ಉತ್ತಮ ಸಮಾಜಕ್ಕಾಗಿ

tarun kranti:ಫೆ.23 ರಿಂದ 27 ರವರೆಗೆ ಆಟೊ ಎಕ್ಸ್ಪೊ ಪ್ರದರ್ಶನ

Auto Expo Performance from February 23 to 27

0

ಬೆಳಗಾವಿ: (news belgaum)(tarunkranti)ಉತ್ತರ ಕರ್ನಾಟಕದ ಔದ್ಯೋಗಿಕ ನಗರ ಎಂದು ಹೆಸರಾದ ಬೆಳಗಾವಿ ನಗರದಲ್ಲಿ ಇದೇ.ಫೆ.23 ರಿಂದ 27 ರವರೆಗೆ ಐದು ದಿನಗಳ ಕಾಲ ನಗರದ ಸಿಪಿಎಡ್ ಮೈದಾನದಲ್ಲಿ ಭವ್ಯ ಆಟೊ ಎಕ್ಸ್ಪೊ ಪ್ರದರ್ಶನ ನಡೆಯಲಿದೆ.
ಯಶ ಕಮ್ಯುನಿಕೇಷನ್ಸ್ ಮತ್ತು ಇವೆಂಟ್ಸ ಇವರು ಆಯೋಜಿಸಿರುವ ಈ ಆಟೊ ಎಕ್ಸ್ಪೊ ಪ್ರದರ್ಶನ ದಲ್ಲಿ ಸುಮಾರು 50 ಕ್ಕು ಹೆಚ್ಚು ಆಟೊಮೊಬೈಲ್ ಕಂಪನಿಗಳು ಭಾಗವಹಿಸಲಿವೆ.ದ್ವಿಚಕ್ರ ವಿಭಾಗದಲ್ಲಿ ರಾಯಲ್ ಎನಫಿಲ್ಡ, ವೆಸ್ಪಾ,ಆಕ್ಟಿವಾ, ಬಜಾಜ,ಟಿವಿಎಸ, ಹೊಂಡಾ ಸುಝುಕಿ ಕಂಪನಿಗಳು ಭಾಗವಹಿಸಲಿವೆ.
ನಾಲ್ಕು ಚಕ್ರ ವಿಭಾಗದಲ್ಲಿ ಟಾಟಾ ಸಮೂಹ, ಜೀಪ, ಫಿಯಾಟ, ಮಾರುತಿ ಸುಜುಕಿ ನೆಕ್ಸಾ,ಟೋಯಾಟೊ, ಸ್ಕೊಡಾ, ಕಂಪನಿಗಳು ಭಾಗವಹಿಸಲಿವೆ.
ಕಾರುಗಳಿಗೆ ಅಗತ್ಯವಿರುವ ಬಿಡಿ ಭಾಗಗಳು, ವೆಗಾ ಹೆಲ್ಮಟ್, ಟಾಟಾ ಟೂಲ್ಸ, ಸ್ಪಾನರ್, ಕಂಪನಿಗಳು ಹಾಗೂ ಸೇವಾ ವಿಭಾಗದಲ್ಲಿ ಟಾಯರ್ ರಿಟ್ರೆಡಿಂಗ್ , ಟಾಯರ್ ಸೋಲ್ಸ, ಅರಿಹಂತ ಅಟೊ ಗ್ಯಾಸ, ಮೂವ್ಹ ಆನ್ ವಿಲ್ಸ್, ಮೊಟೊ ಕಾರ್ಪ, ಎಸ್.ಎಲ್.ವ್ಹಿ. ಸಿರ್ಯಾಮಿಕ, ಕಾರ ಕ್ಲೀನ್, ಸ್ಕಾಯ ಬ್ಯಾಟರೀಜ್, ಫಿಟ್ ಮೈ ಟಾಯರ, ಸ್ಟಾರ ಟೂಲ್ ಕಂಪನಿ, ಡಿಎಸಬಿ ಬ್ಯಾಂಕಿನ ಆಕರ್ಷಕ ವಾಹನ ಸಾಲ ಯೋಜನೆ.ಮೋಟುಲ್ ಲುಬ್ರಿಕಂಟ್ಸ, ಶಾಪಿಂಗ್ ವಿಭಾಗ ಮತ್ತು ವಿವಿಧ ಖಾದ್ಯ ತಿನಿಸುಗಳ ಮಾರಾಟ ಮಳಿಗೆಗಳು ಭಾಗವಹಿಸಲಿವೆ.
ಈ ಪ್ರದರ್ಶನ ದಲ್ಲಿ ಮೊಟಾರ ಬೈಕ್ ಸ್ಟಂಟ್ಸ, ವಿಂಟೆಜ್ ಕಾರ್, ಪ್ರದರ್ಶಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Auto Expo Performance from February 23 to 27

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.