ಉತ್ತಮ ಸಮಾಜಕ್ಕಾಗಿ

ಬಸವ ಸಮಾಜ ಜನ ಜಾಗೃತಿ ಅಭಿಯಾನ ಆರ್.ಎಸ್.ದರ್ಗೆ ತಿಳಿಸಿದ್ದಾರೆ. Basavaswam Sangha Jan Awareness Campaign R.S.Darge

Basavaswam Sangha Jan Awareness Campaign told R.S.Darge

0

ಬೆಳಗಾವಿ:(tarun kranti) ಧರ್ಮ ಧ್ವಜ ಜಲಕ್ಕಾಗದವರಿಗೆ ಅಧಿಕಾರದಿಂದ ದೂರವಿಡಿ. ರಾಮ ರಾಜ್ಯದ ಬದಲು ಕಲ್ಯಾಣ ರಾಜ್ಯ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲು ಬಸವ ಸಮಾಜ ಜನ ಜಾಗೃತಿ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ತಿಳಿಸಿದ್ದಾರೆ.
ಬಸವ ಸಮಾಜ ಜನ ಜಾಗೃತಿ ಅಭಿಯಾನ ಆರ್.ಎಸ್.ದರ್ಗೆ ತಿಳಿಸಿದ್ದಾರೆ. Basavaswam Sangha Jan Awareness Campaign  R.S.Darge- Tarun krantiಭಾನುವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿರುವ, ಬಸವ ಧರ್ಮಕ್ಕೆ ಮೊದಲ ಬಲಿದಾನ ನೀಡಿದ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮರ ಸಮಾಧಿ ಸ್ಥಳದಿಂದ ಫೆಬ್ರುವರಿ 13 ರಂದು ಬೆಳಿಗ್ಗೆ 11 ಗಂಟೆಗೆ ಅಭಿಯಾನಕ್ಕೆ ಚಾಲನೆ ನೀಡಲಾಗುವದು ಎಂದು ತಿಳಿಸಿದರು.
ಲಿಂಗಾಯತ ಧರ್ಮ ಹೋರಾಟದ ಸಂದರ್ಭದಲ್ಲಿ ಸಂಘ ಪರಿವಾರದವರು, ಲಿಂಗಾಯತರು ಮತ್ತು ಲಿಂಗಾಯತ ಮಠಾಧೀಶರು ಶನಿ ಸಂತಾನರು ಎಂದು ಟೀಕಿಸಿರುವದು ಕೋಟಿ ಕೋಟಿ ಜನರ ಮನಸ್ಸಿಗೆ ಮರೆಯಲಾಗದ ನೋವಾಗಿದೆ. ಲಿಂಗಾಯತರು ಶನಿ ಸಂತಾನರಲ್ಲ. ಕೃಷಿ ಮೂಲದಿಂದ ಬಂದ ದಾಸೋಹಿಗಳು. ಹೊಲದ ರಾಶಿಯನ್ನು ಕೃಷಿ ಕಾಯಕ ಜೀವಿಗಳೊಂದಿಗೆ ಹಂಚಿತಿಂದ ಹೃದಯವಂತರು. ಬಸವ ಪರಂಪರೆಯ ಮಠಾಧೀಶರು ಶನಿ ಸಂತಾನರಲ್ಲ. ಗುಡಿ ಗುಂಡಾರಗಳನ್ನು ಕಟ್ಟಿ ದೇವರ ಭಯ ಹುಟ್ಟಿಸಿ ದಕ್ಷಿಣೆ ಕೇಳಿದವರಲ್ಲ. ಬದಲಿಗೆ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ, ಜಾತಿ ಬೇಧ ಇಲ್ಲದೆ ಸರ್ವ ಜನಾಂಗದ ಮಕ್ಕಳಿಗೆ ಪ್ರಸಾದ ಬಡಿಸಿ ಶಿಕ್ಷಣ ನೀಡಿದ ಮಾನವೀಯತೆಯ ಪ್ರತಿಕರು ಎಂದು ವಿಶ್ಲೇಷಿಸಿದರು.
ಬಿಜೆಪಿ ಮತ್ತು ಸಂಘ ಪರಿವಾರ ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಅಣಕಿಸುತ್ತಿದೆ. ಒಂದೆಡೆ ಲಿಂಗಾಯತರನ್ನು ಶನಿ ಸಂತಾನರು ಎಂದು ಜರಿದು ಮಾನಸಿಕ ಹಿಂಸೆ ನೀಡಿದರೆ, ಮತ್ತೊಂದೆಡೆ ದಲಿತರನ್ನು ಬೊಗಳುವ ನಾಯಿಗಳು ಎಂದು ನಿಂದಿಸಿ ದಲಿತ ಸಮುದಾಯವನ್ನು ಅಪಮಾನಿಸುವದು. ಇನ್ನೊಂದೆಡೆ ಕನ್ನಡ ಧ್ವಜವನ್ನು ವಿರೋಧಿಸುವದು. ಕನ್ನಡ ಹೋರಾಟಗಾರರನ್ನು ಏಜೆಂಟರೆಂದು ಆರೋಪಿಸುವ ಮೂಲಕ ಜನಪರ ಹೋರಾಟವನ್ನು ಅಪಮಾನಿಸುತ್ತಿದೆ. ರೈತ ಹೋರಾಟಗಾರರನ್ನೂ ಏಜೆಂಟರು ಎಂದು ಟೀಕಿಸುವ ಮೂಲಕ ಅನ್ನದಾತರನ್ನು ಅಪಮಾನಿಸಿದೆ.
ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಹತ್ಯೆಗಳ ಹೆಣದ ಮೇಲೆ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಇಳಿದಿದೆ. ಆ ಭಾಗದಲ್ಲಿ ನಡೆಯುತ್ತಿರುವ ಕೆಲ ಹತ್ಯೆಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಅಮಾನವೀಯತೆಯ ಎಲ್ಲಾ ಸೀಮೆಗಳನ್ನು ದಾಟಿದೆ. ವೈಚಾರಿಕ ಕ್ರಾಂತಿಯ ಈ ನೆಲದಲ್ಲಿ ವಿಪ್ಲವ ಸೃಷ್ಠಿಸುತ್ತಿದೆ. ಈ ಅಪಾಯಕಾರಿ ಬೆಳವಣಿಗೆಗಳಿಂದ ಈ ರಾಜ್ಯವನ್ನು ಉಳಿಸಬೇಕಾಗಿದೆ ಎಂದರು.
ಧರ್ಮ, ಧ್ವಜ, ಜಲ ಮತ್ತು ಜನಕ್ಕಾಗದವರನ್ನು ದೂರವಿಡಬೇಕಾಗಿದೆ. ಈ ದಿಸೆಯಲ್ಲಿ ಜಾಗೃತಿ ಅಭಿಯಾನ ಆರಂಭಿಸಲಾಗುತ್ತಿದೆ. ವಿಧಾನ ಸಭೆಯ ಚುನಾವಣೆಯವರೆಗೆ ಈ ಅಭಿಯಾನ ಮುಂದುವರೆಯಲಿದೆ. ಸಾಮಾಜಿಕ ಜಾಲತಾಣಗಳು, ಸಭೆಗಳು ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುವದು ಎಂದು ಅವರು ತಿಳಿಸಿದರು.Basavaswam Sangha Jan Awareness Campaign told R.S.Darge

(  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.