ಉತ್ತಮ ಸಮಾಜಕ್ಕಾಗಿ

ಅರ್ಜಿ ಆಹ್ವಾನ:ಹಾಗೂ:ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

news belagavi

0

ಅರ್ಜಿ ಆಹ್ವಾನ
ಬೆಳಗಾವಿ:(news belgaum) ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಗುಡಿ ಮತ್ತು ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಶೇ.60 ಸಹಾಯಧನ ಕಾರ್ಯಕ್ರಮ ಕುರಿತು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆ ಮೂಲಕ ಸಾಲ ಪಡೆದು ಘಟಕ ಸ್ಥಾಪಿಸಬೇಕು. ಘಟಕವನ್ನು ಪ್ರಾರಂಬಿಸುವ ಉದ್ದಿಮೆದಾರರು ಕನಿಷ್ಟ 18 ವರ್ಷ ವಯೋಮಾನ ಪೂರೈಸಿರಬೇಕು. ಹೊಸ ಘಟಕಗಳಿಗೆ ಮಾತ್ರ ಈ ಯೋಜನೆಯಡಿ ಸಹಾಯಧನ ದೊರಕುವುದು. ಘಟಕಗಳು ಕೈಗಾರಿಕಾ ಅಥವಾ ಸೇವಾ ಚಟುವಟಿಕೆಯಡಿ ಕೈಗಾರಿಕೆ ಸ್ಥಾಪಿಸುವುದು. ಕೈಗಾರಿಕಾ ಅಥವಾ ಸೇವಾ ಚಟುವಟಿಕೆಗಳ ಸ್ಥಾಪನೆಗೆ ಯೋಜನಾ ವೆಚ್ಚದ ಮೇಲೆ ಮಂಜೂರಾಗುವ ಸಾಲದ ಮೇಲೆ ಸಹಾಯಧನ ಮಂಜೂರು ಮಾಡಲಾಗುವುದು.
ಫಲಾನುಭವಿಯು ಈ ಹಿಂದೆ ಸಾಲ ಪಡೆದು ಸುಸ್ತಿದಾರರಾಗಿರತಕ್ಕದಲ್ಲ. ಫಲಾನುಭವಿಯ ಸರ್ಕಾರದ ಇತರ ಯಾವುದೇ ಯೋಜನೆಯಡಿ ರಿಯಾಯಿತಿ ಪ್ರೋತ್ಸಾಹಧನ ಪಡೆದಿರತಕ್ಕದ್ದಲ್ಲ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 21 ರೊಳಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಅಥವಾ ತಾಲೂಕಿನ ವಿಸ್ತರಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿ ಅಥವಾ ದೂ: 0831-2440430 ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಬೆಳಗಾವಿ:  ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಮಚ್ಚೆ ಉಪಕೇಂದ್ರದಿಂದ ಸರಬರಾಜಾಗುವ ದತ್ತ ನಗರ, ನಾವಗೇಕರ ನಗರ, ಹವಳ ನಗರ, ಸಂಭಾಜಿ ನಗರ, ಗೋಡಶೆ ಕಾಲನಿ, ಓಂಕಾರ ನಗರ, ವ್ಹಿ.ಟಿ.ಯು ಪ್ರದೇಶ, ಕೆ.ಪಿ.ಟಿ.ಸಿ.ಎಲ್. ವಸತಿ ಗೃಹಗಳು, ಉಚವಾಡೆ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೆಟ್ನೆ, ಪಾರವಾಡ, ಚಿಗುಲೆ, ಮಾನ್, ಸಡಾ, ಚೋರ್ಲಾ, ಹಳೆ ಮತ್ತು ಹೊಸ ಹುಳಂದ, ಮಚ್ಛೆ, ಝಾಡಶಹಾಪೂರ, ದೇಸೂರ, ಸುಸ್ಗ್ಯಾನಟ್ಟಿ, ಮಚ್ಛೆ ಔದ್ಯೋಗಿಕ ಕ್ಷೇತ್ರ, ಪೀರನವಾಡಿ, ಖಾದರವಾಡಿ, ಹುಂಚ್ಯಾನಟ್ಟಿ, ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನೇವಡಿ, ನಾವಗೆ, ಜಾನೇವಾಡಿ, ಭಾದರವಾಡಿ, ರಣಕುಂಡೆ, ಕರ್ಲೇ, ಕಿನಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ನಾವಗೆ ಔದ್ಯೋಗಿಕ ಕ್ಷೇತ್ರ, ಅಶೋಕ ಐರನ್ ಕಾಲನಿ, ಹಾಗೂ ಮಚ್ಛೆ ಕೆ.ಎಸ್.ಆರ್.ಪಿ ಪೋಲೀಸ್ ವಸತಿ ಗೃಹಗಳಿಗೆ ಸೆಪ್ಟೆಂಬರ್ 09 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಹೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುವರ್ಣಸೌಧ ಉಪಕೇಂದ್ರ:
110 ಕೆ.ವ್ಹಿ. ಸುವರ್ಣಸೌಧ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಸುವರ್ಣಸೌಧ ಉಪಕೇಂದ್ರದಿಂದ ವಿತರಣೆಯಾಗುವ ಕೊಂಡಸಕೊಪ್ಪ, ಹಲಗಾ, ಬಸ್ತವಾಡ, ಶಗನಮಟ್ಟಿ, ಕಮಕಾರಟ್ಟಿ, ಕೋಳಿಕೊಪ್ಪ, ಬಡೇಕೊಳ್ಳ ಮಠ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಭರತೇಶ ಕಾಲೇಜ,
ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್ ಪ್ರದೇಶಗಳಲ್ಲಿ ಸೆಪ್ಟೆಂಬರ್ 9 ರಂದು ಬೆಳಿಗ್ಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸೆಪ್ಟೆಂಬರ್-10 ರಂದು ವಿದ್ಯುತ್ ವ್ಯತ್ಯಯ:
110 ಕೆ.ವ್ಹಿ. ಉಚಗಾಂವ ಉಪಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರೀಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಗ್ರಾಮಗಳಿಗೆ ಸೆಪ್ಟೆಂಬರ್ 10 ರಂದು ಬೆಳಿಗ್ಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಜಾನೆ-2 ತಂತ್ರಾಂಶ: ನೋಂದಣಿಗೆ ಸೂಚನೆ
ಬೆಳಗಾವಿ:  ಕರ್ನಾಟಕ ಸರ್ಕಾರ ಹಣಕಾಸು ಇಲಾಖೆಯು ಸರ್ಕಾರದ ಹಣಕಾಸು ವ್ಯವಹಾರವನ್ನು ನಿರ್ವಹಿಸಲು ಖಜಾನೆ-2 ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಈಗಾಗಲೇ ರಾಜ್ಯ ವಲಯದಲ್ಲಿ ಬರುವ ಹಣಕಾಸು ಹಾಗೂ ಬಟವಡೆ ಅಧಿಕಾರಿಗಳು ಖಜಾನೆ-2 ರಲ್ಲಿ ಆನ್‍ಲೈನ್ ಮೂಲಕ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.
ಮುಂದುವರೆದು ಸರ್ಕಾರವು ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ವಲಯಗಳಿಗೂ ಕೂಡಾ ಖಜಾನೆ-2 ತಂತ್ರಾಂಶವನ್ನು ವಿಸ್ತರಿಸುವುದಕ್ಕೆ ಕ್ರಮ ಕೈಗೊಂಡಿದೆ. ಕಾರಣ ಪೂರ್ವಸಿದ್ಧತಾ ಕ್ರಮವಾಗಿ ಬೆಳಗಾವಿ ಜಿಲ್ಲೆ ಹಾಗೂ ವ್ಯಾಪ್ತಿಯ ತಾಲೂಕಿನ ನಿಯಂತ್ರಣಾಧಿಕಾರಿಗಳು ಮತ್ತು ಬಟವಡೆ ಅಧಿಕಾರಿಗಳು ತಮ್ಮ ಕಚೇರಿಯಲ್ಲಿನ ಮೇಕರ್, ಚಕ್ಕರ್ ಹಾಗೂ ಅಪ್ರುವರ್, ಮೆಸೆಂಜರ್ ನೋಂದಣಿಗಾಗಿ ಸಂಬಂಧಿಸಿದ ಖಜಾನೆಯಲ್ಲಿನ ಆರ್1 ಆರ್2 ಫಾರಂಗಳನ್ನು ಪಡೆದು ನೋಂದಣಿ ಮಾಡಿಸಿಕೊಳ್ಳುವುದು ಹಾಗೂ ಡಿಎಸ್‍ಸಿ () ಯನ್ನು ಪಡೆದುಕೊಳ್ಳುವುದು ಮತ್ತು ರೋಲ್ ಮ್ಯಾಪಿಂಗ್ ಮಾಡಿಸಿಕೊಂಡು, ತಮ್ಮ ಕಚೇರಿಯ ಎಲ್ಲ ಸಿಬ್ಬಂದಿಯ ರೆಸಿಪಿಎಂಟ್ ಮಾಂಡೆಟರಿಗಳನ್ನು ಮಾಡಿಸಿಕೊಳ್ಳುವುದರೊಂದಿಗೆ ಖಜಾನೆ-2 ರಲ್ಲಿ ನೋಂದಣಿಯಾಗದ ಕಚೇರಿಗಳು ಖಜಾನೆಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಂಡು ಡಿಎಸ್‍ಸಿ ಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡೇ-ನಲ್ಮ್ ಯೋಜನೆಯ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ
ಬೆಳಗಾವಿ: ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ 2018-19ನೇ ಸಾಲಿನ ಡೇ-ನಲ್ಮ್ ಯೋಜನೆಯ ಕೌಶಲ್ಯ ತರಬೇತಿಗೆ ಭೌತಿಕ ಗುರಿ-24, ಸ್ವಯಂ ಉದ್ಯೋಗ ಸಾಲ ಭೌತಿಕ ಗುರಿ-05, ಗುಂಪು ಸಾಲ ಭೌತಿಕ ಗುರಿ-01, ಸ್ವಸಹಾಯ ಸಂಘಗಳ ರಚನೆ ಭೌತಿಕ ಗುರಿ-05 ಮತ್ತು ಕ್ರೆಡಿಟ್ ಲಿಂಕೇಜ್ ಭೌತಿಕ ಗುರಿ-03 ಹೀಗೆ ವಿವಿಧ ಉಪಘಟಕದಡಿಯಲ್ಲಿ ಗುರಿಗಳನ್ನು ನಿಗದಿಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ರಾಯಬಾಗ ಪಟ್ಟಣ ಪಂಚಾಯತ ಕಾರ್ಯಾಲಯದ ಡೇನಲ್ಮ್ ಶಾಖೆಗೆ ಸಂಪರ್ಕಿಸಬೇಕೆಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.