ಉತ್ತಮ ಸಮಾಜಕ್ಕಾಗಿ

ವಿವೀದ ಇಲಾಖೆಗಳ ಪ್ರಕಟಣೆಗಳು

news belagavi

0

ಸೆ.18 ರಂದು ಪಿಂಚಣಿ ಅದಾಲತ್
ಬೆಳಗಾವಿ: ಇಲ್ಲಿನ ಮರಾಠಾ ಎಲ್.ಐ. ಬೆಳಗಾವಿಯ ಹಾಕಿ ಮೈದಾನದಲ್ಲಿ ಸೆ.18 ರಂದು ಮಿಲಿಟರಿ ಪಿಂಚಣಿ ಅದಾಲತ್‍ನ್ನು ಆಯೋಜಿಸಲಾಗಿದೆ.
ಅದಾಲತ್‍ನಲ್ಲಿ ಮಿಲಿಟರಿ ಪಿಂಚಣಿದಾರರ ಪಿಂಚಣಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ನಿವಾರಿಸಲಾಗುವುದು. ಆದ್ದರಿಂದ ಪಿಂಚಣಿಗೆ ಸಂಬಂಧಿಸಿದ ಕುಂದು ಕೊರತೆಗಳಿದ್ದಲ್ಲಿ ಡಿಸ್‍ಚಾರ್ಜ್ ಬುಕ್, ಪೆನ್ಷನ್ ಬುಕ್, ಪಿಪಿಒ/ಸಿಒಆರ್ ಪಿಪಿಓ (ಇದ್ದರೆ), ಬ್ಯಾಂಕ್ ಪಾಸ್‍ಬುಕ್ ಹಾಗೂ ಇನ್ನಿತರೆ ಸಂಬಂಧಪಟ್ಟ ದಾಖಲೆಗಳ ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ: ಪಿಂಚಣಿದಾರರಿಗೆ ಸೂಚನೆ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಿಂದ 2018ರ ಆಗಸ್ಟ್ ತಿಂಗಳಲ್ಲಿ ಸ್ವೀಕೃತವಾದ ಎಲ್ಲ ಪಿಂಚಣಿ ಪ್ರಸ್ತಾವಣೆಗಳನ್ನು ಪ್ರಾಧೀಕರಿಸಿ ಜಿಲ್ಲಾ ಖಜಾನೆಗೆ ಸಲ್ಲಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ಪಿಂಚಣಿದಾರರು ಜಿಲ್ಲಾ ಖಜಾನೆ ಬೆಳಗಾವಿ ಇವರನ್ನು ಸಂಪರ್ಕಿಸಬೇಕು ಹಾಗೂ ಸಮಸ್ಯೆ ಇದ್ದಲ್ಲಿ ಈ ಕಚೇರಿಗೆ ಲಿಖಿತವಾಗಿ ಮನವಿ ಸಲ್ಲಿಸಬೇಕೆಂದು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೈಕ್ಷಣಿಕ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಬೆಳಗಾವಿ:  ಚನ್ನಮ್ಮನ ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಸೆ.6 ರಂದು ಬೆಳಿಗ್ಗೆ 10:30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಿತ್ತೂರು ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡಗೌಡ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾಲೆಜಿನ ಪ್ರಾಂಶುಪಾಲರಾದ ಪ್ರೊ. ಮಾರುತಿ ಎಂ ಅವರು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಪ್ರಕಾಶ ಕೆ. ಪಾಟೀಲ ಅವರಿಗೆ ಸನ್ಮಾನ ಸಮಾರಂಭ ಜರುಗಲಿದೆ.
ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಉದರದರ್ಶಕ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರ
ಬೆಳಗಾವಿ: ಸೆಪ್ಟೆಂಬರ್-2018ರ ಮಾಹೆಯಲ್ಲಿ ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉದರದರ್ಶಕ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.11 ರಂದು ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಹಿರೇಬಾಗೇವಾಡಿ ಹಾಗೂ ಕಿತ್ತೂರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಸೆ.12 ರಂದು ಯಕ್ಸಂಬಾ ಹಾಗೂ ಕಬ್ಬೂರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸಾ ಶಿಬಿರ ಜರುಗಲಿದೆ.
ಸೆ.14 ರಂದು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ, ಸೆ.15 ರಂದು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ ಮತ್ತು ರಾಮದುರ್ಗ ಸಾರ್ವಜನಿಕ ಆಸ್ಪತ್ರೆ, ಸೆ.18 ರಂದು ಅಥಣಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ.
ಸೆ.19 ರಂದು ಗೋಕಾಕ ಸಾರ್ವಜನಿಕ ಆಸ್ಪತ್ರೆ, ರಾಮದುರ್ಗ ಸಾರ್ವಜನಿಕ ಆಸ್ಪತ್ರೆ ಹಾಗೂ ಯರಗಟ್ಟಿ ಸಾರ್ವಜನಿಕ ಆಸ್ಪತ್ರೆ, ಸೆ.21 ರಂದು ರಾಯಬಾಗ ಸಾರ್ವಜನಿಕ ಆಸ್ಪತ್ರೆ, ಮುಗಳಕೋಡ, ಸಂಕೇಶ್ವರ ಹಾಗೂ ನಿಡಸೋಸಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸಾ ಶಿಬಿರ ಜರುಗಲಿದೆ.
ಸೆ.22 ರಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಸೆ.25 ರಂದು ರಾಯಬಾಗ ಸಾರ್ವಜನಿಕ ಆಸ್ಪತ್ರೆ, ಯರಗಟ್ಟಿ, ಹಾಗೂ ನಾಗನೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಸೋಮವಾರ, ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ ಹಾಗೂ ನಿಪ್ಪಾಣಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ಬುಧವಾರ, ಸವದತ್ತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಶುಕ್ರವಾರ, ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ಶನಿವಾರ ಹಾಗೂ ಖಾನಾಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಶಸ್ತ್ರಚಿಕಿತ್ಸಾ ಶಿಬಿರ ಜರುಗುತ್ತವೆ.

