ಉತ್ತಮ ಸಮಾಜಕ್ಕಾಗಿ

ಕರಡಿ ದಾಳಿಗೀಡಾದ ದಿ. ಗಣಪತಿ ಕುಟುಂಬಕ್ಕೆ ಮಧ್ಯಂತರ ₹ 2ಲಕ್ಷ ಪರಿಹಾರ

Bear attacked The. Interim ₹ 2 lakh compensation for Ganapathi family

0

ಬೆಳಗಾವಿ:(news belgaum) ಬುಧವಾರ ಮಧ್ಯಾಹ್ನ ಕರಡಿ ದಾಳಿಗೆ ಬಲಿಯಾದ ಖಾನಾಪುರ ತಾಲೂಕು ಕೌಂದಲ ಗ್ರಾಮದ ರೈತನ ಕುಟುಂಬಕ್ಕೆ ಇಂದು ಮಧ್ಯಂತರ ₹2ಲಕ್ಷ ಪರಿಹಾರ ಇಲಾಖೆ ಒದಗಿಸಿದೆ. ಒಟ್ಟು ₹5 ಲಕ್ಷ ಪರಿಹಾರ ಬೆಳಗಾವಿ ಅರಣ್ಯ ವಿಭಾಗದಿಂದ ಒದಗಿಸಲಾಗುವುದು ಎಂದು ಖಾನಾಪುರ RFO ಎಸ್. ಎಸ್. ನಿಂಗಾನಿ ತಿಳಿಸಿದ್ದಾರೆ. ದಿ. ಗಣಪತಿ ಅಣ್ಣು ಪಾಟೀಲ ಪತ್ನಿ ರಾಮಕ್ಕ ಗಣಪತಿ ಪಾಟೀಲ ಅವರಿಗೆ ಪರಿಹಾರ ಇಂದು ಸಂಜೆ ಒದಗಿಸಲಾಯಿತು.
ಕಾದಾಟ:ಖಾನಾಪುರ ಅರಣ್ಯ ಪ್ರದೇಶದಲ್ಲಿ ಕರಡಿಗಳು ಹಗಲು ಹೊತ್ತಿನಲ್ಲಿ ಎಲ್ಲೆಂದರಲ್ಲಿ ತಿರುಗಾಡುತ್ತಿರುವ ಬಗ್ಗೆ ಅರಣ್ಯ ಸಿಬ್ಬಂಧಿ ಮುನ್ನೆಚ್ಚರಿಕೆ ಕೊಟ್ಟಾಗಲೂ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ದಿ‌ ಗಣಪತಿ ತನ್ನ ಹೊಲಕ್ಕೆ ಹೋಗಿದ್ದಾಗ ದಾಳಿ ಮಾಡಿದ ಕರಡಿ ಪರಚಿದೆ. ಕೂಗಾಟ ಚೀರಾಟ ಕೇಳಿದ ಸನೀಹದಲ್ಲಿದ್ದ ಜನತೆ ಮತ್ತು ಅರಣ್ಯ ಸಿಬ್ಬಂಧಿ ಧಾವಿಸಿ ಕರಡಿಯೊಂದಿಗೆ ಕಾದಾಟ ನಡೆಸಿದರು. ಘಟನೆಯಲ್ಲಿ DRFO ಶ್ರೀಧರ ಬಳಿಗಾರ, ಗಾರ್ಡ ರಾಜಕುಮಾರ & ವಾಚರ್ ಮಾರುತಿ ಗಾವಡೆ ಗಾಯಗೊಂಡಿದ್ದರು.

ಅಂತ್ಯಕ್ರಿಯೆ:ಚಿಕಿತ್ಸೆ ಫಲಕಾರಿಯಾಗದೇ ಮೃತ ಗಣಪತಿ ಅಂತ್ಯಕ್ರಿಯೆ ಇಂದು ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖ ಕೌಂದಲನಲ್ಲಿ ನಡೆಯಿತು. ಮಾಜಿ ಶಾಸಕ ಅರವಿಂದ ಪಾಟೀಲ, ಎಸಿಎಫ್ ಸಿ. ಬಿ. ಪಾಟೀಲ ಭಾಗವಹಿಸಿದರು.ಕರಡಿ ದಾಳಿಗೀಡಾದ ದಿ. ಗಣಪತಿ ಕುಟುಂಬಕ್ಕೆ ಮಧ್ಯಂತರ ₹ 2ಲಕ್ಷ ಪರಿಹಾರ- Tarun kranti 1
ಮನವಿ:ಕಾಡಿನಲ್ಲಿ ಪ್ರಾಣಿಗಳ ಕೆಲ ಆವಾಸ ಸ್ಥಾನಗಳು ಇರುತ್ತವೆ. ಅವುಗಳ ಬಳಿ ಯಾರೂ ಹೋಗಬಾರದು. ಕೀಟಳೆ ಪ್ರವೃತ್ತಿ ಜನರ ಕಾಟದಿಂದ ಬೇಸತ್ತ ಪ್ರಾಣಿಗಳು ಇನ್ಯಾರೋ ಅಮಾಯಕರ ಮೇಲೆ ತಮ್ಮ ಪ್ರಾಣಕ್ಕೆ ಅಂಜಿ ದಾಳಿ ಮಾಡುವ ಇಲ್ಲವೇ ಅನಾರೋಗ್ಯಕ್ಕೆ ಒಳಗಾದ ವನ್ಯಜೀವಿಗಳು ಹಠಾತ್ ದಾಳಿ ಮಾಡುತ್ತವೆ. ಆದ್ದರಿಂದ ಜನತೆ ಎಚ್ಚರವಾಗಿರಬೇಕು. ಕಾಡಂಚಿನ ಜನತೆಯಂತೂ ಅರಣ್ಯ ಇಲಾಖೆಯ ಸೂಚನೆಗಳನ್ನು ಚಾಚೂ ತಪ್ಪದೇ ಅನುಸರಿಸಬೇಕು ಎಂದು ಖಾನಾಪುರ RFO ಎಸ್. ಎಸ್. ನಿಂಗಾನಿ ಜನತೆಗೆ ಮನವಿ ಮಾಡಿದ್ದಾರೆ.Bear attacked The. Interim ₹ 2 lakh compensation for Ganapathi family

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.