ಉತ್ತಮ ಸಮಾಜಕ್ಕಾಗಿ

ಪ್ರಕಟಣೆ ಹಾಗೂ ಅರ್ಜಿ ಆಹ್ವಾನ

Application invitation and publication

0

ಡಿ.ದೇವರಾಜ ಅರಸು ಅವರ 103ನೇ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ
ಬೆಳಗಾವಿ:  (news belgaum) ದಿ. ಡಿ. ದೇವರಾಜ ಅರಸುರವರ 103ನೇಯ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಗರದಲ್ಲಿ ಸರ್ಕಾರದ ವತಿಯಿಂದ ಆಚರಿಸುವ ನಿಮಿತ್ಯ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಗಸ್ಟ 7 ರಂದು ಸಾಯಂಕಾಲ 5 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ಸದರಿ ಪೂರ್ವಭಾವಿ ಸಭೆಗೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಂಘ-ಸಂಸ್ಥೆಗಳ ಪ್ರದಾಧಿಕಾರಿಗಳು ಹಾಗೂ ಅಭಿಮಾನಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು, ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಡಿ. ದೇವರಾಜ ಅರಸು ಜನ್ಮದಿನಾಚರಣೆ ಸಮಿತಿ ಬೆಳಗಾವಿ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕೋಡಿ: ಸ್ಥಿರಾಸ್ತಿ ಬೆಲೆ ಕರಡು ಪತ್ರಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ
ಬೆಳಗಾವಿ:  ಚಿಕ್ಕೋಡಿ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳನ್ನು ಸನ್ 2018-19 ನೇ ಸಾಲಿಗೆ ಜಾರಿಗೆ ಬರುವಂತೆ ಅಧ್ಯಕ್ಷರು ಹಾಗೂ ತಹಶೀಲ್ದಾರರು ಚಿಕ್ಕೋಡಿ ಇವರ ಅಧ್ಯಕ್ಷತೆಯಲ್ಲಿ ಆಗಸ್ಟ 4 ರಂದು ನಡೆದ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮಿತಿ ಸಭೆಯಲ್ಲಿ ನಿರ್ಧರಿಸಿ ಪರಿಷ್ಕರಿಸಲಾಗಿದೆ.
ಈ ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಆಕ್ಷೇಪಣೆಗಾಗಿ ಉಪನೋಂದಣಿ ಕಛೇರಿಯಲ್ಲಿ ಪ್ರಚುರಪಡಿಸಲಾಗಿದೆ. ಸದರಿ ಮಾರ್ಗಸೂಚಿ ಬೆಲೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 (ಹದಿನೈದು) ದಿನಗಳ ಒಳಗಾಗಿ ಉಪನೋಂದಣಿ ಅಧಿಕಾರಿಗಳಿಗೆ ಲಿಖತವಾಗಿ ಸಲ್ಲಿಸಬೇಕೆಂದು ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಪ್ಪಾಣಿ: ಸ್ಥಿರಾಸ್ತಿ ಬೆಲೆ ಕರಡು ಪ್ರತಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ
ಬೆಳಗಾವಿ: ನಿಪ್ಪಾಣಿ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ಸ್ಥಿರಾಸ್ತಿಗಳ ಮೌಲ್ಯಗಳನ್ನು ಸನ್ 2018-19 ನೇ ಸಾಲಿಗೆ ಜಾರಿಗೆ ಬರುವಂತೆ ಅಧ್ಯಕ್ಷರು ಹಾಗೂ ತಹಶೀಲ್ದಾರರು ಚಿಕ್ಕೋಡಿ ಇವರ ಅಧ್ಯಕ್ಷತೆಯಲ್ಲಿ ಆಗಸ್ಟ 4 ರಂದು ನಡೆದ ಸಭೆಯಲ್ಲಿ ಕನಿಷ್ಠ 20% ರಿಂದ ಅಂಕಿ ಅಂಶಗಳ ಆಧಾರದ ಮೇಲೆ ಗರಿಷ್ಠ ಮಟ್ಟಿಗೆ ಹೆಚ್ಚಿಸಿ ಪರಿಷ್ಕರಿಸಿ ಪಟ್ಟಿ ತಯಾರಿಸಲಾಗಿದ್ದು, ಪರಿಷ್ಕøತ ಮಾರ್ಗಸೂಚಿ ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಆಕ್ಷೇಪಣೆಗಾಗಿ ಉಪನೋಂದಣಿ ಕಛೇರಿಯಲ್ಲಿ ಪ್ರಚುರಪಡಿಸಲಾಗಿದೆ.
ಸದರಿ ಮಾರ್ಗಸೂಚಿ ಬೆಲೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 (ಹದಿನೈದು) ದಿನಗಳ ಒಳಗಾಗಿ ಉಪನೋಂದಣಿ ಅಧಿಕಾರಿಗಳಿಗೆ ಲಿಖತವಾಗಿ ಸಲ್ಲಿಸಬೇಕೆಂದು ನಿಪ್ಪಾಣಿ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರವಾಡ ರಸ್ತೆ ಸಾರಿಗೆ ಸಂಸ್ಥೆ: ಟೂರ್ ಪ್ಯಾಕೇಜ್
ಬೆಳಗಾವಿ:  ಮಳೆಗಾಲದ ಪ್ರಯುಕ್ತ ಜಲಧಾರೆಗಳ ವೀಕ್ಷಣೆಗೆ ಧಾರವಾಡದಿಂದ ವಿಶೇಷ (ಪ್ಯಾಕೇಜ್ ಟೂರ್) ಸಾರಿಗೆ ಸೌಲಭ್ಯಗಳನ್ನು ಆಗಸ್ಟ 12, 19 ಹಾಗೂ 26 ರಂದು ಕಲ್ಪಿಸಲಾಗಿದೆ.

