ಉತ್ತಮ ಸಮಾಜಕ್ಕಾಗಿ

ಅನ್ನಾ ಹಜಾರೆ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳ ಸಾಂಕೇತಿಕ ಉಪವಾಸ!

Anna Hazare's fasting campaign is a symbolic fast of various organizations in Belgaum!

0
News Belgaum-ಅನ್ನಾ ಹಜಾರೆ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳ ಸಾಂಕೇತಿಕ ಉಪವಾಸ!ಬೆಳಗಾವಿ: (news belgaum)ಸುದೀರ್ಘ ಏಳು ವರ್ಷಗಳ ನಂತರ ಸಮಾಜ ಸೇವಕ ಅನ್ನಾ ಹಜಾರೆ ಅವರು ರೈತರ ಸಾಲ ಮನ್ನಾ ಮಾಡಿಸಲು ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸಲು ದಹಲಿಯಲ್ಲಿ ಉಪವಾಸ ಸತ್ಯಾಗ್ರಹ ‌ನಡೆಸುತ್ತಿರುವ ನಿಟ್ಟಿನಲ್ಲಿ ಅವರಿಗೆ ಬೆಂಬಲಾರ್ಥವಾಗಿ ವಿವಿಧ ಸಂಘಟನೆಯ ಸದಸ್ಯರು ಬೆಳಗಾವಿಯಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಸೇರಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಕೀಲರು ಸೇರಿ ರೈತರು ಹಾಗು ಅಣ್ಣಾ ಹಜಾರೆ ಪರ ಘೋಷಣೆ ಕೂಗಿ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.News Belgaum-ಅನ್ನಾ ಹಜಾರೆ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳ ಸಾಂಕೇತಿಕ ಉಪವಾಸ! 1
ಸುದೀರ್ಘ ಏಳು ವರ್ಷಗಳ ನಂತರ ಭ್ರಷ್ಟಾಚಾರ ವಿರೋಧಿ ಆಂದೋಲನದ ರಾಷ್ಟ್ರೀಯ ನೇತಾರ, ಗಾಂಧಿವಾದಿ ಅಣ್ಣಾ ಹಜಾರೆ ಇಂದು ದೆಹಲಿಯಲ್ಲಿ ಪ್ರಾರಂಭಿಸಿದ ಎರಡನೇ ಸತ್ಯಾಗ್ರಹಕ್ಕೆ ಬೆಳಗಾವಿಯಲ್ಲಿ ಬೆಂಬಲ ವ್ಯಕ್ತವಾಯಿತು. ರೈತರು, ನ್ಯಾಯವಾದಿಗಳು, ಸಮಾಜದ ಗಣ್ಯರು ಹಾಗೂ ಪ್ರಗತಿಪರ ಸಂಘಟನೆಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಉಪೋಷಣ ಪ್ರಾರಂಭಿಸಿದರು. ನಂತರ ಘೋಷಣೆ ಗಳನ್ನು ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಲೋಕಪಾಲ ಬಿಲ್, ರೈತರ ಕಲ್ಯಾಣ ಮತ್ತು ಜನಜೀವನ ಸುಧಾರಣೆಗೆ ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಅಶೋಕ ಯಮಕನಮರಡಿ, ಎನ್. ಆರ್. ಲಾತೂರ, ಹರ್ಷವರ್ಧನ ಪಾಟೀಲ, ರಾಘವೇಂದ್ರ ನಾಯಕ, ಚೂನಪ್ಪ ಪೂಜಾರಿ ಹಾಗೂ ನೂರಾರು ಕಾರ್ಯಕರ್ತರು ಸೇರಿದ್ದರು.Anna Hazare’s fasting campaign is a symbolic fast of various organizations in Belgaum!ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: