ಉತ್ತಮ ಸಮಾಜಕ್ಕಾಗಿ

JDSಗೆ ಬಾಬಾಗೌಡ ಪಾಟೀಲ, ಶಿವನಗೌಡ ಪಾಟೀಲ

Baba Gowda Patil, Shivanagowda Patil for JDS

0

ಬೆಂಗಳೂರು/ಬೆಳಗಾವಿ: (tarun kranti) ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಜನ ಕಾಂಗ್ರೆಸ್ ಮುಖಂಡರು, ಇಂದು ಬೆಂಗಳೂರಿನ ಜೆಡಿಎಸ್ ಕಾರ್ಯಾಲಯ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ಈ ಮುಖಂಡರು ಎಚ್. ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ತಾವು ಜೆಡಿಎಸ್ ಸೇರುತ್ತಿರುವುದಾಗಿ ತಿಳಿಸಿದರು.

JDSಗೆ ಬಾಬಾಗೌಡ ಪಾಟೀಲ, ಶಿವನಗೌಡ ಪಾಟೀಲ- Tarun krantiಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಮಾಜಿ ಎಪಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಮೇಳೆದ ಅವರ ಮುಂದಾಳತ್ವದಲ್ಲಿ ಬಡಾಲ ಅಂಕಲಗಿ ಗ್ರಾ. ಪಂ. ಅಧ್ಯಕ್ಷ ಅರ್ಜುನ ಅರ್ಜುನವಾಡಿ, ಹಾಲಗಿಮರಡಿ ಪಿಕೆಪಿಎಸ್ ಅಧ್ಯಕ್ಷ ದ್ಯಾಮನಗೌಡ ಪಾಟೀಲ ಹಾಗೂ ಹಿರೇಬಾಗೇವಾಡಿಯ ಯುವ ಮುಖಂಡರಾದ ಗೌಡಪ್ಪ ಹಾದೀಮನಿ, ಶಂಕರ ಶಿಂತ್ರಿ, ವಿಶಾಲ ಯಡೂರ, ಶಂಕರ ರೊಟ್ಟಿ, ಬೆಂಡಿಗೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಲಗೌಡ ಮೇಳೆದ, ಈರಣ್ಣ ಚಂಡು, ಸುರೇಶ ಗಜಪತಿ, ಹನುಮಂತಪ್ಪ ಅಲಾಬದಿ ಜತೆಗೆ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಕೂಡ ಪಕ್ಷವನ್ನು ಸೇರ್ಪಡೆಗೊಂಡರು.

ನಂದಿಹಳ್ಳಿ ಗ್ರಾ. ಪಂ. ಅಧ್ಯಕ್ಷ ಶಿವನಗೌಡ ಪಾಟೀಲ, ದರಿಗೌಡ ಪಾಟೀಲ, ನಾಗಯ್ಯಾ ಕಂಬಿ ಸೇರಿದಂತೆ 50 ಕ್ಕೂ ಅಧಿಕ ಮುಖಂಡರು ಪಕ್ಷ ಸೇರ್ಪಡೆಯಾದರು. ಜೆಡಿಎಸ್ ಮುಖಂಡರಾದ ಶ್ರೀಶೈಲ ಫಡಗಲ್, ಸಂತೋಷ ಕುಕಡೊಳ್ಳಿ, ಜಿಲ್ಲಾ ಯುವ ಅಧ್ಯಕ್ಷ ಸುಭಾಷ ಪೂಜೇರಿ, ಅಜರುದ್ದೀನ ಪನ್ನಾಲಗಢ, ವಿವೇಕ ಹಲಸಗಿ, ರಾಜು ರೊಟ್ಟಿ ಉಪಸ್ಥಿತರಿದ್ದರು.( belgaum)   Baba Gowda Patil, Shivanagowda Patil for JDS

Leave A Reply

 Click this button or press Ctrl+G to toggle between Kannada and English

Your email address will not be published.