ಉತ್ತಮ ಸಮಾಜಕ್ಕಾಗಿ

ಕುಂತರೂ ಕೂಡಂಗಿಲ್ಲ…ನಿಂತರೂ ನಿಲ್ಲಂಗಿಲ್ಲ…ಇನ್ನಿಲ್ಲದ ಚಡಪಡಿಕೆ!

Article 144 imposed on voting count: Deputy Commissioner Order

0

ಮತ ಎಣಿಕೆ ಕೇಂದ್ರಸುತ್ತ ಕಲಂ144 ಜಾರಿ:ಜಿಲ್ಲಾಧಿಕಾರಿ ಆದೇಶ

ಬೆಳಗಾವಿ: ಮೇ.15ಕ್ಕೆ ನಗರದ RPD ಕಾಲೇಜಿನಲ್ಲಿ ಮತ ಎಣಿಕೆ ನಡೆಯುವುದರಿಂದ ಶಾಂತಿ ಸೌಹಾರ್ಧತೆ ಕಾಯಲು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ನಿಷೇದಾಜ್ಞೆ ಹೊರಡಿಸಿದ್ದಾರೆ. ನಾಳೆ ಸೋಮವಾರ ಮೇ. 14ರ ಮಧ್ಯರಾತ್ರಿಯಿಂದ ಮಂಗಳವಾರ ಮೇ. 15ರ ಮಧ್ಯರಾತ್ರಿವರೆಗೆ ಸಿಆರ್ ಪಿಸಿ ಕಲಂ 144ರ ಅಡಿ ಮತ ಎಣಿಕೆ ಕೇಂದ್ರಗಳ ಸುತ್ತ 200 ಮೀಟರ್ ನಿಷೇದಾಜ್ಞೆ ಹೊರಡಿಸಿ ಆದೇಶ ಹೊರಡಿಸಿದ್ದಾರೆ.
ಪ್ರಚೋದನಕಾರಿ ಘೋಷಣೆ, ಮಾರಕಾಸ್ತ್ರಗಳ ಬಳಕೆ ಮತ್ತು ಸಭೆ-ವಿಜಯೋತ್ಸವ ಆಚರಣೆ, ಪಟಾಕಿ-ಸಿಡಿಮದ್ದು ಸಿಡಿಸುವುದು ಸೇರಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಕುಂದುಂಟಾಗುವ ಚಟುವಟಿಕೆಗಳಿಗೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ.Article 144 imposed on voting count: Deputy Commissioner Order

ಕುಂತರೂ ಕೂಡಂಗಿಲ್ಲ…ನಿಂತರೂ ನಿಲ್ಲಂಗಿಲ್ಲ…ಇನ್ನಿಲ್ಲದ ಚಡಪಡಿಕೆ!

ಬೆಳಗಾವಿ: ಜಿಲ್ಲೆಯ 18 ಕ್ಷೇತ್ರಗಳ ಅಭ್ಯರ್ಥಿಗಳ ಅದೃಷ್ಟದ ಭವಿಷ್ಯ ಹೊತ್ತ ಪೆಟ್ಟಿಗೆಗಳು ಈಗ ಟಿಳಕವಾಡಿಯ RPD ಕಾಲೇಜು ಸ್ಟ್ರಾಂಗ ರೂಮು ಸೇರಿವೆ. ಶನಿವಾರ ಬಹುಹೊತ್ತಿನವರೆಗೆ ಮತದಾನ ನಡೆದು ಇಂದು ಭಾನುವಾರ ಸಹ ಬೆಳಿಗ್ಗೆ ದೂರದ ತಾಲೂಕುಗಳಿಂದ ತಡವಾಗಿ ಮತಪೆಟ್ಟಿಗೆಗಳು ಬಿಗುಭದ್ರತೆಯಲ್ಲಿ ಬೆಳಗಾವಿ ತಲುಪಿದವು.
ಕೇಂದ್ರೀಯ ಪಡೆಗಳ ಬಿಗಿ ಭದ್ರತೆ ನಡುವೆ, ಜಿಪಿಎಸ್ ಅಳವಡಿಸಲಾದ ಸರಕಾರಿ ವಾಹನಗಳು ತಮ್ಮ ತಮ್ಮ ಅಧಿಕಾರಿ ಸಿಬ್ಬಂಧಿ ತಂಡದೊಂದಿಗೆ ಆಗಮಿಸಿದ ತಕ್ಷಣ ಅವುಗಳನ್ನು ಹಿರಿಯ ಅಧಿಕಾರಿಗಳ ಸಮ್ಮುಖ ನಿಗದಿತ ಸ್ಟ್ರಾಂಗ್ ರೂಮುಗಳಿಗೆ ತಳ್ಳಲಾಯಿತು.
ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲ, ಸಿಇಓ ಆರ್. ರಾಮಚಂದ್ರನ್ ಹಾಗೂ ಚುನಾವಣಾ ವೀಕ್ಷಕ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಭದ್ರಪಡಿಸಲಾಯಿತು. ಮೇ. 15 ರವರೆಗೂ 24 ಗಂಟೆ ಕೇಂದ್ರೀಯ ಭದ್ರತಾ ಪಡೆಗಳು ಕಾವಲು ನೋಡಿಕೊಳ್ಳಲಿವೆ.
ಚುನಾವಣಾ ಪ್ರಚಾರಕ್ಕೆ ಊಟ, ನಿದ್ರೆ ಇಲ್ಲದೇ ಅಲೆದಾಡಿದ್ದ ಅಭ್ಯರ್ಥಿಗಳಿಗೆ ಈಗಲೂ ವಿಶ್ರಾಂತಿಗೆ ಮನಸ್ಸಿಲ್ಲ. ಮತ ಎಣಿಕೆ ಮುಗಿದು ಫಲಿತಾಂಶ ಬರುವವರೆಗೂ ಇನ್ನಿಲ್ಲದ ಚಡಪಡಿಕೆ ಪ್ರಾರಂಭವಾಗಿದೆ.
ಕುಂತರೂ ಕೂಡಂಗಿಲ್ಲ… ನಿಂತರೂ ನಿಲ್ಲಂಗಿಲ್ಲ…ಎಂಬಂತೆ ಗಿರಕಿ ಹೊಡೆಯುತ್ತಿದ್ದಾರೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು. ಇವರೆಲ್ಲ ಇನ್ನೆರಡು ದಿನ ಮನೆಯಲ್ಲಿದ್ದರೂ ಊಟ ತಿಂಡಿ ಸೇರದ ಪರಿಸ್ಥಿತಿಗೆ ಅಭ್ಯರ್ಥಿಗಳು ಒಳಗಾಗಿದ್ದು, ವಿಧಾನಸಭೆ ಮೆಟ್ಟಿಲು ಹತ್ತುವ ಯೋಗಾಯೋಗ ಯಾರ್ಯಾರಿಗಿದೆ ಕಾಯ್ದು ನೋಡಬೇಕಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

It’s not the same … not standing up … no restlessness!

Leave A Reply

 Click this button or press Ctrl+G to toggle between Kannada and English

Your email address will not be published.