ಉತ್ತಮ ಸಮಾಜಕ್ಕಾಗಿ

news belgavi:ಮತ್ತೊಂದು ಪ್ರತಿಭೆ ಕರುನಾಡಿನ ಜನಪದ ಕೋಗಿಲೆ ಲಕ್ಷ್ಮೀ

Another talent in Dr. Kambar's birthplace was Lakshmi folklore of Karunadu

0

ಬೆಳಗಾವಿ: (news belgaum)ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ತಂದು ಕೊಟ್ಟು ಇತ್ತಿಚಿಗಷ್ಟೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಕಂಬಾರ ಹುಟ್ಟೂರು ಘೋಡಗೇರಿ ಗ್ರಾಮದಲ್ಲಿ ಕನ್ನಡ ನಾಡನ್ನು ಬೆಳಗಿಸಲು ಮತ್ತೊಂದು ಬಾಲ ಪ್ರತಿಭೆ ಹುಟ್ಟಿಕೊಂಡು ಈಗ ಕನ್ನಡ ನಾಡಿನ ಮನೆ ಮನೆಯ ಮಗಳಾಗಿ ಪ್ರಜ್ವಲಿಸುತ್ತಿದ್ದಾಳೆ. ಆ ಅಪರೂಪದ ಪ್ರತಿಭೆಯೇ ಲಕ್ಷ್ಮೀ ರಾಮಪ್ಪ ತಳವಾರ.
ಝೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್‍ನ ಅಮೋಘ ಕಾರ್ಯಾಕ್ರಮಲ್ಲಿ ಆಯ್ಕೆಯಾದಾಗಿನಿಂದ ಎಲ್ಲೆಲ್ಲಿಯೂ ಲಕ್ಷೀಯದ್ದೇ ಮಾತು. ಬಾಲೆ ಲಕ್ಷೀ ತನ್ನ ಸುಮಧುರ ಕಂಠದಿಂದಲೇ ಕನ್ನಡಿಗರ ಮನೆ ಮನಗಳಲ್ಲಿ ಸ್ಥಾನ ಪಡೆದಿರುವುದು ಜಗಜ್ಜಾಹೀರು. ಲಕ್ಷ್ಮೀ ಹಾಡಲು ಬಂದಳೆಂದರೆ ಕರ್ನಾಟಕದ ಜನತೆಗೆ ಏನೋ ಒಂದು ಕಾತುರ ಶುರುವಾಗುವುದಂತೂ ಸುಳ್ಳಲ್ಲ. ಲಕ್ಷ್ಮಿ ಹಾಡಿಗೆ ಜಡ್ಜಗಳು ಮತ್ತೆ ಮತ್ತೆ ಮನಸೋತಿದ್ದಾರೆ.
News Belgaum-ಡಾ.ಕಂಬಾರರ ಹುಟ್ಟೂರಿನಲ್ಲಿ ಅರಳಿದ ಮತ್ತೊಂದು ಪ್ರತಿಭೆ  ಕರುನಾಡಿನ ಜನಪದ ಕೋಗಿಲೆ ಲಕ್ಷ್ಮೀ News Belgaum-ಡಾ.ಕಂಬಾರರ ಹುಟ್ಟೂರಿನಲ್ಲಿ ಅರಳಿದ ಮತ್ತೊಂದು ಪ್ರತಿಭೆ  ಕರುನಾಡಿನ ಜನಪದ ಕೋಗಿಲೆ ಲಕ್ಷ್ಮೀ 1ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಮ ಅವರ ಮುಂದೆ ಹಾಡುವಾಗ ಲಕ್ಷ್ಮೀ ಸ್ವಲ್ಪ ಅಳುಕಿನಿಂದ ಹಾಡಿದರು ಸಹ ಅದೇನು ಮಹಾ ತಪ್ಪು ಅಲ್ಲ ಎನ್ನಬಹುದು. ಸಂಗೀತ ಶಾಲೆಗೆ ಹೋಗಿ ಕಲಿತು ಹಾಡುವುದು ದೊಡ್ಡ ಮಾತಲ್ಲ. ಆದರೆ ಸಂಗಿತದ ತಲೆಬುಡ ಒಂದು ಗೊತ್ತಿಲ್ಲದ ಲಕ್ಷ್ಮೀ ತಳವಾರ ಈ ಮಟ್ಟಿಗೆ ಸಾಧನೆ ಮಾಡುತ್ತಿದ್ದಾಳೆ ಅಂದ್ರೆ ಇದೇ ದೊಡ್ಡ ಮಾತು ಎನ್ನಬಹುದು.
ಕುಂದಾನಗರಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಲಕ್ಷ್ಮಿ ತಳವಾರ. ಈ ವಿದ್ಯಾರ್ಥಿನಿ ಗುರುವಿನ ಮಾರ್ಗದರ್ಶನವಿಲ್ಲದೇ ಸಂಗೀತದ ಯಾವುದೇ ಶಾಲೆಗೆ ಹೊಗದೇ ಮೋಬೈಲ್ ಹಾಡುಗಳಿಗೆ ಕಿವಿಗೋಟ್ಟು ತನ್ನನ್ನೇ ಸಂಗೀತಮಯ ಮಾಡಿಕೊಂಡು ಹಿರಿಮೆ ಮೆರದಿದ್ದಾಳೆ.
ಬಡತನದಲ್ಲಿ ಬೆಳೆದು ಬಂದ ಈಕೆ. ಸತೀಶ ಶುಗರ್ಸ್ ಅವಾರ್ಡ್ ಸ್ಪರ್ಧೆಯಲ್ಲಿ ಹಾಡಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಹೀಗೆ ಅವಕಾಶ ಸಿಕ್ಕಾಗ ಸ್ಥಳಿಯರ ಸಂಗೀತ ಸ್ಪರ್ಧೆ ಹಾಡುಗಳನ್ನು ಹಾಡುತಲ್ಲೇ ಖಾಸಗಿ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ 14ನೇ ಗಾಯನ ಸ್ಪರ್ಧೆಯ ಮೊದಲ ಹಂತದಲ್ಲಿ ಡಾ.ಚಂದ್ರಶೇಖರ ಅವರು ಬರೆದ ಹಾಡಿಗೆ ಜೀವ ತುಂಬಿ ಜನಪದ ಹಾಡಿನಲ್ಲಿಯೇ ನಿರ್ವಾಹಕರ ಮನತಟ್ಟಿ ರೋಮಾಂಚನ ಗೋಳಸಿದ್ದನ್ನು ಯಾರೂ ಮರೆಯುವಂತಿಲ್ಲ.
ನಿರ್ವಾಹಕರಾದ ಕರ್ನಾಟಕದ ನಾದಬ್ರಹ್ಮ ಹಂಸಲೇಖ,ಹಾಡಿನ ದಿಗ್ಗಜ ವಿಜಯ ಪ್ರಕಾಶ,ಅರ್ಜುನ ಜನ್ಯ ಹಾಗೂ ಹಿರಿಯ ಸಾಹಿತಿಗಳ ನಡುವೆ ಜನಪದ ಸಂಗೀತ ಹಾಡಿ ಜನಪದಕ್ಕೆ ಮತ್ತೆ ಜೀವ ತುಂಬಿ ಹೊಸ ಇತಿಹಾಸ ಬರೆದು ಯಶ್ವಿಸಿಯತ್ತ ಮುನ್ನುಗುತ್ತಿದ್ದಾಳೆ. ಬಡತನವನ್ನೆ ಹೊತ್ತು, ಬಡತನವನ್ನೆ ಹಾಸಿಕೊಂಡು,ಬಡತನವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಈ ಬಡ ಕುಟುಂಬದಲ್ಲಿ ಲಕ್ಷ್ಮೀ ಎಂಬ ಈ ದೈತ್ಯ ಪ್ರತಿಭೆ ಹುಟ್ಟಿರುವುದು ನಿಸರ್ಗ ನಿಯಮ. ಛಲವೊಂದಿದ್ದರೆ ಜೀವನಲ್ಲಿ ಅವಕಾಶ ತಾನಾಗಿ ಒದಗಿ ಬರುತ್ತದೆ ಎನ್ನವುದಕ್ಕೆ ಈ ಲಕ್ಷ್ಮೀ ಸಾಕ್ಷಿಯಾಗಿದ್ದಾಳೆ. ಕಲೆ,ಸಾಹಿತ್ಯ,ಸಂಸ್ಕøತಿ,ಸಂಗೀತಕ್ಕೆ ಜೀವ ತುಂಬಲು ಇಂತಹ ಕಲೆಗಳು ಬೆಳಕಿಗೆ ಬರಬೇಕು, ಸಾಧನೆಯ ಹಾದಿಯಲ್ಲಿ ಸಾಗಬೇಕಾದರೆ ಸಾವಿರಾರೂ ನೋವುಗಳು ಬಂದರೂ ಸಹಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಬೇಕು ಎಂಬ ಅನುಭವಿಗಳ ಹಿತವಚನಗಳೊಂದಿಗೆ ಲಕ್ಷ್ಮೀ ತಳವಾರ 14ನೇ ಸರಿಗಮಪ ಲಿಟ್ಲ್ ಚಾಂಪಿಯನ್ನಾಗಿ ಹೊರಹೊಮ್ಮಲಿ ನಮ್ಮಲ್ಲೆರ ಆಶಯ.another-talent-in-dr-kambars-birthplace-was-lakshmi-folklore-of-karunadu

• ಅಶೋಕ ಮಗದುಮ್ಮ

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.