ಉತ್ತಮ ಸಮಾಜಕ್ಕಾಗಿ

ಬ್ಯಾಂಕ್ ಹಣಕ್ಕಾಗಿ ಪ್ರತಿಭಟನೆ

Bank protests for money

0

ಬೆಳಗಾವಿ: ಬ್ಯಾಂಕ್ ಹಣಕ್ಕಾಗಿ ಪ್ರತಿಭಟನೆ ಬೋಗಸ್ ಐಎಎಸ್, ಕೆಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ವಕೀಲ ಎಸ್. ವಿ. ಖಾನಗೌಡರ ಇಂದು ಆಕ್ರೋಶ ವ್ಯಕ್ತಪಡಿಸಿದರು. ಕೋಟಿಗಟ್ಟಲೆ ಜನರ ದುಡ್ಡು ನುಂಗಿದ ಶ್ರೀ ಸಂಗೊಳ್ಳಿ ರಾಯಣ್ಣ ಸಂಸ್ಥೆಯ ವಿರುದ್ಧ ಸರಕಾರದ ಅಧಿಕಾರಿ ವ್ಯವಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ. ವ್ಯವಸ್ಥೆ ಹದಗೆಡಲು ಅಧಿಕಾರಿ ವ್ಯವಸ್ಥೆಯೇ ನೇರ ಕಾರಣ ಎಂದರು. ಭಾರತೀಯ ಜಾಗೃತ ಮತದಾರರ ವೇದಿಕೆ ಹಾಗೂ ಠೇವಣಿದಾರರ ಸಂಘದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ಆರಂಭಿಸಿದರು.

ಮುಗ್ದ ಜನರು ಮೋಸಗಾರ ಹಣಕಾಸಿನ ಸಂಸ್ಥೆಗಳಲ್ಲಿ ಹಣ ಇಡದಂತೆ ತಡೆಯುವ ಪ್ರಮುಖ ಜವಾಬ್ದಾರಿ ಸರಕಾರದ ಸಹಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಮಾಡಿಲ್ಲ ಎಂದು ನ್ಯಾಯವಾದಿ ಖಾನಗೌಡರ ತೀಕ್ಷಣವಾಗಿ ಸಿವಿಲ್ ಸರ್ವೀಸ್ ಸೇವಾ ವರ್ಗವನ್ನು ತರಾಟೆಗೆ ತೆಗೆದುಕೊಂಡರು. ಲಕ್ಷಾಂತರ ಠೇವಣಿ ಇಟ್ಟು ಕೈ ಸುಟ್ಟುಕೊಂಡಿರುವ ಠೇವಣಿದಾರರ ಸಮಸ್ಯೆ ಬಗೆಹರಿಸಿ ಹಣ ಕೊಡಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂಬ ಆಶಾಭಾವವು ಸಹ ಅವರಲ್ಲಿತ್ತು.

Bank protests for money

80%
Awesome
  • Design

Leave A Reply

 Click this button or press Ctrl+G to toggle between Kannada and English

Your email address will not be published.