ಉತ್ತಮ ಸಮಾಜಕ್ಕಾಗಿ

ಸಾಲ ಮನ್ನಾ ಮಾಡಿದ್ದಿರಿ ಆದರೆ ಇನ್ನೂವರೆಗೆ ಅದರ ಬಗ್ಗೆ ಸ್ಪಷ್ಟತೆಯೇ ಇಲ್ಲ.:ಬಾಬಾಗೌಡ ಪಾಟೀಲ ಆಕ್ರೋಶ

news belagavi

0

ಬೆಳಗಾವಿ: (news belagavi)ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ರೈತರಿಗೆ ಮೋಸ ಮಾಡುತ್ತಿವೆ ಎಂದು ಮಾಜಿ ಸಚಿವ ಬಾಬಾಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಉಳಿಯೋದು ರೈತ ರಿಂದಲೇ, ಆದರೂ ನಮ್ಮಿಂದ ನಮ್ಮನ್ನೇ ಕಡೆಗಣಿಸಿದರೆ ಪಶ್ಚಾತಾಪ ಅನುಭವಿಸಬೇಕಾಗುತ್ತದೆ ಎಚ್ಚರ ಎಂದು ರೈತ ಮುಖಂಡ ಬಾಬಾ ಗೌಡ ಪಾಟೀಲ ಗುಡುಗಿದರು.
ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಮ್ಮಿಕೂಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರವು ರೈತರಿಗೆ ಆಕಾಶ ತೋರಿಸುವ ಕೆಲಸ ಮಾಡುತ್ತಿವೆ. ಕೇಂದ್ರ ಸರಕಾರ ಎಲ್ಲ ಬೆಳೆಗಳಿಗೆ ನಿರ್ಧಿಷ್ಠ ಬೆಲೆ ನಿರ್ಮಿಸಿದ್ದು ನಮಗೆ ಸಂತೋಷ ತಂದಿತ್ತು, ಆದರೆ ಅದನ್ನು ಜಾರಿಗೆ ತರದೇ ಎರಡೂ ಸರಕಾರಗಳು ನೋವಿನ ಮೇಲೆ ಬರೆ ಎಳೆಯುತ್ತಿವೆ. ರೈತರಿಗೆ ಸಹಾಯ ಮಾಡುತ್ತೇವೆ ಎಂದು ಸಾಲ ಮನ್ನಾ ಮಾಡಿದ್ದಿರಿ ಆದರೆ ಇನ್ನೂವರೆಗೆ ಅದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಮಹದಾಯಿಗೆ ಸಂಭಂದಿಸಿದಂತೆ ಪ್ರತಿಸಲ ನಮಗೆ ಮೋಸ ವಾಗುತ್ತಿದೆ ನೀವು ನಮ್ಮನ್ನು ಉದ್ದರಿಸಬೇಕಿಲ್ಲ ನೀವು ಸೃಷ್ಟಿಸಿದ ಸಮಸ್ಯೆಗಳನ್ನು ಪರಿಹರಿಸಿ ಸಾಕು ಎಂದು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಕಾರ್ಯಕ್ರಮದಲ್ಲಿ ಆನಂದ ಮಾಡಲಗಿ, ನಿಂಗಪ್ಪ ಹೊನಕುಂಪಿ, ಬಾಳಪ್ಪ ತಳಸಿ, ನಿಂಗಪ್ಪ ನಂದಿ, ಬಸವರಾಜ ಡೊಂಗಲಗಾಂವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.