ಉತ್ತಮ ಸಮಾಜಕ್ಕಾಗಿ

‘ಜಟಗಾ ಬಂಡಿ’ ಸವಾರಿ ಅನುಭವ ನೀಡುವ, ‘ಕಳಪೆ ಫಿನಿಶಿಂಗ್’ ಓವರಬ್ರಿಡ್ಜ್..!

'Bad Finishing' Overbridge ..!

0

ಬೆಳಗಾವಿ: (news belgaum)‘ಎಂಜಿನೀಯರಿಂಗ್’ ಕೌಶಲ್ಯ ಇಲ್ಲದ ಬ್ರಿಡ್ಜ್ ಎಂದು ಸಾರ್ವಜನಿಕರಿಂದ ವ್ಯಂಗ್ಯಕ್ಕೆ ಒಳಗಾಗಿದ್ದು ನಗರದ ಹಳೆ ಪಿಬಿ ರಸ್ತೆಯ ಓವರ್ ಬ್ರಿಡ್ಜ್. ಹೌದು ನಗರದ ಉತ್ತರ-ದಕ್ಷಿಣ ಜನಜೀವನ ಸಂಪರ್ಕಿಸುವ ಇತ್ತೀಚೆಗೆ ನಿರ್ಮಿಸಿದ ಎರಡನೇ ಮೇಲ್ಸೇತುವೆಗೆ ‘ಸಿವಿಲ್ ಎಂಜಿನೀಯರಿಂಗ್’ ತಂತ್ರಜ್ಞಾನ ಸ್ವಲ್ಪವಾದರೂ ತಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
‘ಜಟಗಾ ಬಂಡಿ’ ಸವಾರಿ ಅನುಭವ ನೀಡುವ ಈ ಸೇತುವೆ ಮೇಲೆ ಸಂಚರಿಸಿದ ಸಾರ್ವಜನಿಕರು ಮುಸಿಮುಸಿ ನಗುತ್ತಿದ್ದಾರೆ. ಮೇಲ್ಸೇತುವೆ ರಸ್ತೆ ಪಡಿಪಡಿಯಾಗಿದ್ದು ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಕಪಿಲೇಶ್ವರ ಓವರ್ ಬ್ರಿಡ್ಜ್ ಗೆ ಹೋಲಿಸಿದರೆ ಇತ್ತೀಚಿನ ಈ ಹೊಸ ಬ್ರಿಡ್ಜ್ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ ಎಂಬುವುದು ಶ್ರೀ ಸಾಮಾನ್ಯರ ಅನುಭವ. ಪಡಿಪಡಿ ಬ್ರಿಡ್ಜ್ ನಿರ್ಮಿಸಿದ್ದಲ್ಲದೇ ‘ಕಳಪೆ ಫಿನಿಶಿಂಗ್’ ಮಾಡಲಾಗಿದೆ. ಸೇತುವೆ ನಿರ್ಮಾಣ ಕಾರ್ಯದಲ್ಲಿ ಅನನುಭವಿಯಾದ ಗುತ್ತಿಗೆದಾರ ಈ ಬ್ರಿಡ್ಜ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸೇತುವೆ ಮೇಲಿನ ಸವಾರಿ ಸ್ಮೂತ್ ಅನುಭವ ನೀಡುವುದಿಲ್ಲ. ಅಸುರಕ್ಷಿತ ಸವಾರಿ ಭಾವನೆ ನೀಡುತ್ತದೆ. ಕಪಿಲೇಶ್ವರ ಸೇತುವೆಗೆ ಹೋಲಿಸಿದರೆ, ಈ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಜಾಗ ಲಭ್ಯವಿತ್ತು. ಕಾಟಾಚಾರದ ಕಳಪೆ ಮೇಲ್ಸೇತುವೆ ಎಂದು ಉದ್ಘಾಟನೆಗೂ ಮುನ್ನವೇ ಸಾರ್ವಜನಿಕರು ಮಾತನಾಡುತ್ತಿದ್ದು, ಜಿಲ್ಲಾಡಳಿತ ಏನು ಕ್ರಮ ವಹಿಸುತ್ತದೆ ಕಾಯ್ದು ನೋಡಬೇಕಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರತಿಕ್ರಿಯಿಸಿರುವ ದಕ್ಷಿಣ ಶಾಸಕ ಅಭಯ ಪಾಟೀಲ- ಸೇತುವೆ ರಸ್ತೆ ಕಾಮಗಾರಿ & ಫಿನಿಶಿಂಗ್ ಗುಣಮಟ್ಟದಿಂದ ಕೂಡಿಲ್ಲ ಎಂಬುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು & ಗುತ್ತಿಗೆದಾರನೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.’Bad Finishing’ Overbridge ..!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.