ಉತ್ತಮ ಸಮಾಜಕ್ಕಾಗಿ

ಬಸವ ವಸತಿ ಯೋಜನೆ: ಸ್ಥಗಿತಗೊಂಡ ಮನೆ ಪೂರ್ಣಗೊಳಿಸಲು ಸೆ.15 ಕೊನೆಯ ದಿನ

news belagavi

0

ಬೆಳಗಾವಿ:(news belgaum) 2015-16 ಮತ್ತು 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿ ಪ್ರಾಂಭವಾಗದೆ ಬ್ಲಾಕ್ ಆಗಿರುವ ಮನೆಗಳನ್ನು ಪ್ರಾಂಭಿಸಲು ಸೆಪ್ಟೆಂಬರ್ 5 ರಿಂದ 15 ರೊಳಗಾಗಿ ಮನೆಗಳ

ಬಸವ ವಸತಿ ಯೋಜನೆ:  ಸ್ಥಗಿತಗೊಂಡ ಮನೆ ಪೂರ್ಣಗೊಳಿಸಲು ಸೆ.15 ಕೊನೆಯ ದಿನ- Tarun kranti 1 ಬಸವ ವಸತಿ ಯೋಜನೆ:  ಸ್ಥಗಿತಗೊಂಡ ಮನೆ ಪೂರ್ಣಗೊಳಿಸಲು ಸೆ.15 ಕೊನೆಯ ದಿನ- Tarun kranti 2 ಬಸವ ವಸತಿ ಯೋಜನೆ:  ಸ್ಥಗಿತಗೊಂಡ ಮನೆ ಪೂರ್ಣಗೊಳಿಸಲು ಸೆ.15 ಕೊನೆಯ ದಿನ- Tarun kranti 3 ಬಸವ ವಸತಿ ಯೋಜನೆ:  ಸ್ಥಗಿತಗೊಂಡ ಮನೆ ಪೂರ್ಣಗೊಳಿಸಲು ಸೆ.15 ಕೊನೆಯ ದಿನ- Tarun kranti 4ತಳವಾಯವನ್ನು ಭೌತಿಕ ಪ್ರಗತಿಯನ್ನು ಇಂದಿರಾ ಮನೆ ಆ್ಯಪ್ ಮೂಲಕ ಜಿಪಿಎಸ್ ಮಾಡಿ ಆನ್‍ಲೈನ್‍ಗೆ ಅಪ್ಲೋಡ್ ಮಾಡಿ ಮನೆಗಳನ್ನು ಪೂರ್ಣಗೊಳಿಸುವದು.
ಫಲಾನುಭವಿಗಳು ಅನುಮೋದನೆ ಪಡೆಯುವ ಸಮಯದಲ್ಲಿ ನಿಗಮಕ್ಕೆ ಅಪ್ಲೋಡ್ ಮಾಡಲಾಗಿರುವ ಖಾಲಿ ನಿವೇಶನ ತಳಪಾಯವನ್ನು ನಿರ್ಮಿಸಿ ಜಿ.ಪಿ.ಎಸ್.ಗೆ ಅಳವಡಿಸುವುದು. ಒಂದು ವೇಳೆ ಈ ಖಾಲಿ ನಿವೇಶನ ಹಾಗೂ ತಳಪಾಯ ಜಿಪಿಎಸ್ ಹೊಂದಾಣಿಕೆಯಿಲ್ಲದಿದ್ದಲ್ಲಿ ಅಂತಹ ತಳಪಾಯ ಹಂತದ ಛಾಯಾಚಿತ್ರಗಳನ್ನು ಪರಿಗಣಿಸುವುದಿಲ್ಲ.ಒಂದು ವೇಳೆ ಮನೆಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಮನೆಗಳನ್ನು ಜಿ.ಪಿ.ಎಸ್.ಗೆ ಅಳವಡಿಸತಕ್ಕದ್ದಲ್ಲ.
ನಿಗದಿ ಪಡಿಸಿರುವ ದಿನಾಂಕ ದೊಳಗಾಗಿ ಪ್ರಾರಂಭವಾಗದೆ ಇರುವ ಎಲ್ಲಾ ಮನೆಗಳನ್ನು ಶಾಶ್ವತವಾಗಿ ರದ್ದು ಮಾಡಲಾಗುವದೆಂದು ನಿಗಮದ ನಿರ್ದೇಶನ ಮೇರೆಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ಇವರು 2015-16 ಮತ್ತು 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿ ಪ್ರಾರಂಭವಾಗದೆ ಇರುವ ಮನೆಗಳನ್ನು ಸೆಪ್ಟೆಂಬರ 15 ರೊಳಗಾಗಿ ಪ್ರಾರಂಭಿಸಿ ಕೊಳ್ಳುವಂತೆ ಜಿಲ್ಲಾ ಪಂಚಾಯತ ಬೆಳಗಾವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾ ರಾಮಚಂದ್ರನ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.