನಿರ್ದೇಶಕರಾದ ಎಚ್.ಡಿ. ಕೋಳೇಕರ್ ಅವರು ಸೂಚಿಸಿದರು.
ಇಲ್ಲಿನ ಕೃಷಿ ಇಲಾಖೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಾಮೃತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿರುವ ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರುಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿಬ್ಬದಿಂದ ಕಣಿವೆ ಜಲಾನಯನ ತತ್ವ ಆಧಾರಿತ ಮಹತ್ವಾಕಾಂಕ್ಷೆ ಮಣ್ಣು ಮತ್ತು ನೀರು ಸಂರಕ್ಷಣೆ ಕಾರ್ಯಕ್ರಮದ ಜಲಾಮೃತ ಯೋಜನೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಭರವಸೆ ಕಾರ್ಯಕ್ರಮದಲ್ಲಿ ಕಳೆದ ಎರಡು ವರ್ಷಗಳಿಂದ ಕೃಷಿ ಇಲಾಖೆಯವರು ಅನುಷ್ಠಾನಗೊಳಿಸುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಸದ್ಯ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್.ಆರ್ ಅವರ ಮಾರ್ಗದರ್ಶನದಲ್ಲಿ ಇನ್ನುಳಿದ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಲು ಪ್ರಾರಂಭ ಮಾಡಿ, ಪೂರ್ತಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.Adequate implementation of aquatic plan

                 ಪ್ರಕಟಣೆ

ಫೆ.24 ರಂದು ಮಹಾಪೌರ ಕ್ರೀಡಾ ಮಹೋತ್ಸವ
ಬೆಳಗಾವಿ:  ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ 2017-18ರ ಮಹಾಪೌರ ಕ್ರೀಡಾ ಮಹೋತ್ಸವವನ್ನು ಫೆ.24 ಹಾಗೂ 25 ರಂದು ಆಯೋಜಿಸಲಾಗಿದೆ.
ಮಹಾಪೌರ ಕ್ರೀಡಾ ಮಹೋತ್ಸವ ನಿಮಿತ್ಯ ನಗರದ ವಿವಿಧ ಸ್ಥಳಗಳಲ್ಲಿ ಕ್ರೀಡೆಗಳು ನಡೆಯಲಿದ್ದು, ಫೆ.24 ರಂದು ಇಲ್ಲಿನ ಸಂಭಾಜಿ ಉದ್ಯಾನ ಮಹಾದ್ವಾರ ರಸ್ತೆಯಲ್ಲಿ ನಗರದ ಜಿಲ್ಲಾ ಬಾಡಿ ಬಿಲ್ಡರ್ ಅಸೋಷಿಯೇಶನ್ ವತಿಯಿಂದ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳು ಜರುಗಲಿವೆ.
