ಉತ್ತಮ ಸಮಾಜಕ್ಕಾಗಿ

ಇ-ಸ್ಕಾಲರ್‍ಶಿಪ್‍ಗಾಗಿ ಅರ್ಜಿ ಆಹ್ವಾನ

news belagavi

0

ಇ-ಸ್ಕಾಲರ್‍ಶಿಪ್‍ಗಾಗಿ ಅರ್ಜಿ ಆಹ್ವಾನ
ಬೆಳಗಾವಿ: (news belgaum) 2018-19ನೇ ಸಾಲಿಗೆ ಕೇಂದ್ರ ಸರ್ಕಾರದ ಇ-ಸ್ಕಾಲರ್‍ಶಿಪ್ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ನೀಡಲಾಗುವ ವಿದ್ಯಾರ್ಥಿ ವೇತನಕ್ಕಾಗಿ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಮುಖಾಂತರ ಸದರಿ ಯೋಜನೆಯಡಿ ಇ-ಸ್ಕಾಲರ್‍ಶಿಫ್ ಪೋರ್ಟಲ್‍ದಲ್ಲಿ ಆನ್‍ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರೀಮ್ಯಾಟ್ರಿಕ್ ಸ್ಕಾಲರ್‍ಶಿಪ್‍ಗಾಗಿ ಸಪ್ಟೆಂಬರ್ 30 ಹಾಗೂ ಪೋಸ್ಟ್ ಮ್ಯಾಟ್ರಿಕ್ ಮತ್ತು ಟಾಪ್‍ಕ್ಲಾಸ್‍ನಲ್ಲಿ ಡಿಸೆಂಬರ್ 31 ಅಂತಿಮ ದಿನಾಂಕಗಳನ್ನು ನಿಗದಿಗೊಳಿಸಲಾಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಕಲಚೇತನರು
ಈ ಸೌಲಭ್ಯವನ್ನು ಪಡೆದು ಉನ್ನತ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಅನುವಾಗುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ನೋಂದಣಿ: ಮಾಲೀಕರ ಗಮನಕ್ಕೆ
ಬೆಳಗಾವಿ:  ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯವರಿಂದ “ವಾಹನಗಳ ನೋಂದಣಿ ಸೇವೆ”ಗಳಿಗೆ ಸಂಬಂಧಿಸಿದಂತೆ ಕೇಂದ್ರಿಕೃತ ಹಾಗೂ ವೆಬ್ ಆಧಾರಿತ ವಾಹನ-4 ಸಾಫ್ಟವೇರವನ್ನು ಬೆಳಗಾವಿ ಉಪ ಸಾರಿಗೆ ಆಯುಕ್ತರ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸಪ್ಟೆಂಬರ್ 16 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಹೊಸ ವಾಹನ ಖರೀದಿಸುವ ಮಾಲೀಕರಿಗೆ ಹಾಗೂ ಎಲ್ಲ ವಾಹನಗಳ ಅಧಿಕೃತ ಮಾರಾಟಗಾರರಿಗೆ ಈಗಾಗಲೇ ಎಲ್ಲ ವರ್ಗದ ಹೊಸ ವಾಹನಗಳನ್ನು ಖರೀದಿಸಿ ಇನ್ನೂವರೆಗೆ ನೋಂದಣಿಯನ್ನು ಮಾಡಿಕೊಳ್ಳದೇ ಇರುವ ವಾಹನ ಮಾಲೀಕರು ಸಪ್ಟೆಂಬರ್ 15 ರೊಳಗಾಗಿ ತಪ್ಪದೇ ನೋಂದಣಿ ಮಾಡಿಸಿಕೊಳ್ಳುವುದು.
ಎಲ್ಲ ವಾಹನಗಳ ಅಧಿಕೃತ ಮಾರಾಟಗಾರರು ಮಾರಾಟ ಮಾಡಿರುವÀ ವಾಹನಗಳು ಇನ್ನೂವರೆಗೆ ನೋಂದಣಿ ಮಾಡಿಕೊಳ್ಳದ ಪಕ್ಷದಲ್ಲಿ ಸಪ್ಟೆಂಬರ್ 15 ರೊಳಗಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ವಾಹನ ಖರೀದಿಸಿದ ಮಾಲೀಕರಿಗೆ ತಿಳಿಸತಕ್ಕದ್ದು.
ವಾಹನ-4ರ ತಂತ್ರಾಂಶದ ಅಡಿಯಲ್ಲಿ ಯಾವುದೇ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಶುಲ್ಕ/ತೆರಿಗೆ ಮೊತ್ತವನ್ನು ಇಂಟರನೇಟ್ ಬ್ಯಾಂಕಿಂಗ/ನೆಟ್ ಬ್ಯಾಂಕಿಂಗ ಮುಖಾಂತರವೇ ಮಾತ್ರ ಪಾವತಿಸಬೇಕು. ಆದ್ದರಿಂದ, ಈ ಕಚೇರಿಯಲ್ಲಿನ ಖಜಾನೆ ನಗದು ಕೌಂಟರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಎಲ್ಲ ವರ್ಗದ ಹೊಸ ನೋಂದಣಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ದಾಖಲೆಗಳನ್ನು ಆನ್‍ಲೈನ್ ಮೂಲಕ ಸ್ಕ್ಯಾನಿಂಗ ಮುಖಾಂತರ ದಾಖಲೆಗಳನ್ನು ಅಪಲೋಡ ಮಾಡಬೇಕು.
ಈ ವಿಷಯದಲ್ಲಿ, ವಾಹನ ಖರೀದಿಸಿರುವ/ಸುವ ಮಾಲೀಕರು ಹಾಗೂ ಎಲ್ಲ ವಾಹನಗಳ ಅಧಿಕೃತ ಮಾರಾಟಗಾರರು ಹೆಚ್ಚಿನ ಮಾಹಿತಿಯನ್ನು ಬೆಳಗಾವಿ ಉಪ ಸಾರಿಗೆ ಆಯುಕ್ತರ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದುದೆಂದು ಈ ಮೂಲಕ ತಿಳಿಸಲಾಗಿದೆ.
ರಾಷ್ಟ್ರೀಯ ಪೋಷಣ ಅಭಿಯಾನದಡಿ ಪೋಷಣ ಮಾಸ
ಬೆಳಗಾವಿ:  ‘ರಾಷ್ಟ್ರೀಯ ಪೋಷಣ ಅಭಿಯಾನ’ À’ (National Nutrition Mission) ಕಾರ್ಯಕ್ರಮದಡಿ ಕೇಂದ್ರ ಸರ್ಕಾರವು ಸೆಪ್ಟೆಂಬರ್-2018 ತಿಂಗಳನ್ನು ‘ಪೋಷಣ ಮಾಸ’ವೆಂದು ಘೋಷಿಸಿದ್ದು, ಪೋಷಣ ಮಾಸವನ್ನು ವಿವಿಧ ರೀತಿಯ ಸಮುದಾಯ ಆಧಾರಿತ ಚಟುವಟಿಕೆಗಳ (Community Based Events) ಮೂಲಕ ಆಚರಿಸಲು ನಿರ್ದೇಶನ ನೀಡಿರುತ್ತದೆ. ಹಾಗೆಯೇ, ಪೋಷಣ ಮಾಸದಲ್ಲಿ ಹಮ್ಮಿಕೊಳ್ಳಬೇಕಾದ ಸಮುದಾಯ ಆಧಾರಿತ ಚಟುವಟಿಕೆಗಳ ವಿಷಯ ಮತ್ತು ಹಮ್ಮಿಕೊಳ್ಳುವ ರೀತಿಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿರುತ್ತದೆ.
ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ರವರು ಸೆಪ್ಟೆಂಬರ್-2018ರ ತಿಂಗಳನ್ನು ಸರ್ಕಾರವು ನಿಗದಿಪಡಿಸಿದ ಸಮುದಾಯ ಚಟುವಟಿಕೆಗಳ ಮೂಲಕ ‘ಪೋಷಣ ಮಾಸ’ವನ್ನಾಗಿ ಅಂಗನವಾಡಿ/ಪಂಚಾಯತ/ ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಇವುಗಳ ಸಮನ್ವಯದೊಂದಿಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುವ ಬಗ್ಗೆ ತಿಳಿಸಿರುತ್ತಾರೆ. ಇದಲ್ಲದೆ, ಪಂಚಾಯತಿ ಜನಪ್ರತಿನಿಧಿಗಳನ್ನು, ಸ್ವಯಂ ಸೇವಾ ಸಂಸ್ಥೆಗಳನ್ನು, ಸ್ತ್ರೀ ಶಕ್ತಿ ಸಂಘಗಳನ್ನು ಮತ್ತು ಸ್ಥಳೀಯ ಮುಖಂಡರÀನ್ನು ಒಗ್ಗೂಡಿಸಿಕೊಂಡು ಜಾಥಾಗಳನ್ನು ಏರ್ಪಡಿಸಿ ‘ಪೋಷಣ ಮಾಸ’ ದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವುದರ ಬಗ್ಗೆ ತಿಳಿಸಿರುತ್ತಾರೆ.

