ಉತ್ತಮ ಸಮಾಜಕ್ಕಾಗಿ

ಧರ್ಮಾಚರಣೆ ಮೂಲಕ ಆತ್ಮ ಕಲ್ಯಾಣ – ಶ್ರೀ. ವಿದ್ಯಾಭೂಷಣ

1

ಬೆಳಗಾವಿ.ಜ.31: ಮನುಷ್ಯ ತನ್ನ ಜೀವನದಲ್ಲಿ ಧರ್ಮಾಚರಣೆ ಮಾಡಿದರೆ ಮಾತ್ರ ಆತ್ಮ ಕಲ್ಯಾಣ ಮಾಡಿಕೊಳ್ಳಲು ಸಾಧ್ಯ ಎಂದು ಶ್ರಿ. 108 ವಿದ್ಯಾಭೂಷಣ ಮುನಿಗಳು ಇಂದಿಲ್ಲಿ ಹೇಳಿದರು.
ಬೆಳಗಾವಿ ತಾಲೂಕಿನ ಧಾಮಣೆ (ಎಸ್.) ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ.1008 ಭಗವಾನ ಮಹಾವೀರರ ಚರ್ತುಮುಖ ತೀರ್ಥಂಕರರ ಜಿನಬಿಂಬ ಮಾನಸ್ಥಂಭೋಪರಿ ಮತ್ತು ಶಿಖರಸ್ಥ ಸಿಂಹಾಸನೋಪರಿ ಶ್ರೀ.1008 ಭಗವಾನ ಪಾಶ್ರ್ವನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದಲ್ಲಿ ಮಂಗಲ ಪ್ರವಚನ ನೀಡಿದ ಅವರು, ಮನುಷ್ಯ ಅತಿ ಆಸೆ, ಲೋಭ ಮಾಯೆಗಳಿಂದ ಕೂಡಿದ ಈ ಲೋಕದಲ್ಲಿ ಧರ್ಮಚಾರಣೆ ಮಾಡುವುದನ್ನು ಮರೆಯುತ್ತಿದ್ದಾನೆ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವೂ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು.
ಜೈನ ಆಗಮ ಶಾಸ್ತ್ರದಲ್ಲಿ ಪುರ್ನಜನ್ಮ ಸಾಧ್ಯತವಿದೆ.ಮನುಷ್ಯ ಶರೀರ ನಶ್ವರವಾಗಿದ್ದು, ಆತ್ಮ ಯಾವಾಗಲೂ ಜೀವಂತವಾಗಿರುತ್ತದೆ. ಕಾರ್ಖಾನೆಗಳಲ್ಲಿ ಉತ್ಪಾದನೆಗಳನ್ನು ತಯಾರಿಸಬೇಕಾದರೆ ವಿದ್ಯುತ್ ಆಗತ್ಯವಾಗುತ್ತದೇಯೋ ಅದೇ ರೀತಿ ಶರೀರವನ್ನು ಚಲನ ವಲನಗಳಲ್ಲಿಡಲು ಆತ್ಮವೂ ಅಗತ್ಯವಾಗಿದೆ. ಆತ್ಮ ಶುದ್ದಿಕರಣದಿಂದ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಅವರು ಹೇಳಿದರು.
ಬುಧವಾರದಂದು ಪಂಚಕಲ್ಯಾಣ ಮಹೋತ್ಸವದಲ್ಲಿ ಮಂಗಲವಾದ್ಯ ಘೋಷ, ಸೌಧರ್ಮ ಇಂದ್ರ ಇಂದ್ರಾಯಣಿ ಆಗಮನ, ನಿತ್ಯ ವಿಧಿ, ಮಂಗಲ ಕುಂಭಾನಯನ, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ ಪಠಣ, ಶಾಂತಿ ಹೋಮ, ಯಾಗ ಮಂಡಲ ಆರಾಧನಾ, ಯಕ್ಷನೃತ್ಯ, ರಾಜ್ಯಾಭಿಷೇಕ, 56 ರಾಜರಿಂದ ಕಪ್ಪುಕಾಣಿಕೆ ಅರ್ಪಣೆ, ರಾಜಸಭೆ ಲೋಕಾಂತಿಕ ದೇವಾಗಮನ, ವೈರಾಗ್ಯ ಸ್ತುತಿ, ದೀಕ್ಷಾಕಲ್ಯಾಣಕ ಸಂಸ್ಕಾರ, ವಿಶ್ವಶಾಂತಿ ಜಾಪ್ಯ, ಸವಾಲ ಸಂಗೀತ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಬಸದಿಯ ಟ್ರಸ್ಟ ಕಮಿಟಿ ಅಧ್ಯಕ್ಷ ಮಹಾವೀರ ಪಾಟೀಲ, ಉಪಾಧ್ಯಕ್ಷ ಜಿನಪ್ಪ ಹನಮಗೊಂಡ, ಧರಣೇಂದ್ರ ಪಾಟೀಲ, ಮಂಜುನಾಥ ಶಹಾಪೂರಿ, ವಿದ್ಯಾಧರ ಪಾಟೀಲ, ಅನಂತ ಜಯಗೌಡ್ರ, ದೇವೇಂದ್ರ ಪೂಜಾರಿ, ಕುಬೇರ ಕಲಗೌಡ, ಶ್ರೇಣಿಕ ಗುಮಾಜ, ವಿಜಯ ತವನಪ್ಪ ಬುಡಗೌಡ ಕಲ್ಲಪ್ಪ ಗುಂಡು ಜಾಯಕ್ಕನವರ ಮನೋಹರ ಪಾಟೀಲ, ಅನಿಲ ಬುಡವಿ, ದಶರಥ ಹನಮಗೊಂಡ, ಮಹಾವೀರ ಚೌಗೊಂಡ, ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾಚಾರ್ಯ ಪ್ರವೀಣ ಉಪಾಧ್ಯೆ, ಸಹ ಪ್ರತಿಷ್ಠಾಚಾರ್ಯ ಅಮೋಲ ಉಪಾಧ್ಯೆ, ಧರ್ಮರಾಜ ಉಪಾಧ್ಯೆ, ಹರ್ಷವರ್ಧನ ಉಪಾಧ್ಯೆ ಇವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

1 Comment
  1. satish says

    ನಾನು ಹುಟ್ಟಿದ್ದು ಬೆಳಗಾವಿ

Leave A Reply

 Click this button or press Ctrl+G to toggle between Kannada and English

Your email address will not be published.