ಉತ್ತಮ ಸಮಾಜಕ್ಕಾಗಿ

ಎಟಿಎಂನಿಂದ ಹಣ ಡ್ರಾ ಮಾಡಿದ್ದ ಗ್ರಾಹಕರೊಬ್ಬರು ಖೋಟಾ ನೋಟು ಬಂದಿರುವುದನ್ನು ಪ್ರದರ್ಶಿಸಿದ್ದಾರೆ.

news b

0

ಬೆಳಗಾವಿ:(news belgaum) ನಗರದಲ್ಲಿ ಖೋಟಾ ನೋಟುಗಳ ಹಾವಳಿ ಕಂಡುಬಂದಿದ್ದು, ಸ್ವತಃ ರಾಷ್ಟ್ರೀಕೃತ ಬ್ಯಾಂಕ್ ATMನಿಂದ ಪಡೆಯಲಾದ ₹200 ಕರೆನ್ಸಿ ನೋಟ್ ಫೇಕ್ ಎಂಬುವುದು ಗಮನಕ್ಕೆ ಬಂದಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಜುಮನ್ ಇಸ್ಲಾಂ ಪಕ್ಕದಲ್ಲಿನ ವಿವಿಧ ಬ್ಯಾಂಕ ATM ಗಳ ಪೈಕಿ ಇಂದು ಒಂದು ಎಟಿಎಂನಿಂದ ಹಣ ಡ್ರಾ ಮಾಡಿದ್ದ ಗ್ರಾಹಕರೊಬ್ಬರು ಖೋಟಾ ನೋಟು ಬಂದಿರುವುದನ್ನು ಪ್ರದರ್ಶಿಸಿದ್ದಾರೆ.
News Belgaum-Auto Draft 22 News Belgaum-Auto Draft 23ರಾಷ್ಟ್ರೀಕೃತ ಬ್ಯಾಂಕನ ಎಟಿಎಂ ಯಂತ್ರದಲ್ಲಿ ಖೋಟಾ ನೋಟು ನುಸುಳಲು ಕಾರಣವೇನು ಎಂಬುವುದು ಸಂಶಯ ಮೂಡಿಸಿದೆ. ಖೋಟಾ ನೋಟಿನ ವಾಟರ್ ಮಾರ್ಕ್ ಪ್ರಿಂಟೆಡನಲ್ಲಿ ಮಹಾತ್ಮಾ ಗಾಂಧಿಜೀ ಕಾಣುತ್ತಿಲ್ಲ. ಜತೆಗೆ ಅಸಹಜ ಪ್ರಿಂಟಿಂಗ್ ಕಾಣುವಂತಿದೆ. ನೈಜ್ ನೋಟ್ ನಲ್ಲಿ ಮಾತ್ರ ಗಾಂಧೀಜಿ ವಾಟರ್ ಮಾರ್ಕ್ ಭಾವಚಿತ್ರವಿದೆ. ಸಹಜ ನೋಟಕ್ಕೆ ವ್ಯತ್ಯಾಸ ಬಾರದಂತೆ ಕಾಣುವ ಇಂತಹ ನೋಟುಗಳು ಭಾರಿ ಪ್ರಮಾಣದಲ್ಲಿ ಚಾಲ್ತಿಯಲ್ಲಿರುವ ಶಂಕೆ ಮೂಡಿಸಿದೆ.
ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಹೋಗುವ ಗ್ರಾಹಕರು ಸಂಕಷ್ಟಕ್ಕೆ ಬೀಳುವ ಮುಂಚೆ ಪೊಲೀಸ್ ಇಲಾಖೆ ಬ್ಯಾಂಕಗಳ ಬಗ್ಗೆ ಹದ್ದಿನ ಕಣ್ಣಿಡುವುದು ಸೂಕ್ತ ಎಂಬುವುದು ಗಮನಾರ್ಹ. ಬ್ಯಾಂಕಗಳಲ್ಲಿ ಯಂತ್ರಗಳಲ್ಲೇ ನೋಟಿನ ನೈಜತೆ ತಿಳಿಯುತ್ತದೆ. ಹಾಗಿದ್ದಾಗಲೂ ಖೋಟಾ ನೋಟುಗಳು ಎಟಿಎಂನಲ್ಲಿ ಬರುತ್ತಿರುವುದು ಆಶ್ಚರ್ಯಕರ. ಬ್ಯಾಂಕ್ & ಎಟಿಎಂ ಗಳಿಗೆ ಕರೆನ್ಸಿ ತುಂಬುವ ಏಜೆನ್ಸಿಗಳ ಪರಿಶೀಲನೆ ಪೊಲೀಸರ ಮುಂದಿನ ಸದ್ಯದ ಸವಾಲು.

Leave A Reply

 Click this button or press Ctrl+G to toggle between Kannada and English

Your email address will not be published.