ಉತ್ತಮ ಸಮಾಜಕ್ಕಾಗಿ

ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನೆ ಯೋಜನೆಯಡಿ ಅರ್ಜಿ ಅಹ್ವಾನ

Application call under Chief Minister's self employment plan

0

ಬೆಳಗಾವಿ:(news belgaum) 2018-19ನೇ ಸಾಲಿನಲ್ಲಿ ಗ್ರಾಮೀಣ ವಿದ್ಯಾವಂತ ನಿರುದ್ಯೋಗಿ ಯುವಕ –ಯುವತಿಯವರಿಗೆ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನೆ ಯೋಜನೆಯಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ವೆಬ್‍ಸೈಟ hಣಣಠಿ://ಛಿmegಠಿ.ಞಚಿಡಿ.ಟಿiಛಿ.iಟಿ ವಿಳಾಸದಲ್ಲಿ ಆನಲೈನ ಮುಖಾಂತರ 2018ರ ಜೂನ್ 1 ರಿಂದ 30ರ ವರೆಗೆ ಅರ್ಜಿಯನ್ನು ಭರ್ತಿ ಮಾಡಿ, ಅದರ ಪ್ರತಿಯನ್ನು ಅಗತ್ಯವಾದ ವಿಳಾಸದ ದಾಖಲೆ, ವಯಸ್ಸು, ವಿದ್ಯಾರ್ಹತೆ ದಾಖಲೆ, ಜಾತಿ ಪ್ರಮಾಣಪತ್ರ, ಆಧಾರ ಕಾರ್ಡ, ಜನಸಂಖ್ಯೆ ಪ್ರಮಾಣಪತ್ರ ಮತ್ತು ಯೋಜನಾ ವರದಿಯೊಂದಿಗೆ ಜುಲೈ 10 ರವರೆಗೆ ಸಂಬಂಧಿಸಿದ ಏಜನ್ಸಿಗಳಾದ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ ಹಾಗೂ ಜಿಲ್ಲಾ ಅಧಿಕಾರಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಉದ್ಯಮಬಾಗ, ಬೆಳಗಾವಿ ಅಥವಾ ಬೆಳಗಾವಿ ಜಿಲ್ಲೆಯ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ, ಉದ್ಯಮಬಾಗ, ಬೆಳಗಾವಿ ಕಚೇರಿಯಲ್ಲಿ ವಿದ್ಯಾವಂತ ನಿರುದ್ಯೋಗಿ ಗ್ರಾಮೀಣ ಯುವಕ-ಯುವತಿಯರಿಗೆ ಅರ್ಜಿಯನ್ನು ತುಂಬಲು ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅರ್ಜಿದಾರರು ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವುದು.
ಈ ಯೋಜನೆಯಲ್ಲಿ ಉತ್ಪಾದನಾ ಉದ್ದಿಮೆ ಸ್ಥಾಪಿಸಲು ಗರಿಷ್ಠ ರೂ.10 ಲಕ್ಷಗಳವರೆಗೆ ಮತ್ತು ಸೇವಾ ಉದ್ದಿಮೆ ಸ್ಥಾಪಿಸಲು ಗರಿಷ್ಠ ರೂ.5 ಲಕ್ಷಗಳವರೆಗೆ ಯೋಜನೆ ನಿಯಮಾನುಸಾರ ಸಾಲ, ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಸದರಿ ಉದ್ದಿಮೆಯನ್ನು 2001ರ ಜನಗಣತಿ ಪ್ರಕಾರ 20,000 ಜನರಿಗಿಂತ ಕಡಿಮೆ ಜನ ವಸತಿ ಇರುವ ಪ್ರದೇಶದಲ್ಲಿ ಸ್ಥಾಪಿಸಬಹುದಾಗಿದೆ.
ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ವಯಸ್ಸು ಸಾಮಾನ್ಯ ವರ್ಗದವರಿಗೆ 21 ರಿಂದ 35 ವರ್ಷಗಳು, ವಿಶೇಷ ವರ್ಗದವರಿಗೆ ಗರಿಷ್ಠ 45 ವರ್ಷ ಆಗಿರತಕ್ಕದ್ದು. ಈ ಯೋಜನೆಯು ಹೊಸ ಘಟಕಗಳನ್ನು ಪ್ರಾರಂಭಿಸಲು ಇಚ್ಛಿಸುವ ಗ್ರಾಮೀಣ ನಿರುದ್ಯೋಗಿ ಯುವಕ/ಯುವತಿಯವರಿಗೆ ಮಾತ್ರ ಅನ್ವಯಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ 0831-2440187/ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ,ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ 0831-2455067 ಹಾಗೂ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಇಲಾಖೆ ಪ್ರಕಟಣೆ ತಿಳಿಸಿದೆ.Application call under Chief Minister’s self employment plan

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.