ವಸತಿ ರಹಿತ ಕೈಮಗ್ಗ/ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನ
ಬೆಳಗಾವಿ: 2018-19ನೇ ಸಾಲಿಗೆ ಜಿಲ್ಲೆಗೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ವಸತಿ ರಹಿತ ನೇಕಾರರಿಗೆ ವಸತಿ-ವ-ಕಾರ್ಯಗಾರ ಯೋಜನೆಯಡಿ ಭೌತಿಕ ಗುರಿ 120 ನಿಗಧಿಪಡಿಸಲಾಗಿದ್ದು, ವಸತಿ ರಹಿತ ಕೈಮಗ್ಗ/ ವಿದ್ಯುತ್ ಮಗ್ಗ ನೇಕಾರರಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ರಹಿತ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ಖುದ್ದಾಗಿ ಗುರುತಿನ ಚೀಟಿಯೊಂದಿಗೆ ಈ ಕಚೇರಿಯನ್ನು ಸಂಪರ್ಕಿಸಿ, ನಿಗದಿತ ನಮೂನೆಯ ಅರ್ಜಿ ಪಡೆದು ದಿನಾಂಕ:25-09-2018 ರಂದು ಸಂಜೆ 5:30 ಗಂಟೆಯ ಒಳಗಾಗಿ ಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು ಈ ಕಚೇರಿಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.