ವಿಶೇಷ ಸೂಚನೆ:
ಜಿಲ್ಲಾಸ್ಪತ್ರೆಯಲ್ಲಿ ಅರ್ಹ ಮಹಿಳೆಯರಿಗಾಗಿ ಪ್ರತಿ ಬುಧವಾರ ಟ್ಯುಬೆಕ್ಟಮಿ ಮತ್ತು ಉದರ ದರ್ಶಕ ಚಿಕಿತ್ಸೆ ಮಾಡಲಾಗುವುದು. ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಶನ ಆಫ್ ಇಂಡಿಯಾ, ಹಿಂದವಾಡಿ, ಬೆಳಗಾವಿಯಲ್ಲಿ ಅರ್ಹ ಮಹಿಳೆಯರಿಗಾಗಿ ಟ್ಯುಬೆಕ್ಟಮಿ ಮತ್ತು ಉದರ ದರ್ಶಕ ಚಿಕಿತ್ಸೆ ಮಾಡಲಾಗುವುದು.

ಸೆ.7 ರಂದು ಉದ್ಯೋಗ ಮೇಳ
ಬೆಳಗಾವಿ:  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ವತಿಯಿಂದ ಸಪ್ಟೆಂಬರ್ 7 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಗರದ ಸದಾಶಿವನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ “ಉದ್ಯೋಗ ಮೇಳ”ವನ್ನು ಹಮ್ಮಿಕೊಳ್ಳಲಾಗಿದೆ. ಅನಕ್ಷರಸ್ಥರಿಗೂ ಸೇರಿದಂತೆ ಎಸ್.ಎಸ್.ಎಲ್.ಸಿ., ಪಿಯುಸಿ, ಯಾವುದೇ ಪದವಿ (ಬಿ.ಇ. ಪರವೀಧರರನ್ನು ಹೊರೆತುಪಡಿಸಿ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ಉದ್ಯೋಗಮೇಳವನ್ನು ಆಯೋಜಿಸಲಾಗಿದ್ದು, ವಿಕಲಚೇತನರಿಗೂ ಅವಕಾಶಗಳನ್ನು ಒದಗಿಸಲಾಗಿದೆ.

ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಈ ಕಛೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ +91-8867262751 ಸಂಪರ್ಕಿಸಲು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸೆ.7 ರಂದು ಹಿರಿಯ ನಾಗರಿಕರ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆ
ಬೆಳಗಾವಿ: 2018-19 ನೇ ಸಾಲಿನ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ” ಪ್ರಯುಕ್ತ ಹಿರಿಯ ನಾಗರಿಕರಿಗಾಗಿ ಸಪ್ಟೆಂಬರ್ 7 ರಂದು ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ದೆಗಳನ್ನು ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಜಿ. ಬಾಳೇಕುಂದ್ರಿ ಇಂಜಿನೀಯರಿಂಗ ಕಾಲೇಜು ಮೈದಾನದಲ್ಲಿ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ನೆಹರೂ ನಗರ, ಬೆಳಗಾವಿ ಇಲ್ಲಿ ಏರ್ಪಡಿಸಲಾಗಿದೆ.
60 ವರ್ಷ ಮೇಲ್ಪಟ್ಟ ಜಿಲ್ಲೆಯ ಆಸಕ್ತ ಪುರುಷ ಹಾಗೂ ಮಹಿಳಾ ಹಿರಿಯ ನಾಗರಿಕರು ಭಾಗವಹಿಸಬಹುದಾಗಿದೆ. ಹಿರಿಯ ನಾಗರಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸ್ವಯಂ-ಸೇವಾ ಸಂಸ್ಥೆಯವರು, ನಿವೃತ್ತ ಸರ್ಕಾರಿ ನೌಕರರ ಸಂಘ, ಹಾಗೂ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ ಮಾಡುತ್ತಿರುವ ಸ್ವಯಂ-ಸೇವಾ ಸಂಸ್ಥೆಯವರು ಆಯಾ ತಾಲೂಕುಗಳ ಹಿರಿಯ ನಾಗರಿಕರನ್ನು ಕರೆದುತಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದೆ. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 0831-2476096/97 ನ್ನು ಸಂಪರ್ಕಿಸ¨ಹುದಾಗಿದೆ.

ಕ್ರೀಡಾ ಸ್ಪರ್ಧೆಗಳ ವಿವರ:
60 ರಿಂದ 70 ವರ್ಷದ ಪುರುಷರಿಗೆ 100 ಮೀ. ಓಟ ಮತ್ತು ಮಹಿಳೆಯರಿಗೆ 3 ಕೆ.ಜಿ. ಶಾಟ್ ಪುಟ್ 400ಮೀ. ನಡಿಗೆ ಮತ್ತುಥ್ರೋಯಿಂಗ್ ದಿ ಕ್ರಿಕೇಟ ಬಾಲ್, 71 ರಿಂದ 80 ವರ್ಷದ ಪುರುಷರಿಗೆ 75 ಮೀ. ಓಟ ಮತ್ತು ಮಹಿಳೆಯರಿಗೆ 3 ಕೆ.ಜಿ. ಶಾಟ್ ಪುಟ್ 200 ಮೀ. ನಡಿಗೆ ಮತ್ತು ಥ್ರೋಯಿಂಗ್ ದಿ ಕ್ರಿಕೇಟ ಬಾಲ್, 80 ವರ್ಷ ಮೇಲ್ಪಟ್ಟು 200 ಮೀ. ನಡಿಗೆ ಮತ್ತು ಥ್ರೋಯಿಂಗ್ ದಿ ಕ್ರಿಕೇಟ ಬಾಲ್ 100 ಮೀ. ನಡಿಗೆ ಮತ್ತು ಥ್ರೋಯಿಂಗ್ ದಿ ಕ್ರಿಕೇಟ ಬಾಲ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸಾಂಸ್ಕøತಿಕ ಸ್ಪರ್ದೆಗಳು:
60 ರಿಂದ 70 ವರ್ಷದ ಪುರುಷರಿಗೆ ಏಕಪಾತ್ರಾಭಿನಯ ಮತ್ತು ಮಹಿಳೆಯರಿಗೆ ಜಾನಪದ ಗೀತೆ ಏಕಪಾತ್ರಾಭಿನಯ ಮತ್ತು
ಜಾನಪದ ಗೀತೆ, 71 ರಿಂದ 80 ವರ್ಷದ ಪುರುಷರಿಗೆ ಏಕಪಾತ್ರಾಭಿನಯ ಮತ್ತು ಮಹಿಳೆಯರಿಗೆ ಜಾನಪದ ಗೀತೆ ಏಕಪಾತ್ರಾಭಿನಯ ಮತ್ತು ಜಾನಪದ ಗೀತೆ, 80 ವರ್ಷ ಮೇಲ್ಪಟ್ಟವರಿಗೆ ಏಕಪಾತ್ರಾಭಿನಯ ಮತ್ತು ಜಾನಪದ ಗೀತೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೆ.5 ರಿಂದ ವಿದ್ಯುತ್ ನಿಲುಗಡೆ
ಬೆಳಗಾವಿ: ಹುವಿಸಕಂನಿ ವತಿಯಿಂದ ಹಳೆ ತಂತಿ ಬದಲಾವಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ 110/11ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ಹಿರೇಬಾಗೆವಾಡಿ, ಅರಳಿಕಟ್ಟಿ, ಕಲಾರಕೊಪ್ಪ ಮತ್ತು ಬಸಾಪೂರ ಗ್ರಾಮಗಳಿಗೆ ಸಪ್ಟೆಂಬರ್ 5, 6 ಮತ್ತು 7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗ-2, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.