ಫೆ.25 ರಂದು ನಗರದ ಕಾಂಟೋನ್ಮೆಂಟ್‍ನ ಮೇಜರ್ ಸಯ್ಯದ್ ಕ್ರೀಡಾಂಗಣದಲ್ಲಿ ಜಿಲ್ಲಾ ಹಾಕಿ ಅಸೋಷಿಯೇಶನ್ ವತಿಯಿಂದ ಹಾಕಿ ಸ್ಪರ್ಧೆ ಹಾಗೂ ಟಿಳಕವಾಡಿಯ ವೆಕ್ಷನ್ ಡಿಪೋದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ನಗರ ಸೇವಕರ ವತಿಯಿಂದ ಕ್ರಿಕೆಟ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಸಂಜೋತಾ ಬಾಂದೇಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.26 ರಂದು ಮಹಾನಗರ ಪಾಲಿಕೆಯ ಪರಿಷತ್ ಸಭೆ
ಬೆಳಗಾವಿ: ಮಹಾನಗರ ಪಾಲಿಕೆಯ ಪರಿಷತ್ ಸಭೆಯನ್ನು ಫೆ.26 ರಂದು ಸಂಜೆ 4 ಗಂಟೆಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.28 ರಂದು ತಾಪಂ ಸಾಮಾನ್ಯ ಸಭೆ
ಬೆಳಗಾವಿ:  ಇಲ್ಲಿನ ತಾಲೂಕು ಪಂಚಾಯತ ಸಭಾಂಗಣದಲ್ಲಿ ಫೆ.28 ರಂದು ಬೆಳಿಗ್ಗೆ 10:30 ಗಂಟೆಗೆ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ ಸಾಮಾನ್ಯ ಸಭೆ ನಡೆಯಲಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ತಕ್ಷಣ ಪಡಿತರ ಚೀಟಿ ವಿತರಣೆ” ಕಾರ್ಯಕ್ರಮ
ಬೆಳಗಾವಿ:  ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದು, ಪಡಿತರ ಚೀಟಿ ಪಡೆಯಲು ವಿಳಂಬವಾಗುತ್ತಿರುವುದನ್ನು ಗಮನಿಸಿ ತ್ವರಿತವಾಗಿ ಮತ್ತು ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ಉದ್ದೇಶದಿಂದ ಸರ್ಕಾರದಿಂದ “ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು.
ಹೊಸ ಪಡಿತರ ಚೀಟಿ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ನಿಗದಿಪಡಿಸಿದ ದಿನಾಂಕದಂದು ತಮ್ಮಲ್ಲಿರುವ ಅರ್ಜಿ ಸ್ವೀಕೃತಿ, ಕುಟುಂಬದ ಆದಾಯ ಪ್ರಮಾಣಪತ್ರ ಮತ್ತು ಕುಟುಂಬದ ಎಲ್ಲ ಸದಸ್ಯರ ಆಧಾರ ದಾಖಲಾತಿಗಳೊಂದಿಗೆ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ, ಸ್ಥಳದಲ್ಲಿಯೇ ಹೊಸ ಪಡಿತರ ಚೀಟಿ ಪಡೆಯಬಹುದು.
ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಸ್ಥಳದಲ್ಲಿ ಹೊಸ ಪಡಿತರ ಚೀಟಿ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೊಸ ಅರ್ಜಿ ಸ್ವೀಕರಿಸುವುದಿಲ್ಲ.
ಈಗಾಗಲೇ ಅರ್ಜಿ ಸಲ್ಲಿಸಿರುವವರು ಗ್ರಾಮ ಪಂಚಾಯತ, ಅಟಲ್‍ಜೀ ಜನಸ್ನೇಹಿ ಕೇಂದ್ರ, ಫೋಟೊ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಿ ಸ್ವೀಕೃತಿ ಮತ್ತು ಇತರೆ ದಾಖಲೆಗಳೊಂದಿಗೆ ಆಹಾರ ನಿರೀಕ್ಷಕರನ್ನು ಭೇಟಿ ಮಾಡಿ ಹೊಸ ಪಡಿತರ ಚೀಟಿ ಪಡೆಯಬಹುದು.
ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸುವ ಪಡಿತರ ಚೀಟಿಗೆ ಅರ್ಜಿದಾರರು ಯಾವುದೇ ಹಣ, ಶುಲ್ಕ ನೀಡಬೇಕಾಗಿಲ್ಲ. ಶಾಶ್ವತ ಚೀಟಿಗಳನ್ನು ಸ್ಪೀಡ್‍ಪೋಸ್ಟ್ ಅಂಚೆಯ ಮೂಲಕ ಅರ್ಜಿದಾರರ ಮನೆಗೆ ರವಾನಿಸಲಾಗುತ್ತದೆ.
