ಉತ್ತಮ ಸಮಾಜಕ್ಕಾಗಿ

ಗಡಿ ಭಾಗದಲ್ಲಿ ಕನ್ನಡ ಚಟುವಟಿಕೆಗಳು ಸದಾ ಇರಬÉೀಕು – ಜೆ.ಎಂ. ಕಾಲಿಮಿರ್ಚಿ

news belagavi

0

ಬೆಳಗಾವಿ (news belagavi) ಬೆಳಗಾವಿಯಂತಹ ಗಡಿ ಭಾಗದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕøತಿಕ Zಟುವಟಿಕೆಗಳು ಸದಾ ಇರುವುದರಿಂದ ಕನ್ನಡ ಭಾಷೆ ಮತ್ತು ಸಂಸ್ಕøತಿ ಸದಾ ಜೀವಂತಿಕೆ ಪಡೆಯುತ್ತ ಇರುತ್ತದೆ. ಸಾಮಾನ್ಯವಾಗಿ ಕನ್ನಡ ಹೋರಾಟಗಾರರು ಕನ್ನಡ ಅಸ್ಮಿತೆ ಸಲುವಾಗಿ ಹೋರಾಟ ಮಾಡುವುದರ ಜೊತೆಗೆ ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕೂಡ ಮಹತ್ತ್ವದ ಸಂಗತಿಯಾಗಿದೆ. ಸಾಂಸ್ಕøತಿಕ ವiತ್ತು ಸಾಹಿತ್ಯಕ ಕಾರ್ಯಕ್ರಮಗಳು ಮನುಷ್ಯನನ್ನು ದೈವತ್ವಕ್ಕೆ ಏರಿಸುತ್ತವೆ ಎಂದು ಕೃಷಿ ಮಾರುಕಟ್ಟೆ ಆರಕ್ಷಕ ಠಾಣೆಯ ವೃತ್ತ ನಿರೀಕ್ಷ ಕರಾದ ಜೆ.ಎಂ. ಕಾಲಿಮಿರ್ಚಿಯವರು ಸ್ಥಳೀಯ ಪದ್ಮಶ್ರೀ ಚಿಂದೋಡಿ ಲೀಲಾ ರಂಗ ಮಂದಿರದಲ್ಲಿ ಬೆಳಗಾವಿಯ ವಿನುಶ್ರೇಯ ಪ್ರಕಾಶನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ದಿನಾಂಕ 4-9-2018 ರಂದು ಏರ್ಪಡಿಸಿದ ಕಾರ್ಕಳ ತಾಲೂಕಿನ ಮುದ್ರಾಡಿ ನಾಟ್ಕದೂರು ತುಳುವೆರ್ ಕಲಾ ಸಂಘಟನೆ ಸಾದರಪಡಿಸಿ ‘ದಶಾನನ ಸ್ವಪ್ನಸಿದ್ಧಿ’ ನಾಟಕದ ಉದ್ಘಾಟನೆ ಮಾಡುತ್ತ ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯ.ರು.ಪಾಟೀಲರವರು ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕøತಿ ಕುರಿತು ಗಟ್ಟಿ ನಂಬಿಕೆ ಇರುವ ಪ್ರೇಕ್ಷಕರು ನಾಟಕ ಪ್ರದರ್ಶನಕ್ಕೆ ಬರುವುದು ಮುಖ್ಯವೇ ಹೊರತು ಬೇರೆ ನಾಟಕಗಳಿಗೆ ಸಾಕಷ್ಟು ಜನ ಬರುತ್ತಾರೆಂದು ಇಂತಹ ಶ್ರೇಷ್ಠ ನಾಟಕಗಳಿಗೂ ಅವರನ್ನು ನಿರೀಕ್ಷಿಸುವುದು ತಪ್ಪಾಗುವುದು. ಗಡಿ ಭಾಗದಲ್ಲಿ ರಂಗ ಭೂಮಿಗೆ ಪ್ರೋತ್ಸಾಹಿಸಲು ತಾವು ಸಿದ್ದವೆಂದು ಹೇಳಿದರು.
