ಉತ್ತಮ ಸಮಾಜಕ್ಕಾಗಿ

ಕೃಷಿ ಸಿಂಚನ ಕಾರ್ಯಕ್ರಮ

news belagavi

0

ಬೆಳಗಾವಿ 🙁news belgaum) ಹುಕ್ಕೇರಿ ತಾಲೂಕಿನ ಕುರ್ಣಿ ಗ್ರಾಮದಲ್ಲಿ ವಿವೇಕ ಬಳಗ ದ ಸಂಯುಕ್ತ ಆಶ್ರಯದಲ್ಲಿ ಪ್ರಜ್ಞಾವಂತರ ವಿಚಾರ ವೇದಿಕೆಯಿಂದ ಕೃಷಿ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಉತ್ತಮ ಆದಾಯ ನೀಡುವ ಬೆಳೆಗಳು, ಮಿಶ್ರ ಬೆಳೆ,ಶ್ರೀಗಂಧದ ಬೆಳೆ ಬೆಳೆಯುವದು ಇನ್ನಿತರ ಕೃಷಿ ವಲಯದ ಕೃಷಿ ವಿಚಾರದ ಬಗ್ಗೆ ಚರ್ಚೆ ಮತ್ತು ಮಾಹಿತಿಯನ್ನು ಪ್ರಗತಿಪರ ರೈತರು ಪಡೆದುಕೊಂಡರು ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಸುಮಾರು 400 ಕ್ಕಿಂತ ಹೆಚ್ಚು ಪ್ರಗತಿಪರ ರೈತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಕ್ಕೇರಿ ಹೀರೆಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು ಅಧ್ಯಕ್ಷತೆ ಮಾಜಿಸಚಿವ ಶಶಿಕಾಂತ ಅ ನಾಯಿಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಎನ್.ನಾರಾಯಣಪುರ ಆಗಮಿಸಿದರು.
ಈ ಕಾರ್ಯಕ್ರಮದಲ್ಲಿ ರಾಯಚೂರು ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಮಹಿಳೆ ಕವಿತಾ ಉಮಾಶಂಕರ ಮಿಶ್ರಾ ರವರು ಉಪನ್ಯಾಸ ನೀಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.