ಜಿಲ್ಲೆಯ ಸಾರ್ವಜನಿಕರು ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದ ಪ್ರಯೋಜನ ಪಡೆದು ಅನ್ನಭಾಗ್ಯ ಯೋಜನೆ ಆಶಯದಂತೆ ಹಸಿವು ಮುಕ್ತ ಬೆಳಗಾವಿ ಜಿಲ್ಲೆ ನಿರ್ಮಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಜಲಾಮೃತ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ- Tarun kranti 1ಬೆಳಗಾವಿ:ಇಲ್ಲಿನ ಕನ್ನಡ ಸಾಹಿತ್ಯ ಭವನದ ಮಾಲಗತ್ತಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಕಲಾವಿದ ರವಿ ಕುಲಕರ್ಣಿ ಅವರು ರಚಿಸಿರುವ ಚಿತ್ರಕಲೆಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರುಗಿತು.
ಹಿರಿಯ ಚಿತ್ರಕಲಾವಿದ, ನಾಟಕಕಾರ ಹಾಗೂ ಸಾಹಿತಿ ಡಿ.ಎಸ್. ಚೌಗಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಚಿತ್ರಕಲಾವಿದರಾದ ಬಾಳು ಸದಲಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆರ್ಟ್ ಫೇರ್ ಸಂಪಾದಕರಾದ ವಿಶ್ವನಾಥ ಗುಗ್ಗರಿ, ಶ್ರೀಮತಿ ಮೀನಾಕ್ಷಿ ಸದಲಗೆ, ಶ್ರೀನಿವಾಸ ಚವ್ಹಾಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕೃಷ್ಣಾ ತಳವಾರ ಅವರು ನಿರೂಪಿಸಿದರು.
ಉತ್ತಮ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಆಸಕ್ತರು ಪ್ರದರ್ಶನದಲ್ಲಿ ಚಿತ್ರಗಳನ್ನು ಖರೀದಿಸಬಹುದಾಗಿದೆ. ಫೆ.27 ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ನೇಕಾರರ 50 ಸಾವಿರ ವರೆಗಿನ ಸಾಲಮನ್ನಾ
ಬೆಳಗಾವಿ: ದಿನಾಂಕ: 13-12-2017 ರ ಸರ್ಕಾರಿ ಆದೇಶವೂ 2018ರ ಫೆಬ್ರವರಿ 20ರ ಆದೇಶದ ಮೂಲಕ ಪರಿಷ್ಕøತಗೊಂಡಿದ್ದು, ಅದರಂತೆ ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳೊಂದಿಗೆ ವಿವಿಧೋದ್ದೇಶ ಸಹಕಾರ ಸಂಘಗಳು ಕೈಗಾರಿಕಾ ಸಹಕಾರ ಬ್ಯಾಂಕುಗಳು ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ದ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದು ದಿನಾಂಕ: 30-06-2017 ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ರೂ.50,000 ವರೆಗಿನ ಸಾಲ ಮನ್ನಾ ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳೊಂದಿಗೆ ವಿವಿಧೋದ್ದೇಶ ಸಹಕಾರ ಸಂಘಗಳು ಕೈಗಾರಿಕಾ ಸಹಕಾರ ಬ್ಯಾಂಕುಗಳು, ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ದ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘಗಳು ಸಾಲ ನೀಡಿದ ಒಟ್ಟು ಮೊತ್ತದಲ್ಲಿ ರೂ.50,000 ವರೆಗಿನ (ಸಾಲ ಮತ್ತು ಬಡ್ಡಿಯನ್ನೊಳಗೊಂಡು) ಸಾಲದ ಅಸಲು ಮತ್ತು ಬಡ್ಡಿ ಸಾಲ (ಕ್ಲೇಮ್ ಬಿಲ್) ಪಡೆದ ದಾಖಲಾತಿಯನ್ನು ನಿಗಧಿತ ನಮೂನೆಯಲ್ಲಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಚೇರಿ, ಜಿಲ್ಲಾ ಪಂಚಾಯತ ಈ ವಿಳಾಸಕ್ಕೆ ಮಾರ್ಚ್ 5 ರೊಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ: 0831-2407237, 2443246 ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.