ಈ ದಿನಾಂಕಗಳಂದು ಟಿಕೇಟ್ ಬುಕ್ ಮಾಡಲು ಅವತಾರ್ ಟಿಕೇಟ್ ಕೌಂಟರ್‍ಗಳಲ್ಲಿ ಹಾಗೂ ಇಲಾಖೆ ವೆಬ್‍ಸೈಟ್ www.ksrtc.in ನ ಮುಖಾಂತರ ಆಸನಗಳನ್ನು ಕಾಯ್ದಿರಿಸಬುದಾಗಿದೆ.

ಪ್ಯಾಕೇಜ್ ಟೂರ್ ಸಮಯದ ವಿವರ:
ಬೆಳಿಗ್ಗೆ 7-30 ಗಂಟೆಗೆ ಸವದತ್ತಿಯಿಂದ ಹೊರಟು ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕೊಳಗಿ ನೇಚರ್ ಪಾರ್ಕ್, ಉಳವಿ ದೇವಸ್ಥಾನ ವೀಕ್ಷಿಸಿ ಸವದತ್ತಿಗೆ ರಾತ್ರಿ 8-30 ಗಂಟೆಗೆ ಹಿಂದಿರುಗುವುದು ಎಂದು ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅರ್ಜಿ ಆಹ್ವಾನ
ಬೆಳಗಾವಿ:  2018-19 ನೇ ಸಾಲಿನಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಮೀಣ ಭಾಗದ ಮಾತ್ರ ವಸತಿ ರಹಿತ ಕುಶಲಕರ್ಮಿಗಳಿಗೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ನಮೂನೆಯ ಅರ್ಜಿಯಲ್ಲಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಶಲಕರ್ಮಿಗಳು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ ಅಥವಾ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪವಿಭಾಗ, ಬೈಲಹೊಂಗಲ ಹಾಗೂ ಚಿಕ್ಕೋಡಿ ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಂದ ಪಡೆದು ಎಲ್ಲಾ ಅವಶ್ಯಕ ದಾಖಲಾತಿಗಳೊಂದಿಗೆ ಆಗಸ್ಟ 21 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ವೈಯಕ್ತಿಕ ವಸತಿ-ವ-ಕಾರ್ಯಾಗಾರ ಪಡೆಯಲು ಫಲಾನುಭವಿಗಳು ಸಲ್ಲಿಸಬೇಕಾದ ದಾಖಲಾತಿಗಳ ವಿವರ: 1. ವಸತಿ ಕಾರ್ಯಾಗಾರಕ್ಕೆ ನಿಗದಿ ಪಡಿಸಿದ ಅರ್ಜಿ, 2. ಜಾತಿ ಪ್ರಮಾಣ ಪತ್ರ, 3. ಕೈಗಾರಿಕಾ ವಿಸ್ತರಣಾಧಿಕಾರವರಿಂದ ಪಡೆದ ಕುಶಲ ಕರ್ಮಿ ಕಸಬು ದೃಢೀಕರಣ ಪತ್ರ, 4. ಸ್ವಂತ ನಿವೇಶನ ಹೊಂದಿರುವ ಬಗ್ಗೆ ದಾಖಲೆಗಳು 5. ಈಗಿರುವ ಖಾಲಿ ಜಾಗೆ/ ಗುಡಿಸಲು/ ಶಿಥಿಲಗೊಂಡ ಮನೆಯ ಫೋಟೋಗಳು 6. ವಾರ್ಷಿಕ ಆದಾಯ ಧೃಢೀಕರಣ ಪ್ರಮಾಣ ಪತ್ರ 7. ಎರಡು ಸ್ಟ್ಯಾಂಪ ಅಳತೆಯ ಭಾವಚಿತ್ರಗಳು, ಆದಾಯ ಪ್ರಮಾಣ ಪತ್ರ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ 0831-2440430 ಸಂಪರ್ಕಿಸಬೇಕೆಂದು ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Application invitation and publication

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news

|  (  Belgaum News | Just Belgaum- ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news

Leave A Reply

 Click this button or press Ctrl+G to toggle between Kannada and English

Your email address will not be published.