News Belgaum-ಗಡಿ ಭಾಗದಲ್ಲಿ ಕನ್ನಡ ಚಟುವಟಿಕೆಗಳು ಸದಾ ಇರಬÉೀಕು - ಜೆ.ಎಂ. ಕಾಲಿಮಿರ್ಚಿ 1ನಾಟಕ ಆಯೋಜನ ಮಾಡಿದ ಬೆಳಗಾವಿಯ ವಿನುಶ್ರೇಯ ಪ್ರಕಾಶನದ ಡಾ. ಡಿ.ಎಸ್.ಚೌಗಲೆÉಯವರು ಸ್ವಾಗತ ಮಾಡುತ್ತ ಕಾರ್ಕಳ ತಾಲೂಕಿನ ಮುದ್ರಾಡಿ ನಾಟ್ಕದೂರು ತುಳುವೆರ್ ಕಲಾ ಸಂಘಟನೆಯು 33 ವರ್ಷಗಳಿಂದ ದೇಶದಾದ್ಯಂತ ಸುಮಾರು ಒಂದೂವರೆ ಸಾವಿರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಇವರು ಪ್ರದರ್ಶನ ಮಾಡುತ್ತಿರುವ ‘ದಶಾನನ ಸ್ವಪ್ನಸಿದ್ದಿ’ ನಾಟಕವು ರಾಷ್ಟ್ರಕವಿ ಕುವೆಂಪುರವರ ‘ರಾಮಾಯಣ ದರ್ಶನ’ ದಲ್ಲಿ ಬರುವ ಭಾಗವಾಗಿದ್ದು, ರಂಗ ಸಾಧ್ಯತೆಗಳಿಗೆ ಸವಾಲೊಡ್ಡುವ ಪ್ರಯೋಗಕ್ಕೆ ಪ್ರೇರೇಪಿಸುವ ಮತ್ತು ಅಧ್ಯಾತ್ಮಿಕ ಅನುಭೂತಿಯನ್ನು ನೀಡುವ ವಿಶಿಷ್ಟ ಕಾವ್ಯವಾಗಿದ್ದು, ಈ ಕಾವ್ಯದ ಒಂದು ಭಾಗವೇ ಈ ನಾಟಕವಾಗಿದ್ದು, ಹದಿನೆಂಟು ವರ್ಷಗಳಿಂದ ತಮ್ಮನ್ನು ತಾವು ರಂಗಭೂಮಿಗೆ ಸಮರ್ಪಿಡಿಕೊಂಡಿರುವ ಮಂಜುನಾಥ ಎಲ್. ಬಡಿಗೇರವರು ಈ ನಾಟಕದ ನಿರ್ದೇಶಕರಾಗಿದ್ದಾರೆ. ಖಾಕಿ ಬಟ್ಟೆಯಲ್ಲಿ ಕವಿ ಹೃದಯ ಹೊಂದಿರುವ ಜೆ.ಎಂ.ಕಾಲಿರ್ಮಿರ್ಚಿಯವರು ಹಾಗೂ ಕಾದಂಬರಿಕಾರರಾದ ಯ.ರು.ಪಾಟೀಲರವರು ಈ ನಾಟಕಕ್ಕೆ ಪೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು.
ಡಾ. ಬಸವರಾಜ ಜಗಜಂಪಿ, ಏಣಗಿ ಸುಭಾಷ, ಮಲ್ಲಿಕಾರ್ಜುನ ಇಂಚಲ, ಪ್ರಾಚಾರ್ಯರಾದ ಅಷ್ಟಗಿ, ಉಪಸ್ಥಿತಿತರಿದ್ದ ಕಾರ್ಯಕ್ರಮವನ್ನು ಬೆಂಗಳೂರು ಆಕಾಶವಾಣಿಯ ಶ್ರೀಮತಿ ಸರ್ವಮಂಗಳಾ ಅರಳಮಟ್ಟಿ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.