ಉತ್ತಮ ಸಮಾಜಕ್ಕಾಗಿ

ಮಗ ಕಣ್ಮರೆ ನಂತರ ತಂದೆ ಜಿಗುಪ್ಸೆಯಿಂದ ಆತ್ಮಹತ್ಯೆ

After sons disappearance police man commits suicide

0

ಬೆಂಗಳೂರು : KannadaCrime News(newsbelgaum) ಬೆಂಗಳೂರು ನ್ಯೂಸ್ : 4 ತಿಂಗಳಿನಿಂದ ಮಗ ಕಣ್ಮರೆ-ಜಿಗುಪ್ಸೆ ಗೊಂಡ ತಂದೆ ಆತ್ಮಹತ್ಯೆ-After sons disappearance police man commits suicide : ಮಗನ ಕಣ್ಮರೆ ನಂತರ ತಂದೆ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ.
Kannada Crime News-4 ತಿಂಗಳಿನಿಂದ ಮಗ ಕಣ್ಮರೆ-ಜಿಗುಪ್ಸೆ ಗೊಂಡ ತಂದೆ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎ.ಎಸ್.ಐ ದಯಾನಂದ ಸಾಗರ್ (58) ಆಗಿದ್ದು, ಅವರು ತಮ್ಮ ಕಾಣೆಯಾದ ಮಗನು 4 ತಿಂಗಳವರೆಗೆ ವಾಪಾಸ್ಸಾಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ತನ್ನ ಕೆಲಸ ಮುಗಿದ ಬಳಿಕ ಅಡೋಗೊಡಿಯ ಸಿಟಿ ಆರ್ಮ್ಡ್ ರಿಸರ್ವ್ ಮೈದಾನದಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆದ ದಯಾನಂದ ಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪದ್ಮನಾಭನಗರದ ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿ (ಎಸ್) ಮುಖಂಡ ಎಚ್.ಡಿ. ದೇವೇಗೌಡ ಅವರ ಮನೆಯ ಬಳಿ ದಯಾನಂದರ ಕೆಲಸ ನಿಯೋಜಿಸಲಾಗಿತ್ತು. ಅವರ ಕೆಲಸ 9 ಗಂಟೆಗೆ ಕೊನೆಗೊಂಡ ನಂತರ,  ಅಡೋಗೊಡಿಯ ಸಿಟಿ ಆರ್ಮ್ಡ್ ರಿಸರ್ವ್ ಮೈದಾನಕ್ಕೆ ಬಂದು ಸ್ವತಃ ನೇಣಿಗೆ ಶರಣಾಗಿದ್ದಾರೆ.
ದಯಾನಂದ ಸಾಗರ್ ರವರ ನಿವೃತ್ತಿಗೆ ಕೆಲವೇ ತಿಂಗಳುಗಳು ಮಾತ್ರ ಉಳಿದಿತ್ತು.ಆಡುಗೋಡಿ ಪೊಲೀಸ್ ಅಧಿಕಾರಿಗಳು ಹೇಳುವಂತೆ ದಯಾನಂದ ಅವರ ಪುತ್ರ ಗಣೇಶ್ ಸಾಗರ್ ಕಣ್ಮರೆಯಾಗಿದ್ದು, ಆ ಬೇಸರ ಮತ್ತು ಜಿಗುಪ್ಸೆಯಿಂದ ದಯಾನಂದ ಸಾಗರ್ ಈ ನಿರ್ಣಯಕ್ಕೆ ಬಂದಿದ್ದಾರೆ.
ದಯಾನಂದ ಸಾಗರ್ ರವರಿಗೆ ಇಬ್ಬರು ಪುತ್ರರು, ಅವರ ಕಿರಿಯ ಪುತ್ರ ಫೆಬ್ರವರಿಯಲ್ಲಿ ಅವರೊಂದಿಗೆ ಒಂದು ಚಿಕ್ಕ ಜಗಳದ ನಂತರ ಮನೆ ಬಿಟ್ಟು ತೆರಳಿದ್ದನು, ತಕ್ಷಣಕ್ಕೆ ತನ್ನ ಮಗ ಹಿಂತಿರುಗಬಹುದೆಂದು ಅವರ ತಂದೆ ನಂಬಿದ್ದರು, ಆದರೆ ದಿನಗಳು,ವಾರಗಳು, ತಿಂಗಳುಗಳೆ ಆದವು ಮಗನ ಸುಳಿವು ಮಾತ್ರ ಸಿಗಲೇಯಿಲ್ಲ, ಈ ಒಂದು ಕಾರಣಕ್ಕೆ ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ  ದಯಾನಂದ ಸಾಗರ್ ತಮ್ಮ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆಂದು ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ತನ್ನ ಆತ್ಮಹತ್ಯೆಗೂ ಮುಂಚೆ ಸಾಗರ್ ರವರು ಬರೆದಿರುವ ಡೆತ್ ನೋಟ್ ನಲ್ಲಿ ”  ನಮ್ಮ ಮಗನ ಕಣ್ಮರೆಯಿಂದ ನನಗೆ ನೋವಾಗಿದೆ ,ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ, ನನ್ನ ಕಿರಿಯ ಪುತ್ರ ಗಣೇಶ್ ನಾಲ್ಕು ತಿಂಗಳ ಹಿಂದೆ ಮನೆ ಬಿಟ್ಟು ಹೋದವನು ಮತ್ತೆ ಮರಳಲಿಲ್ಲ. ಈ ನೋವನ್ನು ನಾನು ಅನುಭವಿಸಲು ಸಾಧ್ಯವಿಲ್ಲ, ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಕ್ಷಮಿಸಿ, “ಎಂದು  ಬರೆದಿದ್ದಾರೆ. 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.